Wednesday , March 27 2019
ಕೇಳ್ರಪ್ಪೋ ಕೇಳಿ
Home / News NOW / ತಾಳಿಕಟ್ಟಬೇಕಾದ ಕೆಲವೇ ಕ್ಷಣಗಳ ಮುಂಚೆ ವರನಿಗೆ ಹೃದಯಾಘಾತ…!

ತಾಳಿಕಟ್ಟಬೇಕಾದ ಕೆಲವೇ ಕ್ಷಣಗಳ ಮುಂಚೆ ವರನಿಗೆ ಹೃದಯಾಘಾತ…!

ತುಮಕೂರು : ಇದೊಂದು ಯಾರೂ ನಿರೀಕ್ಷಿಸಿರದ ದುರ್ಘಟನೆ… ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಅಲ್ಲಿ ಸಂಭ್ರಮ ಮನೆ ಮಾಡಬೇಕಾಗಿತ್ತು. ಎಲ್ಲರೂ ಖುಷಿಯಿಂದ ಇರಬೇಕಾಗಿತ್ತು. ಆದರೆ, ಇಲ್ಲಿ ಆಗಿದ್ದು ಸರೀ ಉಲ್ಟಾ. ಸಂಭ್ರಮದ ಜಾಗದಲ್ಲಿ ಸೂತಕ. ಖುಷಿಯ ಜಾಗದಲ್ಲಿ ದುಃಖ…!

ಹೌದು. ತಾಳಿ ಕಟ್ಟಬೇಕಾದ ಕೆಲವೇ ಹೊತ್ತಿನ ಮುಂಚೆ ಯುವಕನೊಬ್ಬನ ಬಾಳಲ್ಲಿ ಯಮ ಕ್ರೂರವಾಗಿ ಆಟವಾಡಿದ್ದಾನೆ. ತಾಳಿ ಕಟ್ಟಬೇಕಾದ ಕೆಲವೇ ಕ್ಷಣಗಳ ಮುಂಚೆ ಯುವಕನಿಗೆ ಹೃದಯಾಘಾತವಾಗಿದೆ. ಪರಿಣಾಮ ಯುವಕ ಪ್ರಾಣಬಿಟ್ಟಿದ್ದಾರೆ. ತುಮಕೂರಿನ ಗವಿರಂಗ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ವಸಂತ್ ಕುಮಾರ್ ಮೃತ ವರ. ಗೌರಿಬಿದನೂರು ಮೂಲದ ವಸಂತ್ ಕುಮಾರ ವಿವಾಹ ಮಧುಗಿರಿ ತಾಲೂಕಿನ ಕುರುಬರಹಳ್ಳಿಯ ಯುವತಿಯೊಂದಿಗೆ ಇವತ್ತು ನಡೆಯಬೇಕಾಗಿತ್ತು. ಆದರೆ, ಈ ಸಂದರ್ಭದಲ್ಲಿ ಇಂತಹ ದುರ್ಘಟನೆ ಸಂಭವಿಸಿದೆ.

ವಧು ಮತ್ತು ವರ ವಸಂತ್ ಕುಮಾರ್ ಇಬ್ಬರೂ ಎಂಟೆಕ್ ಪದವೀಧರರಾಗಿದ್ದು, ನಿನ್ನೆ ಆರತಕ್ಷತೆ ಕೂಡಾ ಸಂಭ್ರಮದಿಂದ ನಡೆದಿದೆ. ಬೆಳಗಿನ ಜಾವ ವರ ವಸಂತಕುಮಾರ್ ಶೌಚಾಲಯಕ್ಕೆ ಹೋದಾಗ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಆಸ್ಪತ್ರೆಗೆ ಸೇರಿಸಿದರೂ ವಸಂತ್‍ಕುಮಾರ್ ಪ್ರಾಣಪಕ್ಷಿ ಉಳಿಯಲಿಲ್ಲ. ಈ ಘಟನೆಯಿಂದ ಎರಡೂ ಕುಟುಂಬದಲ್ಲೂ ಸೂತಕದ ಛಾಯೆ ಮನೆ ಮಾಡಿದೆ…

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!