Saturday , November 17 2018
ಕೇಳ್ರಪ್ಪೋ ಕೇಳಿ
Home / Sandalwood / ಮಾಸ್​ ಲೀಡರ್​ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆ : ಆಗಸ್ಟ್​ 11ಕ್ಕೆ ಶಿವಣ್ಣನ ಚಿತ್ರ ರಿಲೀಸ್​

ಮಾಸ್​ ಲೀಡರ್​ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆ : ಆಗಸ್ಟ್​ 11ಕ್ಕೆ ಶಿವಣ್ಣನ ಚಿತ್ರ ರಿಲೀಸ್​

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​​ ಅಭಿನಯದ ಮಾಸ್ ಲೀಡರ್​ ಚಿತ್ರಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಟೈಟಲ್​​ಗೆ ಸಂಬಂಧಿಸಿದ ವಿವಾದ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತರುವ ತನಕ ಬಂದಿತ್ತು. ಇದೀಗ ಈ ವಿವಾದ ಬಗೆಹರಿದಿದ್ದು, ನಿಗದಿಯಂತೆ ಆಗಸ್ಟ್​ 11 ರಂದು ಮಾಸ್​ ಲೀಡರ್​ ತೆರೆಗಪ್ಪಳಿಸಲಿದೆ.

ಲೀಡರ್​ ಟೈಟಲ್​ ತನ್ನ ಬಳಿ ಇರುವುದರಿಂದ ಮಾಸ್​ ಲೀಡರ್​ ಚಿತ್ರ ರಿಲೀಸ್ ಮಾಡಬಾರದು ಎಂದು ನಿರ್ದೇಶಕ ಎಎಂಆರ್ ರಮೇಶ್​ ಆರಂಭದಿಂದಲೂ ಆಗ್ರಹಿಸುತ್ತಿದ್ದರು. ಮೊನ್ನೆ ರಮೇಶ್ ಪತ್ನಿ ಇಂದುಮತಿ ನ್ಯಾಯಾಲಯದ ಮೊರೆ ಹೋಗಿ ಮಾಸ್​ ಲೀಡರ್​ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದರು. ಹೀಗಾಗಿ, ಮಾಸ್​ ಲೀಡರ್​ ಚಿತ್ರ ಬಿಡುಗಡೆಯೇ ಅನುಮಾನವಾಗಿತ್ತು. ಇದೀಗ ಈ ವಿವಾದ ಬಗೆಹರಿದಿದೆ. ನಿರ್ಮಾಪಕ ಕೆ. ಮಂಜು ಎಎಂಆರ್​ ರಮೇಶ್ ಮತ್ತು ಮಾಸ್​ ಲೀಡರ್​ ನಿರ್ಮಾಪಕ ತರುಣ್ ಅವರೊಂದಿಗೆ ಸಂದಾನ ನಡೆಸಿದ್ದಾರೆ. ಈ ವೇಳೆ, ಕೊಟ್ಟಿರುವ ದೂರನ್ನು ವಾಪಸ್ ಪಡೆಯುವಂತೆಯೂ ರಮೇಶ್​ ಮನವೊಲಿಸುವಲ್ಲಿ ಮಂಜು ಸಫಲರಾಗಿದ್ದಾರೆ. ಹೀಗಾಗಿ, ಬಹಳ ಹಳೆಯ ವಿವಾದಕ್ಕೆ ಈಗ ತೆರೆ ಬಿದ್ದಿದ್ದು, ಚಿತ್ರದ ನಿರ್ಮಾಪಕ ತರುಣ್​ ಶಿವಪ್ಪ ರಮೇಶ್​ ಅವರಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!