Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸಂಜಯ್ ದತ್ ವಿರುದ್ಧ ನೆರೆಮನೆಯವರಿಂದ ಪೊಲೀಸರಿಗೆ ದೂರು…! : ಯಾಕೆ ಗೊತ್ತಾ…?

ಸಂಜಯ್ ದತ್ ವಿರುದ್ಧ ನೆರೆಮನೆಯವರಿಂದ ಪೊಲೀಸರಿಗೆ ದೂರು…! : ಯಾಕೆ ಗೊತ್ತಾ…?

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ನೆರೆಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಜೋರು ಮ್ಯೂಸಿಕ್, ತಡರಾತ್ರಿ ಮನೆಯಲ್ಲಿ ನಡೆಯುವ ಪಾರ್ಟಿ, ಸದಾ ಗೌಜಿ ಗದ್ದಲ ಇವೆಲ್ಲಾ ದತ್‍ಗೆ ಸಂಕಷ್ಟ ತಂದೊಡ್ಡಿದೆ. ನೆರೆಮನೆಯ ಹಲವರು ಈಗ ದತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ 20 ದಿನಗಳಿಂದ ದತ್ ಮನೆಯಲ್ಲಿ ಗೌಜಿ ಗದ್ದಲ ಇನ್ನೂ ಜೋರಾಗಿಯೇ ಇದೆ. ಇದರಿಂದ ನೆರೆ ಮನೆಯವರು ನಿದ್ದೆಗೆಟ್ಟಿದ್ದಾರೆ. ಹೀಗಾಗಿ, ಎರಡು ಬಾರಿ ಪೊಲೀಸರು ದತ್ ಮನೆಗೆ ಬಂದು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಆದರೂ ದತ್ ಗದ್ದಲ ಕಡಿಮೆ ಆಗಿಲ್ಲವಂತೆ.

ಜನವರಿ 14ರಂದು ನೆರೆಮನೆಯವರು ಪೊಲೀಸರಿಗೆ ಒಂದು ದೂರು ನೀಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಮತ್ತೊಂದು ದೂರನ್ನು ಸ್ಥಳೀಯರು ಸಲ್ಲಿಸಿದ್ದಾರೆ. ಇದಲ್ಲದೆ, ಕಂಟ್ರೋಲ್ ರೂಮ್‍ಗೂ ಹಲವು ಬಾರಿ ದೂರನ್ನು ನೀಡಲಾಗಿದೆ. ಇದರಿಂದಲೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಅಲ್ಲಿನ ನಿವಾಸಿಗಳ ಸಂಘದ ಅಧ್ಯಕ್ಷರು ಖೇರ್ ಸ್ಟೇಷನ್‍ಗೆ ಕರೆ ಮಾಡಿ ಖುದ್ದು ಬಂದು ಪರಿಸ್ಥಿತಿ ಅವಲೋಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ತಡರಾತ್ರಿ 2 ಗಂಟೆ ತನಕ ಸದಾ ಪಾರ್ಟಿ ಮಾಡುವ ಕಾರಣಕ್ಕೆ ಈ ಹಿಂದೆಯೂ ಹಲವು ಬಾರಿ ನಿವಾಸಿಗಳ ಸಂಘ ದತ್‍ಗೆ ಎಚ್ಚರಿಕೆಯ ಸಂದೇಶ ಕಳುಹಿಸಿತ್ತು. ಆದರೆ, ಇವು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಂಜಯ್ ದತ್ ತಮ್ಮ ಪಾರ್ಟಿ, ಅಬ್ಬರದ ಸಂಗೀತವನ್ನು ಮುಂದುವರಿಸಿಕೊಂಡು ಹೋಗಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!