Tuesday , October 16 2018
ಕೇಳ್ರಪ್ಪೋ ಕೇಳಿ
Home / Gulf News / ವೀಕ್​ ಎಂಡ್​ನಲ್ಲಿ ದುಬೈ ಮೆಟ್ರೋ ಸಂಚಾರ ಬಂದ್​…! ಯಾಕೆ ಗೊತ್ತಾ…?

ವೀಕ್​ ಎಂಡ್​ನಲ್ಲಿ ದುಬೈ ಮೆಟ್ರೋ ಸಂಚಾರ ಬಂದ್​…! ಯಾಕೆ ಗೊತ್ತಾ…?

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ
ದುಬೈ : ಅರಬ್ ರಾಷ್ಟ್ರದ ಮೆಟ್ರೋ ರೈಲು ಪ್ರಯಾಣಿಕರಿಗೆ ನಿರಾಸೆಯ ಸುದ್ದಿ.. ವಾರಾಂತ್ಯದಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲು ಇಲ್ಲಿ ನಿರ್ಧರಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ವಾರಾಂತ್ಯದಲ್ಲಿ ಮೆಟ್ರೋ ಸಂಚಾರದ ಅವಧಿಯಲ್ಲಿ ಹೆಚ್ಚಿಸಬೇಕು ಎಂಬ ಪ್ರಯಾಣಿಕರ ಕೂಗಿನ ಹೊರತಾಗಿಯೂ ಈ ನಿರ್ಧಾರ ತೆಗೆದುಕೊಂಡದ್ದು ಪ್ರಯಾಣಿಕರಲ್ಲಿ ಆಕ್ರೋಶ ಮೂಡಿಸಿದೆ.

ಸದ್ಯ ಜುಮೇರಹ್​ ಲೇಕ್​ ಸ್ಟೇಷನ್​ ಮತ್ತು ಬಟುವಾ ಸ್ಟೇಷನ್​ ನಡುವೆ ಸಂಚರಿಸುತ್ತಿರುವ ರೆಡ್​ ಲೈನ್​ ಮೆಟ್ರೋ ಸಂಚಾರ ಬಾಗಶಃ ಸ್ಥಗಿತಗೊಳ್ಳಲಿದ್ದು,  2020ರ ದುಬೈ ವರ್ಲ್ಡ್​ ಎಕ್ಸ್​​ಪೋ ಸ್ಥಳದ ವರೆಗೂ ಈ ನಿರ್ಬಂಧ ವಿಸ್ತರಿಸುವ ಸಾಧ್ಯತೆಯೂ ಇದೆ.

ಸದ್ಯದ ವರೆಗೆ 10  ವೀಕ್​​​ಎಂಡ್​ಗಳ ಶುಕ್ರವಾರ ಮತ್ತು ಶನಿವಾರ ಈ ಸಂಚಾರ ನಿರ್ಬಂಧವನ್ನು ಹೇರಲು ನಿರ್ಧರಿಸಲಾಗಿದ್ದು, ಅಕ್ಟೋಬರ್​ 14 ರಂದು ಇದು ಕೊನೆಯಾಗಲಿದೆ ಎಂದು ರೈಲು ಸಂಚಾರ ವಿಭಾಗದ ನಿರ್ದೇಶಕ ಮಹಮ್ಮದ್​ ಅಲ್​ ಮುದರಿಬ್​ ತಿಳಿಸಿದ್ದಾರೆ. ವಾರಾಂತ್ಯದಲ್ಲಿ ಮೆಟ್ರೋ ಪ್ರಯಾಣಿಗರ ಸಂಖ್ಯೆ ಕಡಿಮೆ ಇದ್ದು, ಈ ಸಂಚಾರ ಸ್ಥಗಿತದಿಂದ ಕೆಲವಷ್ಟು ಪ್ರಯಾಣಿಕರಿಗೆ ತೊಂದರೆ ಆಗಬಹುದಷ್ಟೇ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿರುವ ನಿಲ್ದಾಣದಲ್ಲಿ ವಾರಾಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಇನ್ನು, ಈ ಮೂರು ಮೆಟ್ರೋ ಸ್ಟೇಷನ್​​ಗಳಲ್ಲಿ ಸಂಚಾರ ಸ್ಥಗಿತಗೊಂಡ ಸಂದರ್ಭದಲ್ಲಿ ಪ್ರಯಾಣಿಸಲು ಬಯಸುವ ಜನರಿಗಾಗಿ ಸೆಟಲ್​ ಬಸ್​ಗಳ ವ್ಯವಸ್ಥೆ ಮಾಡಲಾಗಿದ್ದು, ಈ ಬಸ್​​ಗಳಲ್ಲಿ ಉಚಿತವಾಗಿ ಜನ ಪ್ರಯಾಣಿಸಬಹುದಾಗಿದೆ ಎಂದೂ ಮುದರಿಬ್​ ತಿಳಿಸಿದ್ದಾರೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!