ಹೈದರಾಬಾದ್ : ಪವರ್ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ `ಕಟಮರಯುಡು’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಪವನ್ ಇಲ್ಲಿ ಜಬರ್ದಸ್ತ್ ಲುಕ್ನಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ಗ್ರಾಮದ ಮುಖಂಡನ ಗೆಟಪ್ನಲ್ಲಿ ಪವನ್ ಇಲ್ಲಿ ಮಿಂಚಿದ್ದಾರೆ.
ಆನ್ಲೈನ್ನಲ್ಲಿ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ಅಭಿಮಾನಿಗಳು ಇದನ್ನು ವೀಕ್ಷಿಸಿದ್ದಾರೆ. ತಮಿಳಿನ `ವೀರಂ’ ಚಿತ್ರದ ರಿಮೇಕ್ ಇದು. ಇಲ್ಲಿ ಶೃತಿ ಹಾಸನ್ ಪವನ್ ಕಲ್ಯಾಣ್ಗೆ ನಾಯಕಿ ಆಗಿದ್ದಾರೆ.