Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Mollywood / ನಟ ದಿಲೀಪ್​ಗೆ ಜೈಲಿನಲ್ಲಿ ರಾಜಾತಿಥ್ಯ…?

ನಟ ದಿಲೀಪ್​ಗೆ ಜೈಲಿನಲ್ಲಿ ರಾಜಾತಿಥ್ಯ…?

ತಿರುವನಂತಪುರಂ : ಬಹುಭಾಷಾ ನಟಿಗೆ ದೌರ್ಜನ್ಯ ನೀಡಿರುವ ಕೇಸ್​ನಲ್ಲಿ ಷಡ್ಯಂತ್ರ ರೂಪಿಸಿದ್ದ ಆರೋಪದಲ್ಲಿ ಜೈಲು ಸೇರಿರುವ ಮಲಯಾಳಂ ನಟ ದಿಲೀಪ್​ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಾ…? ಹೌದು ಎನ್ನುತ್ತಿದೆ ಒಂದಷ್ಟು ಮೂಲಗಳು… ಜೈಲಿನಲ್ಲಿರುವ ಸಹ ಕೈದಿಗಳಿಂದಲೇ ಈ ವಿಷಯ ಬಹಿರಂಗವಾಗಿದೆ.

ಸದ್ಯ ಒಂದು ತಿಂಗಳಿನಿಂದ ಅರುವಾ ಜೈಲಿನಲ್ಲಿರುವ ದಿಲೀಪ್​ಗೆ ಈ ಜೈಲಿನಲ್ಲಿ ಸ್ಪೆಷಲ್ ಟ್ರೀಟ್​ಮೆಂಟ್ ಸಿಗುತ್ತಿದೆಯಂತೆ. ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರದಲ್ಲಿ ಸ್ಯಾಂಪ್​ ಪೇಪರ್ ಹಗರಣದ ಆರೋಪಿ ಕರೀಂಲಾಲ್ ತೆಲಗಿಗೂ, ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾಗೂ ಇದೇ ರೀತಿಯ ಸ್ಪೆಷಲ್​ ಟ್ರೀಟ್​ಮೆಂಟ್ ಸಿಗುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲೇ ಸೌಂಡ್ ಮಾಡಿತ್ತು. ಇದೀಗ ದಿಲೀಪ್ ವಿಚಾರದಲ್ಲೂ ಇದೇ ರೀತಿಯ ಆರೋಪಗಳು ಕೇಳಿ ಬಂದಿದೆ.

ದಿಲೀಪ್​ಗೆ ಹೊರಗಿನ ವಿಶೇಷ ಆಹಾರ ಕೂಡಾ ಸಿಗುತ್ತಿದ್ದು, ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾತುಗಳು ಈಗ ಕೇಳಲಾರಂಭಿಸಿವೆ. ಎರಡು ದಿನ ಜೈಲಿನಲ್ಲಿ ದಿಲೀಪ್​​ ಸೆಲ್​ನ ಪಕ್ಕದಲ್ಲೇ ಇದ್ದ ಸನೂಪ್ ಎಂಬ ಕೈದಿ ಈ ಆರೋಪ ಮಾಡಿದ್ದು, ರಾತ್ರಿಯಷ್ಟೇ ಸೆಲ್​ಗೆ ಬರುವ ದಿಲೀಪ್ ಇಡೀ ದಿನ ಯಾವುದಾದರೊಂದಿಗೆ ಅಧಿಕಾರಿಯ ಚೇಂಬರ್​ನಲ್ಲಿ ಇರುತ್ತಿದ್ದರು ಎಂದು ದೂರಿದ್ದಾರೆ. ಅಲ್ಲದೆ, ಎಲ್ಲರಿಗೂ ಈ ವಿಷಯ ಗೊತ್ತಿದೆ. ಅಧಿಕಾರಿಗಳು ಹೊಡೆಯುವ ಭಯದಿಂದ ಯಾರೂ ಇದನ್ನು ಗಟ್ಟಿಯಾಗಿ ಹೇಳುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

ಅಧಿಕಾರಿಗಳು ಬಳಸುವ ಬಾತ್​ರೂಮ್​ ಅನ್ನು ಬಳಸುವ ದಿಲೀಪ್​ಗೆ ಅಧಿಕಾರಿಗಳಿಗಾಗಿ ಮಾಡುವ ಆಹಾರವನ್ನೇ ನೀಡಲಾಗುತ್ತಿದೆ. ಕೈದಿಗಳಿಗೆ ನೀಡುವ ಆಹಾರವನ್ನು ದಿಲೀಪ್​ ತಿಂದಿದ್ದೇ ಇಲ್ಲ. ಅವರಿಗೆ ಇಲ್ಲಿ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗಿದೆ ಎಂಬುದು ಇವರ ದೂರು.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!