Saturday , January 19 2019
ಕೇಳ್ರಪ್ಪೋ ಕೇಳಿ
Home / News NOW / ಎಟಿಎಂನಲ್ಲಿ ಮಚ್ಚಿನಿಂದ ಹಲ್ಲೆ : ಮೂರು ವರ್ಷಗಳ ಬಳಿಕ ಆರೋಪಿ ಬಂಧನ : ಇಲ್ಲಿದೆ ವೀಡಿಯೋ

ಎಟಿಎಂನಲ್ಲಿ ಮಚ್ಚಿನಿಂದ ಹಲ್ಲೆ : ಮೂರು ವರ್ಷಗಳ ಬಳಿಕ ಆರೋಪಿ ಬಂಧನ : ಇಲ್ಲಿದೆ ವೀಡಿಯೋ

ಬೆಂಗಳೂರು : ಮೂರು ವರ್ಷಗಳ ಹಿಂದೆ ಬೆಂಗಳೂರಿನ ಕಾರ್ಪೋರೇಷನ್ ಬಳಿಯ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ನಡೆದಿದ್ದ ಮಹಿಳೆ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಮಧುಕರ ರೆಡ್ಡಿ ಎಂಬಾತನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಆದರೆ, ಹಲ್ಲೆ ಮಾಡಿದ್ದು ಈತನೇನಾ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲವಾದರೂ ಬೆಂಗಳೂರು ಪೊಲೀಸರು ಈತನ ವಿಚಾರಣೆ ನಡೆಸುತ್ತಿದ್ದಾರೆ.

2013ರ ನವೆಂಬರ್ 19ರಂದು ಬೆಳಿಗ್ಗೆ 7 ಗಂಟೆಯ ವೇಳೆಗೆ ಹಣ ಪಡೆಯಲು ಕಾರ್ಪೋರೇಷನ್ ಬ್ಯಾಂಕ್ ಎಟಿಎಂಗೆ ಬಂದಿದ್ದ ಜ್ಯೋತಿ ಉದಯ್ ಎಂಬುವವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದಾದ ಬಳಿಕ ಸುಮಾರು ಮುಕ್ಕಾಲು ಗಂಟೆ ಎಟಿಎಂ ಒಳಗೆ ರಕ್ತದ ಮಡುವಿನಲ್ಲಿ ಜ್ಯೋತಿ ಬಿದ್ದಿದ್ದರು. ಈ ವೇಳೆ, ಎಟಿಎಂನ ಹೊರಗೆ ರಕ್ತ ಹರಿದು ಬರುತ್ತಿರುವುದನ್ನು ಗಮನಿಸಿದ ಜನ ಎಟಿಎಂ ಶೆಟರ್ ಎತ್ತಿನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ಆದರೆ, ಈ ಪ್ರಕರಣ ಪೊಲೀಸರಿಗೂ ಸವಾಲಾಗಿತ್ತು. ಸಣ್ಣ ಸುಳಿವೂ ಸಿಗದಂತೆ ದುಷ್ಕರ್ಮಿ ಇಲ್ಲಿ ಈ ಕೃತ್ಯವೆಸಗಿದ್ದ. ಘಟನೆ ನಡೆದು ಇಷ್ಟು ದಿನ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸದೇ ಇರುವುದು ಟೀಕೆಗೆ ಗುರಿಯಾಗಿತ್ತು.

ಇನ್ನು, ಮದನಪಲ್ಲಿಯಲ್ಲಿ ಇತ್ತೀಚೆಗೆ ಇಂತಹದ್ದೇ ಘಟನೆ ನಡೆದಿತ್ತು. ಹೀಗಾಗಿ, ಮರೆತು ಹೋಗುವ ಸ್ಥಿತಿಯಲ್ಲಿದ್ದ ಬೆಂಗಳೂರಿನ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಬೆಂಗಳೂರಿನಲ್ಲಿ ಹಲ್ಲೆ ಮಾಡಿದ್ದ ಆರೋಪಿ ಮತ್ತು ಮದನಪಲ್ಲಿಯಲ್ಲಿ ಸಿಕ್ಕಿಬಿದ್ದ ಆರೋಪಿಯ ಚಹರೆ ಒಂದೇ ರೀತಿ ಇದ್ದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!