Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಬರುತ್ತಿದ್ದಾರೆ ‘ಗಂಟ್​ ಕಲ್ವೇರ್​​’

ಬರುತ್ತಿದ್ದಾರೆ ‘ಗಂಟ್​ ಕಲ್ವೇರ್​​’

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಮತ್ತೊಂದು ಕಾಮಿಡಿ ಚಿತ್ರ ಸಿದ್ಧವಾಗುತ್ತಿದೆ. ಸುಧಾಕರ್ ಬನ್ನಂಜೆ ನಿರ್ದೇಶನದಲ್ಲಿ ‘ಗಂಟ್​ ಕಲ್ವೇರ್​​’ ಎಂಬ ಸಿದ್ಧವಾಗುತ್ತಿದೆ. ಈ ಚಿತ್ರದ ಎರಡು ಹಾಡುಗಳ ಶೂಟಿಂಗ್ ಇನ್ನು ಬಾಕಿ ಇದ್ದು, ಚಿತ್ರ ಸದ್ಯ ಸಂಕಲನ ಹಂತ ತಲುಪಿದೆ.

ಇದೊಂದು ಸಂಪೂರ್ಣ ಕಾಮಿಡಿ ಚಿತ್ರ ಎನ್ನುತ್ತಾರೆ ನಿರ್ದೇಶಕ ಸುಧಾಕರ್ ಬನ್ನಂಜೆ. ಹೊಸ ಕತೆಯೊಂದಿಗೆ ನಾವು ಬರುತ್ತಿದ್ದೇವೆ ಎಂಬುದು ಬನ್ನಂಜೆ ಮಾತು. ನವೀನ್ ಡಿ ಪಡೀಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಜೇಶ್​ ಶೆಟ್ಟಿ ಮತ್ತು ಸ್ಮಿತಾ ಸುವರ್ಣ ಈ ಚಿತ್ರದ ಮೂಲಕ ಕೋಸ್ಟಲ್​ವುಡ್​ಗೆ ಕಾಲಿಡುತ್ತಿದ್ದಾರೆ.

ಇನ್ನುಳಿದಂತೆ ಕೋಸ್ಟಲ್​ವುಡ್​ನ ಖ್ಯಾತ ಕಲಾವಿದರಾದ ಬೋಜರಾಜ ವಾಮಂಜೂರು, ಅರವಿಂದ್​ ಬೋಳಾರ್​, ಸುಂದರ್​ ರೈ ಮಂದಾರ, ಉಮೇಶ್ ಮಿಜಾರ್​ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್​, ಸುಧಾಕರ್ ಬನ್ನಂಜೆ, ಸೃಜನ್​ ಮನವ್​ ಮತ್ತು ಕೀರ್ತನ್​ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ವಿ.ಮನೋಹರ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಮಂಗಳೂರು, ಮೂಡಬಿದಿರೆ, ಉಡುಪಿ ಸೇರಿದಂತೆ ಹಲವು ಭಾಗದಲ್ಲಿ ಚಿತ್ರದ ಶೂಟಿಂಗ್ ನಡೆದಿದೆ.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!