Thursday , February 22 2018
Home / Film News / Tollywood / ಮೆಗಾಸ್ಟಾರ್ ಚಿರಂಜೀವಿ ತೆಲುಗಿನಲ್ಲಿ ನನಗಿರುವ ಏಕೈಕ ಆಪ್ತಮಿತ್ರ : ನಂದಮೂರಿ ಬಾಲಕೃಷ್ಣ

ಮೆಗಾಸ್ಟಾರ್ ಚಿರಂಜೀವಿ ತೆಲುಗಿನಲ್ಲಿ ನನಗಿರುವ ಏಕೈಕ ಆಪ್ತಮಿತ್ರ : ನಂದಮೂರಿ ಬಾಲಕೃಷ್ಣ

ಹೈದರಾಬಾದ್ : ಇಬ್ಬರು ಸ್ಟಾರ್‍ಗಳ ಅಭಿಮಾನಿಗಳ ನಡುವೆ ನಡೆಯುವ ಅಸಹ್ಯಕರ ಜಗಳಕ್ಕೆ ಟಾಲಿವುಡ್ ಫೇಮಸ್. ಪರಿಸ್ಥಿತಿ ಹೀಗಿರುವಾಗ ಇದೇ ಸಂಕ್ರಾಂತಿಗೆ ಇಬ್ಬರು ಬಿಗ್‍ಸ್ಟಾರ್‍ಗಳ ಚಿತ್ರ ರಿಲೀಸ್ ಆಗಿದೆ. ಒಂದು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಕೈದಿ ನಂಬರ್ 150 ಮತ್ತು ಇನ್ನೊಂದು ಬಾಲಕೃಷ್ಣ ಅಭಿನಯದ ಗೌತಮಿಪುತ್ರ ಶಾತಕರ್ಣಿ.

ಕೈದಿ ನಂಬರ್ 150ರ ಮೂಲಕ ಚಿರಂಜೀವಿ 9 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಎರಡೂ ಚಿತ್ರಗಳೂ ಒಂದು ದಿನ ಹಿಂದೆ ಮುಂದೆ ರಿಲೀಸ್ ಆಗಿವೆ. ಈ ಬಾಕ್ಸ್‍ಆಫೀಸ್ ಫೈಟ್‍ನ ನಡುವೆ ಬಾಲಕೃಷ್ಣ ಚಿರಂಜೀವಿ ಅಭಿನಯದ ಕೈದಿ ನಂಬರ್ 150ರ ಬಗ್ಗೆ ಮಾತನಾಡಿದ್ದಾರೆ.

`ನಾವು ಮೊದಲು ಸಂಕ್ರಾಂತಿಗೆ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಘೋಷಿಸಿದ್ದು. ನನ್ನ ಅಭಿಪ್ರಾಯದ ಪ್ರಕಾರ ಸ್ಪರ್ಧೆ ಯಾವತ್ತೂ ಒಳ್ಳೆಯದೇ. ಇದರಿಂದ ಇನ್ನಷ್ಟು ಪ್ರಾಮಾಣಿಕವಾಗಿ ಮತ್ತು ಶ್ರಮವಹಿಸಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಸಿನೆಮಾಗಳ ನಡುವೆ ಕಾಂಪಿಟೇಷನ್ ಇರುವುದು ಸಾಮಾನ್ಯ. ಆದರೆ, ಈ ಸ್ಪರ್ಧೆ ಆರೋಗ್ಯಕರವಾಗಿ ಇರಬೇಕು ಅಷ್ಟೇ. ವೈಯಕ್ತಿಕವಾಗಿ ಚಿರಂಜೀವಿ ನನ್ನ ಆಪ್ತಸ್ನೇಹಿತ. ಈ ಹಿಂದೆ ನಾನು ಚಿತ್ರರಂಗದ ಸ್ನೇಹಿತರನ್ನು ಭೇಟಿ ಆಗುತ್ತಿದೆ. ಈಗ ಅಷ್ಟು ಸಮಯ ಸಿಗುತ್ತಿಲ್ಲ. ಹೀಗಾಗಿ, ಚಿತ್ರರಂಗದ ಸ್ನೇಹಿತರನ್ನು ಸದಾ ಭೇಟಿಯಾಗಲು ಆಗುತ್ತಿಲ್ಲ. ಗೌತಮಪುತ್ರ ಶಾತಕರ್ಣಿ ಮತ್ತು ಕೈದಿ ನಂಬರ್ 150 ಚಿತ್ರಕ್ಕೆ ಒಳ್ಳೆಯ ಓಪನಿಂಗ್ಸ್ ಸಿಕ್ಕಿದೆ. ಎರಡು ಚಿತ್ರನೂ ಉತ್ತಮ ಗಳಿಕೆ ಕಾಣುತ್ತಿದೆ ಎಂದು ಬಾಲಕೃಷ್ಣ ಖುಷಿ ವ್ಯಕ್ತಪಡಿಸಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!