Monday , January 22 2018
Home / Sudina Special / `ಮಿನುಗು ದೀಪ’ದಲ್ಲಡಗಿದೆ ನಿಗೂಢ ರಹಸ್ಯ…! : ಇಲ್ಲಿದೆ ಬೆಚ್ಚಿ ಬೀಳಿಸುವ ಟ್ರೇಲರ್
Buy Bitcoin at CEX.IO

`ಮಿನುಗು ದೀಪ’ದಲ್ಲಡಗಿದೆ ನಿಗೂಢ ರಹಸ್ಯ…! : ಇಲ್ಲಿದೆ ಬೆಚ್ಚಿ ಬೀಳಿಸುವ ಟ್ರೇಲರ್

ಬೆಂಗಳೂರು : ಉತ್ಸಾಹಿ ಯುವಕರ ತಂಡವೊಂದು ದೊಡ್ಡ ನಿರೀಕ್ಷೆ ಇಟ್ಟುಕೊಂಡು ಕಿರುಚಿತ್ರವೊಂದನ್ನು ನಿರ್ಮಿಸಿದೆ. `ಡೆಸ್ಟಿನಿ ಆಫ್ ಡ್ರೀಮ್ಸ್’ ಎಂಬ ಸಂಸ್ಥೆಯಡಿ ಈ ಉತ್ಸಾಹಿಗಳು ತಮ್ಮ ಕನಸಿಗೆ ರೆಕ್ಕೆ ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಯ ಮೊದಲ ಕಿರುಚಿತ್ರ `ಮಿನುಗು ದೀಪ’ ಈಗ ಸಿದ್ಧವಾಗಿದೆ. ಈ ಕಿರುಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಾಕಷ್ಟು ಜನ ಈಗಾಗಲೇ ಈ ಟ್ರೇಲರ್ ವೀಕ್ಷಿಸಿ ಈ ತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ. `ಮಿನುಗು ದೀಪ’ಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತವರು ಭಂಡಾರಮನೆ ಲೋಹಿತ್ ಶೆಟ್ಟಿ. ಇನ್ನು, ಸುದರ್ಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಅಕ್ಷತಾ ಶೆಟ್ಟಿ, ಸ್ವಾತಿ ಶೆಟ್ಟಿ, ಬಸವರಾಜ್, ಶ್ರೀಕಾಂತ್, ರಾಕೇಶ್, ಪ್ರವೀಣ್ ಶೆಟ್ಟಿ ಮತ್ತು ಧನಂಜಯ್ ನಟಿಸಿದ್ದಾರೆ. ಉಜ್ವಲ್ ಗೌಡ ಸಂಕಲನ, ಸಿಧು ಛಾಯಾಗ್ರಹಣ, ರಾಘವೇಂದ್ರರ ಸಂಗೀತ ಚಿತ್ರಕ್ಕಿದೆ. ಇನ್ನು, ಧನಂಜಯ್ ಸಾಹಿತ್ಯ ಬರೆದು ಸಹ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಸಂಪೂರ್ಣ ಹೊಸಬರ ಪ್ರಯತ್ನವಾಗಿದ್ದು ಎಲ್ಲರೂ ಈ ಉತ್ಸಾಹಿಗಳನ್ನು ಬೆಂಬಲಿಸಬೇಕಾಗಿದೆ…

CEX.IO Bitcoin Exchange

About sudina

Check Also

ಆಪಲ್​ನ ಮೂರು ಹೊಸ ಐಫೋನ್​ಗಳ ಬೆಲೆ ಎಷ್ಟು..? ಭಾರತದಲ್ಲಿ ಯಾವಾಗ ಬಿಡುಗಡೆ…?

ನವದೆಹಲಿ : ಆಪಲ್​ ಹೊಸ ಫೋನ್​ಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಸುದ್ದಿಯನ್ನು ನೀವು ಕೇಳಿರಬಹುದು. ಮೂರು ಹೊಸ ನಮೂನೆಯ ಫೋನ್​​ಗಳನ್ನು ಆಪಲ್​ …

Leave a Reply

Your email address will not be published. Required fields are marked *

error: Content is protected !!