Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Tollywood / ಐಟಂ ಸಾಂಗ್​ಗೆ ಅನುಷ್ಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ…?

ಐಟಂ ಸಾಂಗ್​ಗೆ ಅನುಷ್ಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ…?

ಚೆನ್ನೈ : ದಕ್ಷಿಣ ಭಾರತದ ಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಸಂಭಾವನೆ ಎಷ್ಟು…? ಬಾಹುಬಲಿ ಸಕ್ಸಸ್​ ಬಳಿಕ ಅನುಷ್ಕಾ ತನ್ನ ಸಂಭಾವನೆ ಏರಿಸಿಕೊಂಡಿದ್ದಾರೆ ಎಂಬ ಮಾತಿತ್ತು. ಈ ಮಾತು ಎಷ್ಟು ನಿಜ ಎಷ್ಟು ಸುಳ್ಳು ಎಂದು ಗೊತ್ತಿಲ್ಲ. ಆದರೆ, ಸದ್ಯ ಅನುಷ್ಕಾ ಸಂಭಾವನೆಯ ಸುದ್ದಿ ಬಳಹ ಜೋರಾಗಿಯೇ ಹರಿದಾಡುತ್ತಿದೆ.

ಅನುಷ್ಕಾ ಟಾಲಿವುಡ್​, ಕಾಲಿವುಡ್​ನಲ್ಲಿ ಬೇಡಿಕೆಯ ನಟಿ. ಅತಿರಥ ಮಹಾರಥ ನಾಯಕರಿಗೆ ನಾಯಕಿಯಾಗಿದ್ದ ಈ ನಟಿ ಹಲವು ಸೂಪರ್​ ಹಿಟ್​ ಚಿತ್ರಗಳನ್ನು ಕೊಟ್ಟವರು. ಈ ನಡುವೆ, ಅಲ್ಲೊಂದು ಇಲ್ಲೊಂದು ಐಟಂ ಸಾಂಗ್​ಗಳ ಆಫರ್​ ಕೂಡಾ ಬರುತ್ತಿದೆ. ಒಬ್ಬ ಸ್ಟಾರ್ ನಟರ ತೆಲುಗು ಚಿತ್ರದ ಐಟಂ ಸಾಂಗ್​ಗೆ ಅನುಷ್ಕಾಗೆ ಆಫರ್ ಸಿಕ್ಕಿದೆ. ಆದರೆ, ಈ ಸಾಂಗ್​ನಲ್ಲಿ ನಟಿಸಲು ಅನುಷ್ಕಾ ಕೇಳಿದ ಸಂಭಾವನೆ ಎಷ್ಟು ಗೊತ್ತಾ…? ಬರೋಬ್ಬರಿ ಮೂರೂವರೆ ಕೋಟಿ…!

ಅನುಷ್ಕಾ ಕೇಳಿದ್ದಾರೆ ಎನ್ನಲಾದ ಈ ಸಂಭಾವನೆಯೇ ಈಗ ದೊಡ್ಡ ಸದ್ದು ಮಾಡಲಾರಂಭಿಸಿದೆ. ಬಾಹುಬಲಿಯ ಸಕ್ಸಸ್ ಬಳಿಕ ಅನುಷ್ಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಇನ್ನಷ್ಟು ಪುಷ್ಟಿ ನೀಡುವಂತಿದೆ…

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!