Monday , June 25 2018
ಕೇಳ್ರಪ್ಪೋ ಕೇಳಿ
Home / News NOW / ಮನೆ ಕಳ್ಳತನಕ್ಕೆ ಗೂಬೆ ಬಳಕೆ…!

ಮನೆ ಕಳ್ಳತನಕ್ಕೆ ಗೂಬೆ ಬಳಕೆ…!

ಬೆಂಗಳೂರು : ಖತರ್ನಾಕ್​ಗಳು ಹೇಗೆಲ್ಲಾ ಪ್ಲಾನ್​ ಮಾಡುತ್ತಾರೆ ಎಂದು ಹೇಳುವುದಕ್ಕೆಯೇ ಆಗುವುದಿಲ್ಲ. ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಕೇಳಿದರೆ ನಿಮಗೆ ಹೀಗೆ ಅನಿಸಿದರೂ ಅಚ್ಚರಿ ಇಲ್ಲ. ಬರೀ ಗೂಬೆಯನ್ನು ಇಟ್ಟುಕೊಂಡು ವಂಚನೆ, ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಒಂದು ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದೆ.

ಕಾಟನ್​ಪೇಟೆಯಲ್ಲಿ ನಡೆದ ಘಟನೆ ಇದು. ಹಣವಂತರನ್ನೇ ಟಾರ್ಗೆಟ್ ಮಾಡಿಕೊಂಡು ಈ ತಂಡ ಇಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಕಾಡಿನಲ್ಲಿ ಗೂಬೆಗಳನ್ನು ಹಿಡಿದುಕೊಂಡು ಬಂದು ತಾವು ಗೊತ್ತು ಮಾಡಿದ ಮನೆಗೆ ಈ ತಂಡ ಗೂಬೆಗಳನ್ನು ಬಿಡುತ್ತಿತ್ತು. ಬಳಿಕ ಇವರೇ ಅದೇ ಮನೆಗೆ ಹೋಗಿ ನಿಮ್ಮ ಮನೆಯೊಳಗೆ ಗೂಬೆ ಬಂದಿದೆ. ಇದು ಅನಿಷ್ಟ. ಹೀಗಾಗಿ, ಬೇಗ ಮನೆ ಖಾಲಿ ಮಾಡಿ, ಇಲ್ಲದಿದ್ದರೆ ದೇಗುಲಕ್ಕೆ ಹೋಗಿ ಬನ್ನಿ ಎಂದು ಹೇಳಿ ಇದೇ ತಂಡ ಮನೆಯವರನ್ನು ಕಳುಹಿಸಿಕೊಡುತ್ತಿತ್ತು.

ಈ ವಂಚಕರ ಮಾತನ್ನು ಕೇಳಿ ಕೆಲವರು ಮನೆ ಖಾಲಿ ಮಾಡಿ ಹೋದರೆ, ಇನ್ನು ಕೆಲವರು ದೇಗುಲಕ್ಕೆ ಹೋಗಿ ಪೂಜೆ ಮಾಡಿಸುತ್ತಿದ್ದರು. ಆದರೆ, ಹೀಗೆ ಇವರೆಲ್ಲಾ ಮನೆ ಬಿಟ್ಟು ಹೋದ ಸಂದರ್ಭದಲ್ಲಿ ರಾತ್ರೋರಾತ್ರಿ ಈ ಮನೆಗೆ ನುಗ್ಗುವ ಈ ಗ್ಯಾಂಗ್​​ ಅಲ್ಲಿ ಸಿಕ್ಕಿದ್ದನ್ನೆಲ್ಲಾ ದೋಚಿ ಪರಾರಿಯಾಗುತ್ತಿತ್ತು. ಅದೂ ಅಲ್ಲದೆ, ಇದೇ ಗ್ಯಾಂಗ್​​ ಇದೇ ಉಪಾಯ ಬಳಸಿ ಹಲವರ ಮನೆ ಬಿಡಿಸಿದೆ. ಜೊತೆಗೆ ಕಡಿಮೆ ಬೆಳೆಗೆ ಮನೆ ಮಾರಾಟ ಮಾಡುವಂತೆ ಮಾಡಿ ದುಡ್ಡು ಗಳಿಸಿದೆ..

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸಿಐಡಿ ಅರಣ್ಯ ಇಲಾಖೆಯವರು ಐದು ಜನರನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದೆ. ಬಂಧಿತರಲ್ಲಿ ಓರ್ವ ಟೆಕ್ಕಿ ಕೂಡಾ ಸೇರಿದ್ದಾನೆ. ಟೆಕ್ಕಿಯ ಹೆಸರು ಮನಮೋಹನ್​ ಎಂದು ಹೇಳಲಾಗುತ್ತಿದೆ. ಬಾಕಿ ಉಳಿದ ಆರೋಪಿಗಳನ್ನು ಮುದೀರ್, ಬಶೀತ್​, ಸಲೀಂ, ಜುಬೇರ್ ಎಂದು ಗುರುತಿಸಲಾಗಿದೆ. ಸಿಐಡಿ ಡಿವೈಎಸ್ಪಿ ಬಲರಾಮೆಗೌಡ ಮಾರ್ಗದರ್ಶನದಲ್ಲಿ ಪಿಎಸ್ಐ ನರೇಂದ್ರಾಬಾಬು ತಂಡದಿಂದ ಈ ಕಾರ್ಯಾಚರಣೆ ನಡೆದಿದೆ. ಜೊತೆಗೆ, ಕಾಟನ್ ಪೇಟೆ ಮುಖ್ಯ ರಸ್ತೆಯಲ್ಲಿ ಸಾಕಿದ್ದ ಗೂಬೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.

About sudina

Check Also

ಬಂಟ್ವಾಳ : ತಾಲೂಕಿನ ವಿವಿಧ ಸುದ್ದಿಗಳ ಒಂದು ನೋಟ

ರೈಲಿನಡಿಗೆ ಬಿದ್ದು ಸಾವು : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ …

Leave a Reply

Your email address will not be published. Required fields are marked *

error: Content is protected !!