Monday , July 23 2018
ಕೇಳ್ರಪ್ಪೋ ಕೇಳಿ
Home / Sandalwood / ನನಗಿದು ಪುನರ್ಜನ್ಮ : ನಟಿ ಪಾರೂಲ್ ಯಾದವ್ ಮಾತು : ಕನ್ನಡದಲ್ಲೇ ಧನ್ಯವಾದ ಹೇಳಿದ ನಟಿ

ನನಗಿದು ಪುನರ್ಜನ್ಮ : ನಟಿ ಪಾರೂಲ್ ಯಾದವ್ ಮಾತು : ಕನ್ನಡದಲ್ಲೇ ಧನ್ಯವಾದ ಹೇಳಿದ ನಟಿ

ಮುಂಬೈ : ಸ್ಯಾಂಡಲ್‍ವುಡ್ ನಟಿ ಪಾರೂಲ್ ಯಾದವ್ ಮೇಲೆ ಮೊನ್ನೆ ಮುಂಬೈನಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದವು. ಈ ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಪಾರೂಲ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರೂಲ್ ಅಂದಿನ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.

ಸದ್ಯ ಪಾರೂಲ್ ತಲೆ, ಕೈ ಕಾಲುಗಳಿಗೆ ಸ್ಟಿಚ್ ಹಾಕಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಖ್ಯಾತ ಆಂಗ್ಲ ದೈನಿಕ `ಇಂಡಿಯನ್ ಎಕ್ಸ್‍ಪ್ರೆಸ್’ ಜೊತೆ ಮಾತನಾಡಿದ ಅವರು, ಇದು ನನಗೊಂದು ಪುನರ್ಜನ್ಮ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, ಇದು ಕೆಟ್ಟ ಸಮಯ ಎಂದೂ ಹೇಳಿಕೊಂಡಿದ್ದಾರೆ.

ಸಾಕುನಾಯಿ ಜೊತೆ ಬೆಳಗ್ಗೆ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ಪಾರೂಲ್ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಸುಮಾರು ಆರು ನಾಯಿಗಳು ಈ ದಾಳಿ ಮಾಡಿದ್ದರಿಂದ ಇವರು ತೀವ್ರವಾಗಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ
ಹೌಸ್ ಕೀಪಿಂಗ್ ಹುಡುಗ ಹಾಗೂ ಬಿಲ್ಡಿಂಗ್‍ನ ವಾಚ್ ಮ್ಯಾನ್ ಇವರನ್ನು ಕಾಪಾಡಿದ್ದರು.

ಇನ್ನು, ತನ್ನ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಪಾರೂಲ್ ಧನ್ಯವಾದ ಹೇಳಿದ್ದಾರೆ. ಟ್ವಿಟರ್‍ನಲ್ಲಿ ಕನ್ನಡದಲ್ಲೇ ಇವರು ಧನ್ಯವಾದವನ್ನು ತಿಳಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!