Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / ಆಗಸ್ಟ್​ 23ಕ್ಕೆ ಪ್ರಿಯಾಮಣಿ ವಿವಾಹ…? : ಸರಳ ಮದುವೆಗೆ ನಿರ್ಧಾರ…?

ಆಗಸ್ಟ್​ 23ಕ್ಕೆ ಪ್ರಿಯಾಮಣಿ ವಿವಾಹ…? : ಸರಳ ಮದುವೆಗೆ ನಿರ್ಧಾರ…?

ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಮದುವೆಯ ಸಿದ್ಧತೆಯಲ್ಲಿದ್ದಾರಾ…? ಹೌದು ಎನ್ನುತ್ತಿದೆ ಒಂದಷ್ಟು ಮೂಲಗಳು… ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್​ 23ಕ್ಕೆ ಪ್ರಿಯಾಮಣಿ ಮದುವೆಯಾಗಲಿದ್ದಾರಂತೆ. ಕನ್ನಡತಿ ಪ್ರಿಯಾಮಣಿ ಪ್ರೀತಿಗೆ ಬಿದ್ದು ಬಹಳ ವರ್ಷವೇ ಆಗಿದೆ… ಪ್ರಿಯಾಮಣಿ ಪ್ರೀತಿಯ ಸುದ್ದಿ ಬಹಳ ಹಳೆಯದ್ದೇ… ಆದರೆ, ಈ ಪ್ರೀತಿ ಈಗ ಮದುವೆಯ ಮಟ್ಟಕ್ಕೆ ತಲುಪಿದೆ ಎಂಬುದು ಈಗ ಹೊಸ ಸುದ್ದಿ…

ಮುಸ್ತಾಫ ರಾಜ್​ ಪ್ರಿಯಾಮಣಿ ಬಾಳ ಸಂಗಾತಿಯಾಗಿ ಬರಲಿದ್ದಾರೆ. ಕಳೆದ ವರ್ಷದ ಮೇ 27ಕ್ಕೆ ಪ್ರಿಯಾಮಣಿ, ಮುಸ್ತಪಾ ನಿಶ್ಚಿತಾರ್ಥವೂ ನಡೆದಿತ್ತು. ಈಗ ಇದೇ ತಿಂಗಳ 23ಕ್ಕೆ ಇವರಿಬ್ಬರು ಸತಿಪತಿಗಳಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ, ತುಂಬಾ ಸರಳವಾಗಿ ದಾಂಪತ್ಯಕ್ಕೆ ಕಾಲಿಡಲು ಇವರು ನಿರ್ಧರಿಸಿದ್ದಾರಂತೆ. ರಿಜಿಸ್ಟರ್​ ಕಚೇರಿಯಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರಂತೆ ಎಂದು ಹೇಳಲಾಗುತ್ತಿದ್ದು, ಈ ವೇಳೆ ಮನೆಯವರು ಮತ್ತು ಆಪ್ತರಷ್ಟೇ ಹಾಜರಿರಲಿದ್ದಾರೆ.

ಆಗಸ್ಟ್​ 23 ರಂದು ಮದುವೆಯಾದ ಬಳಿಕ ಮರುದಿನ ಬೆಂಗಳೂರಿನಲ್ಲಿ ರಿಸೆಪ್ಶನ್​ ನಡೆಯಲಿದೆಯಂತೆ. ಈ ಸಮಾರಂಭದಲ್ಲಿ ದಕ್ಷಿಣ ಭಾರತದ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಿಯಾಮಣಿ ದಕ್ಷಿಣ ಭಾರತದ ಬೇಡಿಕೆಯ ನಟಿ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿರಪರಿಚಿತ ನಟಿ ಇವರು. ಶಾರೂಖ್ ಅಭಿನಯದ ಚೆನ್ನೈ ಎಕ್ಸ್​ಪ್ರೆಸ್​ನಲ್ಲೂ ಪ್ರಿಯಾಮಣಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇಂತಹ ಪ್ರಿಯಾಮಣಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವ ಸಂದರ್ಭದಲ್ಲಿಯೇ ಮುಸ್ತಾಫಾ ಅವರೊಂದಿಗೆ ಪ್ರೀತಿಗೆ ಬಿದ್ದಿದ್ದರು.  ಮುಸ್ತಫಾ ಇವೆಂಟ್​ ಮ್ಯಾನೇಜ್​ಮೆಂಟ್​ ಕಂಪೆನಿ ಇಟ್ಟುಕೊಂಡಿದ್ದು, ಸೆಲೆಬ್ರಿಟಿ ಕ್ರಿಕೆಟ್​ ಲೀಗ್ ಸಂದರ್ಭದಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದು. ಈ ಭೇಟಿ ಬಳಿಕ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೇಮವಾಗಿತ್ತು. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರ ಸಮ್ಮತಿಯ ಮುದ್ರೆ ಬಿದ್ದ ಬಳಿಕ ಇವರಿಬ್ಬರು ನಿಶ್ಚಿತಾರ್ಥದ ಉಂಗುರ ಬದಲಾಯಿಸಿಕೊಂಡಿದ್ದರು…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!