Wednesday , March 27 2019
ಕೇಳ್ರಪ್ಪೋ ಕೇಳಿ
Home / Film News / Coastalwood / ಸಾಮಾಜಿಕ ಕಾರ್ಯಕ್ಕೆ ‘ಸೋಫಿಯಾ’ ಚಿತ್ರ ತಂಡದ ಕೊಡುಗೆ

ಸಾಮಾಜಿಕ ಕಾರ್ಯಕ್ಕೆ ‘ಸೋಫಿಯಾ’ ಚಿತ್ರ ತಂಡದ ಕೊಡುಗೆ

ಮಂಗಳೂರು : ಕೊಂಕಣಿ ಸಿನೆಮಾ ಲೋಕಕ್ಕೆ ಸೋಫಿಯಾ ಎಂಬ ಚಿತ್ರ ಉಸಿರು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50 ದಿನಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿರುವ ಈ ಚಿತ್ರ ವಿದೇಶದಲ್ಲೂ ಹೆಸರು ಮಾಡುತ್ತಿದೆ. ಬಾಕ್ಸ್​ ಆಫೀಸ್​ನಲ್ಲೂ ಚಿತ್ರದ ಕಲೆಕ್ಷನ್ ಚೆನ್ನಾಗಿದೆ. ವಿದೇಶದಲ್ಲೂ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ಅಲ್ಲೂ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದೆ. ಇತ್ತ, ಬೆಂಗಳೂರು, ಗೋವಾ, ಮುಂಬೈ, ಅರಬ್​ ರಾಷ್ಟ್ರಗಳಲ್ಲೂ ಈ ಚಿತ್ರ ಪ್ರದರ್ಶನ ಕಂಡಿದೆ,

ಈ ನಡುವೆ, ಇಸ್ರೇಲ್​​​​ನಲ್ಲಿ ಜುಲೈ 8 ರಂದು ಸೋಫಿಯಾ ಚಿತ್ರ ತೆರೆ ಕಂಡಿದ್ದು, ಇದರಿಂದ ಬಂದ ಹಣದಲ್ಲಿ ಒಂದಷ್ಟು ಭಾಗವನ್ನು ಚಿತ್ರತಂಡ ಉಡುಪಿಯ ಟ್ರಸ್ಟ್​ವೊಂದಕ್ಕೆ ಕೊಡುಗೆಯಾಗಿ ನೀಡಿದೆ. ಇತ್ತೀಚೆಗಷ್ಟೇ ಈ ಚಿತ್ರತಂಡ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಈ ಟ್ರಸ್ಟ್​​ಗೆ 50 ಸಾವಿರ ರೂಪಾಯಿ ಕೊಟ್ಟಿದೆ.

ಇನ್ನು, ಪ್ರೇಕ್ಷಕರ ಒತ್ತಾಯದ ಮೇರೆಗೆ ಮಂಗಳೂರಿನಲ್ಲಿ ಮತ್ತೊಂದು ಸಲ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ, ಚಿತ್ರದ ನಿರ್ಮಾಪಕರು ಇನ್ನೂ ರಿರಿಲೀಸ್​ನ ದಿನಾಂಕವನ್ನು ನಿಗದಿ ಮಾಡಿಲ್ಲ. ಜನೆಟ್​ ಪ್ರೊಡಕ್ಷನ್​​​ ಈ ಚಿತ್ರವನ್ನು ನಿರ್ಮಿಸಿದ್ದು, ಹ್ಯಾರಿ ಫೆರ್ನಾಂಡಿಸ್​ ನಿರ್ದೇಶನ ಮಾಡಿದ್ದಾರೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!