Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Kollywood / ದಿಗ್ಗಜರ ಸಮಾಗಮ… : ಒಂದೇ ಚಿತ್ರದಲ್ಲಿ ಕಮಲ್ ಹಾಸನ್- ಮೋಹನ್​ಲಾಲ್​…?

ದಿಗ್ಗಜರ ಸಮಾಗಮ… : ಒಂದೇ ಚಿತ್ರದಲ್ಲಿ ಕಮಲ್ ಹಾಸನ್- ಮೋಹನ್​ಲಾಲ್​…?

ಚೆನ್ನೈ : ದಕ್ಷಿಣ ಭಾರತದ ಸೂಪರ್ ಸ್ಟಾರ್​ಗಳಾದ ಕಮಲ್ ಹಾಸನ್ ಮತ್ತು ಮೋಹನ್ ಲಾಲ್ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರಾ…? ಹೀಗೊಂದು ಸುದ್ದಿ ಈಗ ಹಬ್ಬಿದೆ. ಮತ್ತು ಈ ರೀತಿ ಹಬ್ಬಿದ ಸುದ್ದಿಯೇ ನಿಜವಾಗಲಿ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ…

ಬಾಲಿವುಡ್​ನಲ್ಲಿ ಅಕ್ಷಯ್​​​ಕುಮಾರ್​ ಅಭಿನಯಿಸಿರುವ ಓ ಮೈ ಗಾಡ್​ ಚಿತ್ರದ ರಿಮೇಕ್​ನಲ್ಲಿ ಇವರಿಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗಿನ ಸುದ್ದಿ. ಹಿಂದಿಯಲ್ಲಿ ಅಕ್ಷಯ್​ ಕುಮಾರ್​ ನಿರ್ವಹಿಸಿದ ದೇವರ ಪಾತ್ರವನ್ನು ಮೋಹನ್​ಲಾಲ್ ಮಾಡಿದರೆ, ಪರೇಶ್​ ರಾವಲ್​ ಮಾಡಿದ್ದ ಸಾಮಾನ್ಯ ಪ್ರಜೆಯ ಪಾತ್ರದಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ, ಕಮಲ್ ಹಾಸನ್ ಅವರೇ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಲಿದ್ದಾರಂತೆ.

2009ರಲ್ಲಿ ಉನ್ನೈ ಪೋಲೆ ಒರುವನ್​ ಎಂಬ ಚಿತ್ರದಲ್ಲಿ ಈ ಇಬ್ಬರು ಸ್ಟಾರ್​ಗಳು ಒಟ್ಟಾಗಿ ಕಾಣಿಸಿಕೊಂಡಿದ್ದರು.

ಓ ಮೈ ಗಾಡ್​ ಚಿತ್ರ ಕನ್ನಡದಲ್ಲೂ ರಿಮೇಕ್ ಆಗಿತ್ತು. ಮುಕುಂದ ಮುರಾರಿ ಎಂಬ ಈ ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್ ಈ ಚಿತ್ರದಲ್ಲಿ ನಟಿಸಿದ್ದರು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!