Wednesday , March 27 2019
ಕೇಳ್ರಪ್ಪೋ ಕೇಳಿ
Home / Film News / Bollywood / ಬಾಲಿವುಡ್​ನಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಅಕ್ಷಯ್ ಕುಮಾರ್​​…

ಬಾಲಿವುಡ್​ನಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಯಾದ ಅಕ್ಷಯ್ ಕುಮಾರ್​​…

ಮುಂಬೈ : ಬಾಲಿವುಡ್​ನ ಆಕ್ಷನ್​ ಕಿಂಗ್ ಅಕ್ಷಯ್ ಕುಮಾರ್​ ಮತ್ತೊಂದು ಬಿಗ್ ಹಿಟ್​ನ ನಿರೀಕ್ಷೆ ಮೂಡಿಸಿದ್ದಾರೆ. ಟಾಯ್ಲೆಟ್​ ಏಕ್ ಪ್ರೇಮ್​ ಕಥಾ ಚಿತ್ರದ ಮೂಲಕ ಅಕ್ಕಿ ಭರವಸೆ ಮೂಡಿಸಿದ್ದಾರೆ. ಚಿತ್ರರಂಗದ ಮಾರುಕಟ್ಟೆ ತಜ್ಞರಿಂದಲೂ ಈ ಚಿತ್ರದ ಗಳಿಕೆಯ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದು, ಅಕ್ಕಿ ಈ ಚಿತ್ರ ಟ್ರೆಂಡ್​ ಸೆಟ್ಟರ್​ ಕೂಡಾ ಆಗುವಂತಹ ಲಕ್ಷಣಗಳು ಕಾಣುತ್ತಿವೆ…

ಟಾಯ್ಲೆಟ್​ ಏಕ್​ ಪ್ರೇಮ್​​ಕಥಾ ಚಿತ್ರ ರಿಲೀಸ್​ಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ… ಬಯಲು ಶೌಚ ಮುಕ್ತ ಭಾರತ ನಿರ್ಮಾಣದ ಪರಿಕಲ್ಪನೆಯಲ್ಲಿ ತಯಾರಾದ ಚಿತ್ರ ಇದು. ಪ್ರಧಾನ ಮಂತ್ರಿ ಅವರ ಸ್ವಚ್ಛ ಭಾರತ ಅಭಿಯಾನವೂ ಈ ಚಿತ್ರಕ್ಕೆ ಪ್ರೇರಣೆ… ಹೀಗಾಗಿಯೇ, ಈ ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಶುಭಹಾರೈಸಿ ಮೆಚ್ಚುಗೆ ಸೂಚಿಸಿದ್ದರು…

ಆಗಸ್ಟ್​​ 11ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ನಿರೀಕ್ಷೆಯೇ ಮಾಡದಂತಹ ಕೆಲವೊಂದು ಕೇಂದ್ರಗಳಲ್ಲೂ ಅಕ್ಷಯ್​ ಚಿತ್ರ ತೆರೆಗೆ ಬರುತ್ತಿದೆ. ವಿದೇಶೀ ಮಾಧ್ಯಮಗಳೂ ಕೂಡಾ ಟಾಯ್ಲೆಟ್​​​​​ ಚಿತ್ರದ ಬಗ್ಗೆ ಮೆಚ್ಚುಗೆಯ ವರದಿಯನ್ನು ಪ್ರಕಟಿಸಿದ್ದು, ಅಕ್ಷಯ್​ ಕುಮಾರ್​ ಬಾಲಿವುಡ್​ನಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬರ್ಥದಲ್ಲಿ ಶಹಬ್ಬಾಸ್​ ನೀಡಿದೆ…

ಈ ಚಿತ್ರ ಅಕ್ಕಿಗೆ ಹ್ಯಾಟ್ರಿಕ್ ಗೆಲುವು ತಂದುಕೊಡುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ರುಸ್ತುಂ, ಏರ್​ಲಿಫ್ಟ್​ ಮತ್ತು ಜಾಲಿ ಎಲ್​ಎಲ್​ಬಿ ಚಿತ್ರದ ಗೆಲುವಿನ ಸಿಹಿ ಬಳಿಕ ಅಕ್ಕಿಗೆ ಈ ಚಿತ್ರವೂ ಖುಷಿ ತಂದುಕೊಡಲಿದೆ ಎಂದೇ ಹೇಳಲಾಗುತ್ತಿದೆ. ಟಾಯ್ಲೆಟ್​ ಏಕ್​ ಪ್ರೇಮ್​ ಕಥಾ ಚಿತ್ರ ತನ್ನ ವಿದೇಶದಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಸಾಂಪ್ರದಾಯಿಕವಲ್ಲದ ಕೇಂದ್ರಗಳಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ ಎಂಬುದು ಟಾಯ್ಲೆಟ್​ ಏಕ್​ ಪ್ರೇಮ್​ ಕಥಾದ ಹೆಚ್ಚುಗಾರಿಕೆ. ಜಪಾನ್​ ಮತ್ತು ಚಿಲಿಯಲ್ಲೂ ಅಕ್ಷಯ್ ಚಿತ್ರ ರಿಲೀಸ್​ ಆಗಲಿದೆ ಅಂದು ಅಮೇರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಶ್ರೀನಾರಾಯಣ್ ಸಿಂಗ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಭಾರತದ ಸಾಂಪ್ರಾದಾಯಿಕ ಮಾರುಕಟ್ಟೆಯನ್ನೂ ಮೀರಿ ಬೆಳೆದಿದೆ ಎಂಬುದು ಸತ್ಯ. ಅಮೇರಿಕಾ, ಯುಕೆ, ಗಲ್ಫ್​ ರಾಷ್ಟ್ರಗಳು, ಆಸ್ಟ್ರೇಲಿಯಾ, ನ್ಯೂಜಿಲೆಂಡ್​​ ಇವೆಲ್ಲಾ ಬಾಲಿವುಡ್​ನ ಸಾಂಪ್ರಾದಾಯಿಕ ಮಾರುಕಟ್ಟೆಗಳು. ಆದರೆ, ಇತ್ತೀಚೆಗೆ ಬಾಲಿವುಡ್​​​ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದೆ. ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಚೀನಾದಲ್ಲಿ ಒಳ್ಳೆಯ ಸಾಧನೆಯನ್ನೇ ಮಾಡಿತ್ತು. ಸದ್ಯ ಬಾಹುಬಲಿ 2 ಚಿತ್ರ ಕೂಡಾ ಚೀನಾದಲ್ಲಿ ರಿಲೀಸ್​ಗೆ ರೆಡಿಯಾಗಿದೆ. ಇನ್ನು, ಜಪಾನ್​​ ಕೂಡಾ… ಇತ್ತೀಚಿನ ವರ್ಷದ ವರೆಗೂ ಜಪಾನ್​ನಲ್ಲಿ ಬಾಲಿವುಡ್​ ಚಿತ್ರಗಳು ಮಿಂಚಿದ್ದು ಕಡಿಮೆ. ಆದರೆ, ಹಲವಾರು ರಜನಿಕಾಂತ್​ ಚಿತ್ರಗಳು ಇಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿತ್ತು. ಇದೀಗ, ಟಾಯ್ಲೆಟ್​​ ಏಕ್​ ಪ್ರೇಮ್​ ಕಥಾ ಜಪಾನ್​ನಲ್ಲೂ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ನಿರ್ಮಾಪಕರು ಮತ್ತು ವಿತರಕರು 20ಕ್ಕೂ ಹೆಚ್ಚು ಸಾಂಪ್ರದಾಯಿಕವಲ್ಲದ ಮಾರುಕಟ್ಟೆಯಲ್ಲಿ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದಾರೆ.

ಬಾಹುಬಲಿ 2, ದಂಗಲ್​ ಬಳಿಕ ಬಾಲಿವುಡ್​ ಯಾವೊಂದು ಚಿತ್ರವೂ ಹೇಳಿಕೊಳ್ಳುವ ಮಟ್ಟದಲ್ಲಿ ದೊಡ್ಡ ಹಿಟ್​ಗಳನ್ನು ದಾಖಲಾಗಿಲ್ಲ. ಈ ನಡುವೆ ಬಂದ ಕೆಲವೊಂದು ಚಿತ್ರಗಳು ಸಾಧಾರಣಾ ಸಾಧನೆ ಮಾಡಿದರೆ, ಮತ್ತೆ ಹಲವು ತೋಪೆದ್ದು ಹೋಗಿದ್ದವು. ಸ್ಟಾರ್​ಗಳ ಚಿತ್ರವೂ ಭಾರತದ ಮಾರುಕಟ್ಟೆಯಲ್ಲಿ ಅಷ್ಟಾಗಿ ಹೆಸರು ಮಾಡಿಲ್ಲ. ಇದಕ್ಕೆ ಸಲ್ಮಾನ್ ಅಭಿನಯದ ಟ್ಯೂಬ್​ಲೈಟ್​ ಚಿತ್ರವೂ ಒಂದು ಸಾಕ್ಷಿ. ಇನ್ನು, ಶಾರೂಖ್ ಅಭಿನಯದ ಜಬ್ ಹ್ಯಾರಿ ಮೆಟ್​ ಸೇಜಲ್​ ಚಿತ್ರ ಕೂಡಾ ಆರಂಭದಲ್ಲಿ ತುಂಬಾ ಕಷ್ಟಪಟ್ಟಿದ್ದು, ಈಗ ಕೊಂಚ ಗಳಿಕೆಯಲ್ಲಿ ಪ್ರಗತಿ ಕಂಡಿದೆ. ಆದರೆ, ಅಕ್ಷಯ್​ ಕುಮಾರ್ ಮಾತ್ರ ಇತ್ತೀಚಿಗಿನ ದಿನಗಳಲ್ಲಿ ನಿರಂತರವಾಗಿ ಯಶಸ್ವೀ ಚಿತ್ರಗಳನ್ನು ಕೊಡುತ್ತಾ ಬರುತ್ತಿದ್ದು, ಇದೀಗ ಟಾಯ್ಲೆಟ್​ ಏಕ್ ಪ್ರೇಮ್​​ ಕಥಾ ಚಿತ್ರದ ಮೂಲಕವೂ ಇದೇ ನಿರೀಕ್ಷೆಯನ್ನು ಮೂಡಿಸಿದ್ದಾರೆ… ಅಕ್ಷಯ್​ ಚಿತ್ರಗಳು ಸಾಮಾನ್ಯವಾಗಿ ಮೊದಲ ದಿನ 13 ರಿಂದ 15 ಕೋಟಿಯಷ್ಟು ಗಳಿಸುತ್ತವೆ. ಅಂದರೆ, ಈ ಗಳಿಕೆ ಚಿತ್ರಕ್ಕೆ ಭದ್ರ ನೆಲೆ ಮತ್ತು ಸೇಫ್​ ಝೋನ್​​​​​​ ಕಲ್ಪಿಸುತ್ತದೆ.

ಅಕ್ಷಯ್ ಚಿತ್ರದ ಮೊದಲನೇ ದಿನ ಸಾಧನೆ… :

ಸಿಂಗ್​ ಇಸ್​ ಬ್ಲಿಂಗ್​ : 20.67 ಕೋಟಿ

ಹೌಸ್​ಫುಲ್​ 3 : 15.20 ಕೋಟಿ

ರೌಡಿ ರಾಥೋಡ್​ : 15.10 ಕೋಟಿ

ಬ್ರದರ್ಸ್​ : 15.02 ಕೋಟಿ

ರುಸ್ತುಂ : 14.11 ಕೋಟಿ

ಜಾಲಿ ಎಲ್​ಎಲ್​ಬಿ : 13.20 ಕೋಟಿ

ಗಬ್ಬರ್​ ಇಸ್ ಬ್ಯಾಕ್​ : 13.05 ಕೋಟಿ

ಇನ್ನು, ಈ ಟಾಯ್ಲೆಟ್​ ಏಕ್ ಪ್ರೇಮ್​ ಕಥಾಗೆ ಈ ಸಲ ಹೇಳಿಕೊಳ್ಳುವ ಸ್ಪರ್ಧೆಯೂ ಇಲ್ಲ. ಈ ಹಿಂದೆ ರುಸ್ತುಂ ಬಿಡುಗಡೆ ಸಂದರ್ಭದಲ್ಲಿ ಹೃತಿಕ್ ಮೊಹಿಂಜಾದಾರೋ, ಏರ್​ ಲಿಫ್ಟ್​ ರಿಲೀಸ್ ಟೈಮ್​ನಲ್ಲಿ ಕ್ಯಾ ಕೋಲ್​ ಹೇ ಹಮ್​ ಚಿತ್ರ ಅಕ್ಕಿಗೆ ಸ್ಪರ್ಧೆಯೊಡ್ಡಿದ್ದವು. ಆದರೆ, ಈ ಬಾರಿ ಇಂತಹ ಆತಂಕಗಳೇನು ಇಲ್ಲ. ಹೀಗಾಗಿ, ಅಕ್ಷಯ್​ ಚಿತ್ರದ ಹಾದಿಯಂತೂ ಸುಗಮ… ಸಿನಿಲೋಕದ ಮಾರುಕಟ್ಟೆ ತಜ್ಞರು ಕೂಡಾ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ… ಹೀಗಾಗಿ, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅಕ್ಷಯ್ ಚಿತ್ರಕ್ಕೆ ಗೆಲುವು ಏನೂ ಕಷ್ಟ ಆಗಲಾರದು ಎಂಬುದು ಸ್ಪಷ್ಟ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!