Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಕನ್ನಡ ಚಿತ್ರದಲ್ಲಿ ಮತ್ತೆ ಚಿರಂಜೀವಿ… : ಕಿಚ್ಚನ ಜೊತೆ ಮೆಗಾಸ್ಟಾರ್​ ಸ್ಕ್ರೀನ್​ಶೇರ್​​​​

ಕನ್ನಡ ಚಿತ್ರದಲ್ಲಿ ಮತ್ತೆ ಚಿರಂಜೀವಿ… : ಕಿಚ್ಚನ ಜೊತೆ ಮೆಗಾಸ್ಟಾರ್​ ಸ್ಕ್ರೀನ್​ಶೇರ್​​​​

ಬೆಂಗಳೂರು : ಮೆಗಾಸ್ಟಾರ್​ ಚಿರಂಜೀವಿ ಮತ್ತೆ ಕನ್ನಡಕ್ಕೆ ಬರಲಿದ್ದಾರೆ. ಈ ಹಿಂದೆ ಸಿಪಾಯಿ, ಶ್ರೀಮಂಜುನಾಥ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಸೆಳೆದಿದ್ದ ಚಿರು ಮತ್ತೊಂದು ಬಾರಿ ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸುದೀಪ್ ಅಭಿನಯದ ಚಿತ್ರದಲ್ಲಿ ಚಿರು ಅಭಿನಯಿಸಲಿದ್ದಾರಂತೆ.

ಚಿರಂಜೀವಿ ಈಗ ಬಣ್ಣದ ಲೋಕದಲ್ಲಿ ಸಕ್ರಿಯ. ಲಾಂಗ್​ ಗ್ಯಾಪ್​​ನ  ಬಳಿಕ ಚಿರು ಈಗ ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದಾರೆ… ಈಗಾಗಲೇ 150 ಚಿತ್ರಗಳನ್ನು ಚಿರು ಪೂರೈಸಿದ್ದಾರೆ… ಚಿರಂಜೀವಿ 150ನೇ ಚಿತ್ರ ಖೈದಿ ನಂಬರ್​ 150… ಖೈದಿ ನಂಬರ್ 150 ಚಿತ್ರವನ್ನು ಅಭಿಮಾನಿಗಳು ತುಂಬಾ ಪ್ರೀತಿಯಿಂದಲೇ ಸ್ವಾಗತಿಸಿದ್ದರು. ಇದೀಗ ಚಿರು 151ನೇ ಚಿತ್ರಕ್ಕೂ ಅಭಿಮಾನಿಗಳು ಇದೇ ರೀತಿ ಕಾತರಿಸುತ್ತಿದ್ದಾರೆ… ಉಯ್ಯಲವಾಡ ನರಸಿಂಹ ರೆಡ್ಡಿ ಎಂಬುದು ಚಿರು ಮುಂದಿನ ಚಿತ್ರದ ಹೆಸರು…

ಕರ್ನಾಟಕದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇದ್ದಂತೆ ಆಂಧ್ರ ಪ್ರದೇಶದಲ್ಲಿ ಉಯ್ಯಲವಾಡ ನರಸಿಂಹ ರೆಡ್ಡಿ ಅವರು ಕೂಡಾ ಓರ್ವ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ… ಆಂಧ್ರ ಪ್ರದೇಶದ ಭಾಗದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ನಾಯಕ ಉಯ್ಯಲವಾಡ ನರಸಿಂಹ ರೆಡ್ಡಿ… ಇವರ ಜೀವನ ಕತೆಯೇ ಈಗ ಚಿತ್ರವಾಗುತ್ತಿದೆ… ಆಗಸ್ಟ್​​ 22ರಂದು ಚಿರು ಹುಟ್ಟುಹಬ್ಬ… ಇದೇ ದಿನ ಈ ಹೊಸ ಚಿತ್ರದ ಘೋಷಣೆ ಆಗುವ ಸಾಧ್ಯತೆಯೇ ಹೆಚ್ಚು…

ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡಾ ಅಭಿನಯಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಗೊತ್ತಿರುವ ವ್ಯಕ್ತಿಯ ಪಾತ್ರಕ್ಕೆ ಸುದೀಪ್​ಗೆ ಆಫರ್​ ಬಂದಿದೆಯಂತೆ… ಈ ಸುದ್ದಿಯೇ ಖುಷಿ ಕೊಡುವಾಗ, ಕನ್ನಡದಲ್ಲಿ ಚಿರಂಜೀವಿ ಅಭಿನಯಿಸುತ್ತಾರೆ ಎಂಬ ಸುದ್ದಿ ಇನ್ನಷ್ಟು ಖುಷಿಗೆ ಕಾರಣವಾಗಿದೆ. ಕನ್ನಡ ತೆಲುಗಿನಲ್ಲಿ ಈ ಹೊಸ ಚಿತ್ರ ಏಕಕಾಲದಲ್ಲಿ ತಯಾರಾಗಲಿದೆಯಂತೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!