Sunday , December 16 2018
ಕೇಳ್ರಪ್ಪೋ ಕೇಳಿ
Home / Gulf News / ಐಸಿಸ್​ ಉಗ್ರನಿಗೆ 20 ವರ್ಷ ಜೈಲು

ಐಸಿಸ್​ ಉಗ್ರನಿಗೆ 20 ವರ್ಷ ಜೈಲು

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ
ರಿಯಾದ್ : ರಕ್ತಪಿಪಾಸು ಐಸಿಸ್​ ಉಗ್ರಗಾಮಿ ಸಂಘಟನೆಗೆ ಸೇರಿದ್ದ ವ್ಯಕ್ತಿಗೆ ಸೌದಿ ಅರೇಬಿಯಾದ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈತನಿಗೆ ಈ ಶಿಕ್ಷೆ ನೀಡಲಾಗಿದೆ. ವಿದೇಶಿ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಲು ಈತ ಸಂಚು ರೂಪಿಸಿದ್ದ ಎನ್ನಲಾಗಿದೆ.

ಅದೂ ಅಲ್ಲದೆ, ವಿವಿಧ ಕಚೇರಿ ಹಾಗೂ ಉತ್ತರ ಭಾಗದಲ್ಲಿರುವ ಅರರ್​ ಏರ್​ಪೋರ್ಟ್​ ಕೂಡಾ ಈತನ ಹಿಟ್​ಲಿಸ್ಟ್​ನಲ್ಲಿತ್ತು ಎನ್ನಲಾಗಿದೆ. ಸೌದಿಯಲ್ಲಿ ಉಗ್ರಗಾಮಿ ಚಟುವಟಿಕೆಗೆ ಸಂಚು ರೂಪಿಸುವ ಮುನ್ನ ಈತ ಸಿರಿಯಾ ಮತ್ತು ಇರಾಕ್​ನಲ್ಲಿರುವ ಐಸಿಸ್​ ಕ್ಯಾಂಪ್​ನಲ್ಲಿ ತರಬೇತಿಯನ್ನೂ ಪಡೆದಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ ಆತನ 20 ವರ್ಷ ಆತನ ಸಂಚಾರಕ್ಕೂ ನಿರ್ಭಂಧ ಹೇರಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!