Monday , October 22 2018
ಕೇಳ್ರಪ್ಪೋ ಕೇಳಿ
Home / Film News / Kollywood / ಬಿಗ್​ಬಾಸ್​​ನಿಂದ ಹೊರಗೆ ಹೋಗಲು ಸ್ವಿಮಿಂಗ್​ಪೂಲ್​ಗೆ ಹಾರಿದ ನಟಿ…!

ಬಿಗ್​ಬಾಸ್​​ನಿಂದ ಹೊರಗೆ ಹೋಗಲು ಸ್ವಿಮಿಂಗ್​ಪೂಲ್​ಗೆ ಹಾರಿದ ನಟಿ…!

ಚೆನ್ನೈ : ತಮಿಳುನಾಡಿನಲ್ಲಿ ಈಗ ಬಿಗ್​ಬಾಸ್​ ರಿಯಾಲಿಟಿ ಶೋ ಸಖತ್​ ಸೌಂಡ್ ಮಾಡುತ್ತಿದೆ. ಪರ ವಿರೋಧ ಅಭಿಪ್ರಾಯದ ನಡುವೆಯೂ ಬಿಗ್​ಬಾಸ್​ ಶೋ ವೀಕ್ಷಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಈ ಶೋನಿಂದ ಸಂಸ್ಕೃತಿ ಹಾಳಾಗುತ್ತಿದೆ ಎಂಬ ಕೂಗೂ ಕೂಡಾ ಇದೆ… ಈ ನಡುವೆ, ಮನೆಯೊಳಗೆ ಸಂಭವಿಸುವ ಕೆಲವೊಂದು ಘಟನೆಗಳು ಏನೇನು ತಿರುವು ಪಡೆದುಕೊಳ್ಳುತ್ತಿದೆ…

ಅದರಲ್ಲೂ ಮನೆಯೊಳಗೆ ಇದ್ದ ನಟಿ ಓವಿಯಾ ಮತ್ತು ಅರವ್ ಸಂಬಂಧ ಬೇರೊಂದು ಮಟ್ಟಕ್ಕೆ ಹೋಗಿ ಕೊನೆಗೆ ಓವಿಯಾ ಬಿಗ್​ಬಾಸ್​ ಮನೆ ಬಿಟ್ಟೇ ಹೊರ ನಡೆದಿದ್ದಾರೆ. ಮೊದಲ ವಾರದಲ್ಲೇ ನಟಿ ಓವಿಯಾ ಆರವ್​​ ಎದುರು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆದರೆ, ಆರವ್ ಎಲ್ಲರೊಂದಿಗೆ ಇರುವಂತೆ ಓವಿಯಾ ಜೊತೆ ಕೂಡಾ ಇದ್ದರು. ಈ ನಡುವೆ, ಪ್ರೀತಿಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ಓವಿಯಾ ಪದೇ ಪದೇ ಆರವ್ ಹಿಂದೆ ಹೋಗಲು ಶುರು ಮಾಡಿದ್ದರು. ಇದು ಆರವ್​ಗೆ ಪಿಕಲಾಟ ತಂದಿತ್ತು. ಈ ನಡುವೆ, ಇಬ್ಬರ ನಡುವೆ ಇದ್ದ ಗೊಂದಲವನ್ನು ಪರಿಹರಿಸುವ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದವರು ಇನ್ನೋರ್ವ ಸ್ಫರ್ಧಿ ಸ್ನೇಹನ್​…

ಸ್ನೇಹನ್ ಪ್ರತ್ಯೇಕವಾಗಿ ಇಬ್ಬರೊಂದಿಗೆ ಮಾತನಾಡಿದ್ದರು. ಈ ವೇಳೆ, ಓವಿಯಾ ಪ್ರೀತಿಯ ಬಗ್ಗೆ ಹೇಳಿದರೆ, ಆರವ್​ ಓವಿಯಾ ನನಗೆ ಒಳ್ಳೆಯ ಸ್ನೇಹಿತೆ ಎಂದು ಹೇಳಿದರು. ಆರವ್​ ಅಭಿಪ್ರಾಯವನ್ನು ಸ್ನೇಹನ್​ ಓವಿಯಾ ಮುಂದೆ ಹೇಳಿದ್ದರು. ಆ ಕ್ಷಣಕ್ಕೆ ಓವಿಯಾ ಕೂಡಾ ಇದನ್ನು ಒಪ್ಪಿಕೊಂಡಿದ್ದರು. ಇಲ್ಲಿಗೇ ಈ ಪ್ರಕರಣ ಬಹುತೇಕ ಮುಗೀತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಸಮಸ್ಯೆ ಶುರುವಾಗಿದ್ದೇ ನಂತರ…

ಪ್ರೀತಿಯ ವಿಷಯದಲ್ಲಿ ಮನಸ್ಸು ಕೆಡಿಸಿಕೊಂಡಿದ್ದ ಓವಿಯಾ ಎರಡು ದಿನ ಮನೆಯಲ್ಲಿ ಒಬ್ಬಂಟಿಯಾಗಿಯೇ ಇರುತ್ತಿದ್ದರು. ಮಾನಸಿಕವಾಗಿ ತೊಳಲಾಡುತ್ತಿದ್ದ ಇವರು ರಿಯಾಲಿಟಿ ಶೋನಿಂದ ಹೊರಹೋಗಲು ಬಯಸಿದ್ದರು. ಇದಕ್ಕಾಗಿ ಬಿಗ್​ಬಾಸ್ ಗಮನ ಸೆಳೆಯಲು ಓವಿಯಾ ಮಾಡಿದ್ದ ತಂತ್ರವೇ ಸ್ವಿಮ್ಮಿಂಗ್ ಪೂಲ್​ಗೆ ಹಾರೋದು…

ಮೂಗನ್ನು ಬಿಗಿ ಹಿಡಿದು ಸ್ವಿಮ್ಮಿಂಗ್ ಪೂಲ್​ಗೆ ಹಾರಿದ್ದರು. ಇದನ್ನು ಕಿಚನ್​ನಲ್ಲಿದ್ದ ಆರವ್​ ಕಂಡು ಎಲ್ಲರಿಗೂ ತಿಳಿಸಿದರು. ತಕ್ಷಣ ಮನೆಯವರು ಓವಿಯಾರನ್ನು ಮೇಲಕ್ಕೆ ಎತ್ತಿದರು. ಇದಾದ ಬಳಿಕ ನಡೆದ ಸ್ವಲ್ಪ ಹೊತ್ತು ಮನೆಯೊಳಗಿದ್ದ ಓವಿಯಾರನ್ನು ಅವರ ಇಚ್ಛೆಯಂತೆ ಬಿಗ್​​ಬಾಸ್ ಆಯೋಜಕರು ಮನೆಗೆ ಕಳುಹಿಸಿದ್ದಾರೆ. ಮಾನಸಿಕವಾಗಿ ಸಂಕಟಪಡುತ್ತಿದ್ದ ಕಾರಣ ತನಗೆ ವೈದ್ಯರ ಸಲಹೆಯ ಅಗತ್ಯ ಇದೆ ಎಂದು ಓವಿಯಾ ಕೇಳಿಕೊಂಡಿದ್ದರಿಂದ ರಿಯಾಲಿಟಿ ಶೋ ಆಯೋಜಕರು ಈ ಕ್ರಮ ಕೈಗೊಂಡಿದ್ದಾರೆ.

ಆದರೆ, ಓವಿಯಾ ತಮಿಳುನಾಡಿನಲ್ಲಿ ಮನೆ ಮಾತಾಗಿದ್ದರು. ಇಷ್ಟು ದಿನ ಪ್ರತೀ ವಾರ ಓವಿಯಾ ನಾಮಿನೇಟ್ ಆಗುತ್ತಿದ್ದರೂ ಇವರಿಗೆ ಅತೀ ಹೆಚ್ಚು ಓಟುಗಳು ಬಿದ್ದಿದ್ದವು. ಇವರನ್ನು ರಕ್ಷಿಸುವ ಸಲುವಾಗಿ ಓವಿಯಾ ಆರ್ಮಿ ಕೂಡಾ ರಚನೆಯಾಗಿತ್ತು. ಸೇವ್ ಓವಿಯಾ ಎಂಬ ಕ್ಯಾಂಪೇನ್ ಕೂಡಾ ಶುರುವಾಗಿತ್ತು. ಸಿನಿಲೋಕದ ಸ್ಟಾರ್​ಗಳೆಲ್ಲಾ ಓವಿಯಾ ಬೆನ್ನಿಗೆ ನಿಂತಿದ್ದರು. ಈಗ ಓವಿಯಾ ಶೋ ಬಿಟ್ಟು ಹೋಗಿರುವುದು ಇವರಿಗೆಲ್ಲಾ ತುಂಬಾ ನಿರಾಸೆ ತಂದಿದೆ.

ಆರಂಭದಿಂದಲೂ ತಮಿಳುನಾಡಿನಲ್ಲಿ ಬಿಗ್​ಬಾಸ್ ಶೋ ವಿವಾದದ ಕೇಂದ್ರ ಬಿಂದುವಾಗಿತ್ತು. ಈ ನಡುವೆ, ಭರಣಿ ಎಂಬ ಸ್ಫರ್ಧಿ ಬಿಗ್​ಬಾಸ್ ಮನೆಯ ಫಿನ್ಸಿಂಗ್ ಹಾರಿ ಹೊರಗೆ ಹೋಗಿದ್ದರು. ಇತ್ತೀಚೆಗಷ್ಟೇ ಪ್ಲಂಬಿಕ್ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಇಲ್ಲಿ ಮೃತಪಟ್ಟಿದ್ದರು. ಈಗ ಓವಿಯಾ ವಿವಾದ ಬಿಗ್​ಬಾಸ್​​ ರಿಯಾಲಿಟಿ ಶೋಗೆ ಒಂದು ಮೈನಸ್ ಆಗಿದೆ ಎಂದರೂ ತಪ್ಪಿಲ್ಲ…

ಈ ಓವಿಯಾ ಕನ್ನಡದಲ್ಲೂ ನಟಿಸಿದ್ದರು. ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದವರು ಇದೇ ಓವಿಯಾ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!