Tuesday , April 23 2019
ಕೇಳ್ರಪ್ಪೋ ಕೇಳಿ
Home / Sandalwood / ನಾಳೆ ದರ್ಶನ್ 50ನೇ ಚಿತ್ರದ ಮುಹೂರ್ತ : ಗಮನ ಸೆಳೆದಿದೆ ಮಲ್ಟಿಸ್ಟಾರ್​ಗಳಿರುವ ಕುರುಕ್ಷೇತ್ರ

ನಾಳೆ ದರ್ಶನ್ 50ನೇ ಚಿತ್ರದ ಮುಹೂರ್ತ : ಗಮನ ಸೆಳೆದಿದೆ ಮಲ್ಟಿಸ್ಟಾರ್​ಗಳಿರುವ ಕುರುಕ್ಷೇತ್ರ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್​​​ ದರ್ಶನ್​​ 50ನೇ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಬಿಗ್​ಬಜೆಟ್​ ಚಿತ್ರದಲ್ಲಿ ದರ್ಶನ್​ ಕಾಣಿಸಿಕೊಳ್ಳಲಿದ್ದು, ಇದೊಂದು ಪೌರಾಣಿಕ ಚಿತ್ರವಾಗಲಿದೆ. ಇಷ್ಟು ದಿನ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕುರುಕ್ಷೇತ್ರ ಚಿತ್ರಕ್ಕೆ ಅಧಿಕೃತ ಚಾಲನೆ ದೊರೆಯುವ ಸಮಯ ಬಂದಿದೆ… ನಾಳೆ ಬೆಂಗಳೂರಿನ ಯಶವಂತಪುರ ಬಳಿ ಇರುವ ಪ್ರಭಾಕರ ಕೋರೆ ಕನ್ವೆಷನ್​ ಹಾಲ್​ನಲ್ಲಿ ಮುಹೂರ್ತ ನಡೆಯಲಿದೆ.

ಈ ಹಿಂದೆ ಸ್ವಾತಂತ್ರ್ಯ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಾಗಿ ದರ್ಶನ್​ ಮಿಂಚಿದ್ದರು… ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಕನ್ನಡಿಗರು ಫಿದಾ ಆಗಿದ್ದರು… ಇಷ್ಟು ದಿನ ದರ್ಶನ್​ ಮಾಡಿದ್ದ ಚಿತ್ರಗಳಿಗಿಂತ ಸಂಪೂರ್ಣ ಡಿಫ್ರೆಂಟ್​ ಆಗಿದ್ದ ಚಿತ್ರ ಇದಾಗಿತ್ತು… ಇದೀಗ ಮತ್ತೆ ಅದೇ ರೀತಿಯ ವಿಭಿನ್ನ ಚಿತ್ರದ ಮೂಲಕ ದರ್ಶನ್​ ಮಿಂಚಲಿದ್ದಾರೆ… ದರ್ಶನ್​ ಐವತ್ತನೇ ಚಿತ್ರದ ಹೆಸರು ಕುರುಕ್ಷೇತ್ರ…

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದ ನಾಗಣ್ಣ ಅವರೇ ಈ ಚಿತ್ರಕ್ಕೂ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ಮಹಾಭಾರತದ ಕಥಾ ಹಂದರವುಳ್ಳ ಐತಿಹಾಸಿಕ ಚಿತ್ರ ಇದು… ದರ್ಶನ್​ ಇಲ್ಲಿ ದುರ್ಯೋದನನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಈ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ… ಕನ್ನಡದ ಬಿಗ್​ ಬಜೆಟ್​ ಚಿತ್ರ ಇದು… ಸುಮಾರು 60 ಕೋಟಿಯಷ್ಟು ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ…

ಚಿತ್ರರಂಗ ಸ್ಟಾರ್​ ಕಲಾವಿದರನ್ನು ಈ ಚಿತ್ರದಲ್ಲಿ ಕಾಣಬಹುದು ಎಂಬುದು ಮತ್ತೊಂದು ವಿಶೇಷ. ಚಿತ್ರದ ಪ್ರಮುಖ ಪಾತ್ರ ದುರ್ಯೋಧನನಾಗಿ ದರ್ಶನ್​ ಕಾಣಿಸಿಕೊಂಡರೆ, ಶ್ರೀಕೃಷ್ಣದ ಪಾತ್ರದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಮಿಂಚಲಿದ್ದಾರೆ… ಇನ್ನು, ಭೀಷ್ಮಾಚಾರ್ಯರಾಗಿ ಅಂಬರೀಷ್​​, ಧೃತರಾಷ್ಟ್ರನಾಗಿ ಶ್ರೀನಾಥ್​​, ದ್ರೋಣನ ಪಾತ್ರದಲ್ಲಿ ಶ್ರೀನಿವಾಸಮೂರ್ತಿ, ಗಂಧರ್ವ ರಾಜನಾಗಿ ಅವಿನಾಶ್​, ಶಕುನಿಯಾಗಿ ರವಿಶಂಕರ್​, ಅರ್ಜುನನ ಪಾತ್ರದಲ್ಲಿ ಅರ್ಜುನ್ ಸರ್ಜಾ, ದ್ರೌಪದಿಯಾಗಿ ಸ್ನೇಹಾ, ನರ್ತಕಿಯಾಗಿ ಹರಿಪ್ರಿಯಾ, ರೆಜಿನಾ ಕಾಣಿಸಿಕೊಂಡಿದ್ದಾರೆ… ಇನ್ನು, ಕುಂತಿಯ ಪಾತ್ರದಲ್ಲಿ ಮಿಂಚಲಿರುವವರು ಹಿರಿಯ ನಟಿ ಲಕ್ಷ್ಮಿ… ಆರಂಭದಲ್ಲಿ ಸಾಯಿಕುಮಾರ್ ಶಕುನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇದ್ದರೂ ಈಗ ಆ ಪಾತ್ರ ಸಾಯಿ ಸಹೋದರ ರವಿಶಂಕರ್​ಗೆ ಲಭಿಸಿದ್ದು, ಸಾಯಿ ಕುಮಾರ್ ಬೇರೊಂದು ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಗೊತ್ತಾಗಿದೆ. ಮತ್ತೋರ್ವ ನಟ ಶಶಿಕುಮಾರ್​ ಧರ್ಮರಾಯನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮನ್ಯುವಿನ ಪಾತ್ರದಲ್ಲಿ ಮಿಂಚಲಿರುವವರು ನಿಖಿಲ್​ ಕುಮಾರ್​…

ಕರ್ಣನ ಪಾತ್ರಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​ ಅವರಿಗೂ ಆಫರ್ ಹೋಗಿತ್ತು. ಆದರೆ, ಡೇಟ್ಸ್​ ಸಮಸ್ಯೆಯಿಂದ ಶಿವರಾಜ್​ಕುಮಾರ್ ಈ ಅವಕಾಶವನ್ನು ತುಂಬಾ ಬೇಸರದಿಂದಲೇ ಕೈ ಬಿಟ್ಟಿದ್ದರು.

ಬಿಗ್​ ಬಜೆಟ್​ನ ಈ ಚಿತ್ರ ಸಂಪೂರ್ಣ ತ್ರಿಡಿ ತಂತ್ರಜ್ಞಾನದಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ… ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ… ಸೋಮವಾರ ಅಂದರೆ ಆಗಸ್ಟ್​ 7 ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ…

ಬಹಳ ವರ್ಷಗಳ ಬಳಿಕ ಕನ್ನಡದಲ್ಲಿ ಪೌರಾಣಿಕ ಚಿತ್ರವೊಂದು ಸೆಟ್ಟೇರುತ್ತಿದೆ. ಇದು ಕೂಡಾ ಕುರುಕ್ಷೇತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಅದೂ ಅಲ್ಲದೆ, ದರ್ಶನ್ ಅಭಿಮಾನಿಗಳಿಗಂತೂ ಇದು ಹಬ್ಬದ ಸಂಭ್ರಮವನ್ನೇ ತಂದಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!