Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಕೋಟಿ ಕೋಟಿ ಬಾಚಿದ ಕಿರಿಕ್ ಪಾರ್ಟಿ

ಕೋಟಿ ಕೋಟಿ ಬಾಚಿದ ಕಿರಿಕ್ ಪಾರ್ಟಿ

ಬೆಂಗಳೂರು : ರಕ್ಷಿತ್ ಶೆಟ್ಟಿ ನಿರ್ಮಾಣ ಮತ್ತು ನಟನೆಯ ಕಿರಿಕ್ ಪಾರ್ಟಿ ಯಶಸ್ಸಿನ ನಾಗಾಲೋಟದಲ್ಲಿ ಸಾಗುತ್ತಿದೆ. ಎಲ್ಲಾ ಕೇಂದ್ರಗಳಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದೆ. ಇದುವರೆಗೆ ಚಿತ್ರ ಸುಮಾರು 40 ಕೋಟಿ ಗಳಿಸಿದೆ.

ಇದರಲ್ಲಿ ಎಲ್ಲಾ ಲೆಕ್ಕ ಕಳೆದ 25 ಕೋಟಿಯಷ್ಟು ಲಾಭವನ್ನು ಚಿತ್ರ ತಂದಿದೆ. ಇನ್ನು, ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಇನ್ನಷ್ಟು ಗಳಿಕೆ ಮಾಡಲಿದ್ದು ಚಿತ್ರದ ಗಳಿಕೆಯ ಮೊತ್ತ ಸುಮಾರು 50 ಕೋಟಿ ಗಡಿ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಈ ನಡುವೆ, ಚಿತ್ರದ ಸ್ಯಾಟಲೈಟ್ ರೈಟ್ಸ್​ ಇನ್ನೂ ಸೇಲ್ ಆಗಿಲ್ಲ. ಈ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವುದನ್ನು ರಕ್ಷಿತ್ ಎದುರು ನೋಡುತ್ತಿದ್ದಾರೆ.

ಒಟ್ಟಿನಲ್ಲಿ ಕಿರಿಕ್ ಪಾರ್ಟಿ ಸ್ಯಾಂಡಲ್​ವುಡ್​ನಲ್ಲಿ ಹೊಸ ಭರವಸೆ ಮೂಡಿಸಿದೆ. ಅಲ್ಲದೆ, ವಿದೇಶದಲ್ಲೂ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!