Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಪುಷ್ಪಕ ವಿಮಾನ ಚಿತ್ರದ ವಿರುದ್ಧ ದೂರು

ಪುಷ್ಪಕ ವಿಮಾನ ಚಿತ್ರದ ವಿರುದ್ಧ ದೂರು

ಬೆಂಗಳೂರು : ರಮೇಶ್​ ಅರವಿಂದ್ ಅವರ ನಟನೆಯ 100ನೇ ಚಿತ್ರ ಪುಷ್ಪಕ ವಿಮಾನ ಚಿತ್ರದ ವಿರುದ್ಧ ದೂರು ದಾಖಲಾಗಿದೆ. ರಿಮೇಕ್ ಹಕ್ಕು ಉಲ್ಲಂಘನೆ ಮಾಡಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ಕೊರಿಯಾ ಸಿನಿಮಾ ‘ಮಿರಾಕಲ್ ಇನ್ ಸೆಲ್ ನಂ.7’ ಚಿತ್ರದ ಕಥೆ ಕದ್ದು ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಮೂಲ ಚಿತ್ರದ ದೃಶ್ಯವನ್ನು ಈ ಚಿತ್ರದಲ್ಲಿ ಯಥಾವತ್​ ಆಗಿ ಚಿತ್ರೀಕರಿಸಲಾಗಿದೆ ಎಂದು ದೂರಲಾಗಿದೆ. ಕ್ರೋಸ್ ಪಿಕ್ಚರ್ಸ್ ಮತ್ತು ಕ್ರೋಸ್ ಟೆಲಿವಿಷನ್ ಈ ದೂರು ದಾಖಲಿಸಿದೆ.

ಕೊರಿಯನ್ ಮಿರಾಕಲ್ ಇನ್ ಸೆಲ್ ನಂ. 7 ಚಿತ್ರದ ರಿಮೇಕ್ ಹಕ್ಕನ್ನು ಕ್ರೋಸ್ ಪಿಕ್ಚರ್ಸ್ ಮತ್ತು ಕ್ರೋಸ್ ಟೆಲಿವಿಷನ್ ಇಂಡಿಯಾದ ಸಂಸ್ಥೆ ಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ, ಪುಷ್ಪಕ ವಿಮಾನ ಚಿತ್ರತಂಡ ಈ ಆರೋಪವನ್ನು ನಿರಾಕರಿಸಿದ್ದು, ಯಾವುದೇ ಚಿತ್ರ ಕದ್ದು ಈ ಚಿತ್ರ ನಿರ್ಮಾಣ ಮಾಡಿಲ್ಲ ಎಂದು ತಿಳಿಸಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!