Wednesday , March 27 2019
ಕೇಳ್ರಪ್ಪೋ ಕೇಳಿ
Home / Film News / Tollywood / ಬೇಲೂರು ದೇಗುಲದಲ್ಲಿ ಅಲ್ಲು ಅರ್ಜುನ್​ ಚಿತ್ರದ ಶೂಟಿಂಗ್​ : ಇಲ್ಲಿದೆ ವೀಡಿಯೋ

ಬೇಲೂರು ದೇಗುಲದಲ್ಲಿ ಅಲ್ಲು ಅರ್ಜುನ್​ ಚಿತ್ರದ ಶೂಟಿಂಗ್​ : ಇಲ್ಲಿದೆ ವೀಡಿಯೋ

ಹಾಸನ : ತೆಲುಗಿನ ಸ್ಟೈಲಿಶ್​ ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ‘ದೂವಾಡ ಜಗನ್ನಾಥಮ್​​​’ ಚಿತ್ರದ ಶೂಟಿಂಗ್ ಹಾಸನದ ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವ ದೇಗುಲದಲ್ಲಿ ನಡೆಯುತ್ತಿದೆ. ಅಪೂರ್ವ ಶಿಲ್ಪಕಲೆಯನ್ನು ಹೊಂದಿರುವ ಚೆನ್ನಕೇಶವ ದೇಗುಲದ ಸೊಬಗಿಗೆ ಮಾರು ಹೋದ ನಿರ್ದೇಶಕ ಹರೀಶ್​ ಶಂಕರ್​  ಚಿತ್ರೀಕರಣಕ್ಕೆ ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲು ಅರ್ಜುನ್​ಗೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ. ಈ ಚಿತ್ರವನ್ನು ದಿಲ್​​​ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಒಟ್ಟು ಏಳು ದಿನಗಳ ಕಾಲ ಇಲ್ಲಿ ಶೂಟಿಂಗ್ ನಡೆಯಲಿದೆ.

ಭಕ್ತರಿಗೆ ಕಿರಿಕಿರಿ ಆರೋಪ : ಇದೇ ವೇಳೆ, ಶೂಟಿಂಗ್​ನಿಂದ ಭಕ್ತರಿಗೆ ಕಿರಿಕಿರಿಯುಂಟಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಭಕ್ತರು ಮತ್ತು ಪ್ರವಾಸಿಗರಿಗೆ ಚಿತ್ರತಂಡ ದೇಗುಲ ಪ್ರವೇಶಿಸಲು ಅವಕಾಶ ನೀಡಿಲ್ಲ ಎಂದು ಕೆಲವರು ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಚಿತ್ರದ ನಿರ್ದೇಶಕರು ತಳ್ಳಿ ಹಾಕಿದ್ದಾರೆ. ದೇಗುಲದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ಕೂಡಾ ಭಕ್ತರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಕೇಂದ್ರ ಪುರಾತತ್ವ ಇಲಾಖೆಯ ಮುಖ್ಯಕಚೇರಿ ಇರುವ ದೆಹಲಿಯಿಂದಲೇ ಅನುಮತಿ ಪಡೆದಿದೆ. ಅಲ್ಲದೆ, ದಿನಕ್ಕೆ 50 ಸಾವಿರ ರೂಪಾಯಿಯಂತೆ ಹಣವನ್ನೂ ಪಾವತಿಸುತ್ತಿದೆ. ಆದರೆ, ಈ ಶೂಟಿಂಗ್ ವಿಚಾರ ಈಗ ಪರ  ವಿರೋಧ ಮಾತುಗಳು ಕೇಳಿ ಬರುತ್ತಿವೆ.

ಇನ್ನೊಂದ್ಕಡೆ, ವೈಷ್ಣವ ಸಂಪ್ರದಾಯದ ಈ ದೇಗುಲದಲ್ಲಿ ಶಿವನ ಮೂರ್ತಿ ಮತ್ತು ಶಿವಲಿಂಗ ಇಟ್ಟು ಚಿತ್ರೀಕರಣ ಮಾಡಿದ್ದಕ್ಕೂ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಎಲ್ಲಾ ದೇವರು ಒಬ್ಬರೇ ಎಂದು ನಿರ್ದೇಶಕರು ಹೇಳಿದ್ದಾರೆ…
 

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!