Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Bollywood / ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ

ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ

ಮುಂಬೈ : ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ನಟ ದಿಲೀಪ್​ ಕುಮಾರ್​​​ ಅಸ್ವಸ್ಥರಾಗಿದ್ದಾರೆ. ಸದ್ಯ ದಿಲೀಪ್ ಕುಮಾರ್​ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರದಿಂದ ಇವರು ಲೀಲಾವತಿ ಆಸ್ಪತ್ರೆಯಲ್ಲಿ ಇದ್ದು ಆರೋಗ್ಯ ಸ್ಥಿತಿ ಕೊಂಚ ಹದಗೆಟ್ಟಿದೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್​ ಕುಮಾರ್​ ಅವರನ್ನು ಬುಧವಾರ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲೀಪ್ ಅವರು ನಿರ್ಜಲೀಕರಣ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು, ಆದರೆ, ಆಸ್ಪತ್ರೆಗೆ ಸೇರಿದ ಬಳಿಕ ದಿಲೀಪ್ ಕುಮಾರ್ ಅವರ ಕಿಡ್ನಿ ಸಮಸ್ಯೆ ಕೂಡಾ ಉಲ್ಭಣಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯದ ಮಟ್ಟಿಗೆ ದಿಲೀಪ್ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ದಿಲೀಪ್​ ಕುಮಾರ್ ಬಾಲಿವುಡ್​ ಕಂಡ ಸ್ಫುರದ್ರೂಪಿ ಚೆಲುವ… ಬಣ್ಣದ ಲೋಕದಲ್ಲಿ ಎಂದೂ ಹೆಸರು ಕೆಡಿಸಿಕೊಳ್ಳದ ಸಜ್ಜನ ಇವರು… ದಿಲೀಪ್ ಅವರ ಮೂಲ ಹೆಸರು ಮಹಮ್ಮದ್ ಯೂಸುಫ್​ ಖಾನ್​​​.. ಹಾಗೆ ನೋಡಿದರೆ ಬಾಲಿವುಡ್​ನ ಮಿಂಚಿದ ಮೊದಲ ಖಾನ್ ಇವರು… ಆದರೆ, ಬಿ ಟೌನ್​ನಲ್ಲಿ ಮಹಮ್ಮದ್​ ಯೂಸುಫ್​ ಖಾನ್ ಎಂದು ಹೇಳಿದರೆ ಯಾರಿಗೂ ಗೊತ್ತಾಗೋದಿಲ್ಲ. ಅದೇ ನೀವು ದಿಲೀಪ್ ಕುಮಾರ್ ಎಂದು ಹೇಳಿದರೆ ತಟ್ಟನೆ ಸುಂದರ ಚಿತ್ರಗಳ ಸಾಲು ಕಣ್ಣ ಮುಂದೆ ಬಂದು ಹೋಗುತ್ತದೆ…

ತಮ್ಮ ಪಾತ್ರವೈವಿಧ್ಯ ಮತ್ತು ವಿಶಿಷ್ಟ ಮ್ಯಾನರಿಸಮ್ಮಿನಿಂದ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು ದಿಲೀಪ್ ಕುಮಾರ್​​. ತಮ್ಮ ಸಿನೆಮಾಗಳಲ್ಲಿ ವಾಸ್ತವಕತೆಯನ್ನು ತಂದವರಲ್ಲಿ ಕೂಡಾ ಇವರೊಬ್ಬರು. ವಾಸ್ತಕಕ್ಕೆ ಹತ್ತಿರವಾದ ಚಿತ್ರಗಳನ್ನೇ ಮಾಡಿ ಗೆದ್ದವರು ದಿಲೀಪ್​… ಇವರು ಸದಾ ಕಾಲಕ್ಕೂ ಸಲ್ಲುವಂತಹ ಸುಂದರ ನಟ… ಸಹಜಾಭಿನಯಕ್ಕೆ ಮತ್ತೊಂದು ಹೆಸರೇ ದಿಲೀಪ್​​.. ಸತ್ಯಜಿತ್​ ರೇ ಅವರಂತಹ ಮೇರು ನಿರ್ದೇಶಕರೇ ದಿಲೀಪ್​ ಕುಮಾರ್​ ಸಹಜಾಭಿನಯಕ್ಕೆ ಮನಸೋತಿದ್ದರು…

ಒಂಭತ್ತು ಫಿಲಂ ಫೇರ್​ ಪ್ರಶಸ್ತಿ ಪಡೆದು ಬೀಗಿದವರು ಈ ನಟ. ಅದೂ ಅಲ್ಲದೆ, ಫಿಲಂಫೇರ್​​ನ ಬೆಸ್ಟ್​ ಆಕ್ಟರ್​ ಅವಾರ್ಡ್​ ಪಡೆದ ಮೊದಲಿಗ ಕೂಡಾ ಇವರೇ… 1954ರಲ್ಲಿ ದಿಲೀಪ್​ ಅವರಿಗೆ ಮೊದಲ ಬಾರಿಗೆ ಉತ್ತಮ ನಟ ಪ್ರಶಸ್ತಿ ಸಿಕ್ಕಿತ್ತು… ಅತ್ಯಧಿಕ ಫಿಲಂಫೇರ್​ ಪ್ರಶಸ್ತಿ ಪಡೆದ ನಟ ಎಂಬ ದಾಖಲೆಯನ್ನು ಇನ್ನೂ ತಮ್ಮಲ್ಲಿಯೇ ಇಟ್ಟುಕೊಂಡಿರುವುದು ದಿಲೀಪ್ ಕುಮಾರ್ ಹೆಚ್ಚುಗಾರಿಕೆ… ವಿಮರ್ಶಾಕಾರರು ಇಂದಿಗೂ ದಿಲೀಪ್​ ಕುಮಾರ್ ಅವರನ್ನು ಗ್ರೇಟೆಸ್ಟ್​ ಆಕ್ಟರ್​ ಎಂದೇ ಕರೆಯುತ್ತಾರೆ.

ನಟನೆಯಿಂದಲೇ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೂ ಇವರು ಭಾಜನರಾಗಿದ್ದಾರೆ. 1991ರಲ್ಲಿ ಭಾರತ ಸರ್ಕಾರದ ಪದ್ಮವಿಭೂಷಣ ಗೌರವ, 1994ರಲ್ಲಿ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ, 2015ರಲ್ಲಿ ಪದ್ಮ ವಿಭೂಷಣ ಗೌರವ ಇವರ ಮುಡಿಗೇರಿದೆ. ಅಲ್ಲದೆ, 2000 ರಿಂದ 2006ರ ವರೆಗೆ ರಾಜ್ಯಸಭೆಗೆ ಕಾಂಗ್ರೆಸ್​ ಇವರನ್ನು ನಾಮನಿರ್ದೇಶನ ಕೂಡಾ ಮಾಡಿತ್ತು… ಇವಷ್ಟೇ ಅಲ್ಲದೆ, ಪಾಕಿಸ್ತಾನದ ಸರ್ಕಾರ ಕೂಡಾ 1997ರಲ್ಲಿ ಅಲ್ಲಿನ ಅತ್ಯುನ್ನತ ನಾಗರಿಕ ಗೌರವ ನಿಶಾನ್​ ಇ ಇಮ್ತಿಯಾಜ್​ ಗೌರವ ದಿಲೀಪ್​ ಕುಮಾರ್​ ಅವರಿಗೆ ನೀಡಿದೆ. ಇದು ದಿಲೀಪ್ ಕುಮಾರ್​ ಅವರ ಖ್ಯಾತಿ ಮತ್ತು ಸಹದೃಯತೆಗೆ ಸಾಕ್ಷಿ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!