Friday , April 20 2018
Home / News NOW / ರಂಗಸ್ಥಳದಲ್ಲೇ ಬದುಕಿನ ಆಟ ಮುಗಿಸಿದ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ : ಇಲ್ಲಿದೆ ವೀಡಿಯೋ

ರಂಗಸ್ಥಳದಲ್ಲೇ ಬದುಕಿನ ಆಟ ಮುಗಿಸಿದ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ : ಇಲ್ಲಿದೆ ವೀಡಿಯೋ

ಮಂಗಳೂರು: ಕಟೀಲು ಮೂರನೇ ಮೇಳದ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರು ರಂಗಸ್ಥಳದಲ್ಲಿ ಕುಣಿಯುತ್ತಲೇ ಇಹಲೋಕ ತ್ಯಜಿಸಿದ್ದಾರೆ. 63 ವರ್ಷದ ಗಂಗಯ್ಯ ಶೆಟ್ಟಿ ಅವರು ಬುಧವಾರ ಎಕ್ಕಾರು ದುರ್ಗಾನಗರದಲ್ಲಿ ನಡೆದ ಯತಕ್ಷಣದಲ್ಲಿ ಅರುಣಾಸುರನ ಪಾತ್ರ ನಿರ್ವಹಿಸುತ್ತಿದ್ದರು. ಈ ವೇಳೆ, ಕುಣಿಯುತ್ತಲೇ ಕುಸಿದು ಬಿದ್ದ ಗಂಗಯ್ಯ ಶೆಟ್ಟಿ ಅವರನ್ನು ತಕ್ಷಣ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಬೆಳ್ತಂಗಡಿಯ ಗೇರುಕಟ್ಟೆಯ ಅಮ್ಮು ಶೆಟ್ಟಿ ಮತ್ತು ಕಮಲಾ ದಂಪತಿ ಪುತ್ರನಾದ ಗಂಗಯ್ಯ ಶೆಟ್ಟಿ ಅವರು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ನಾಟ್ಯಾಭ್ಯಾಸ ಮಾಡಿದ್ದರು. 16ನೇ ವಯಸ್ಸಿಗೇ ಇವರು ಯಕ್ಷರಂಗಕ್ಕೆ ಕಾಲಿಟ್ಟಿದ್ದರು.

47 ವರ್ಷದಿಂದ ಕಟೀಲು ಮೇಳದಲ್ಲೇ ಸೇವೆ ಸಲ್ಲಿಸುತ್ತಿರುವ ಗಂಗಯ್ಯ ಶೆಟ್ಟಿ ಅವರು ಮಹಿಷಾಸುರ ಪಾತ್ರಕ್ಕೆ ಖ್ಯಾತಿ. ಆದರೆ, 15 ವರ್ಷದ ಹಿಂದೆ ಇವರಿಗೆ ಹೃದಯಾಘಾತವಾಗಿತ್ತು. ಆಗಿನಿಂದ ವೈದ್ಯರ ಸಲಹೆಯಂತೆ ಮಹಿಷಾಸುರ ಪಾತ್ರವನ್ನು ಇವರು ಮಾಡುತ್ತಿರಲಿಲ್ಲ.

ಬಣ್ಣದ ವೇಷದಿಂದ ಇವರು ಖ್ಯಾತರಾಗಿದ್ದರು. ಇಂತಹ ಮಹಾನ್​ ಕಲಾವಿದನ ಅಗಲಿಗೆ ಇಡೀ ಯಕ್ಷರಂಗ ಕಂಬನಿ ಮಿಡಿದಿದೆ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

error: Content is protected !!