Friday , April 20 2018
Home / Film News / Bollywood / ಶಾಕ್​ ಆಗ್ತಿರ..! : ಅಮಿತಾಭ್​ ಕೈಯಲ್ಲಿ ಇರುವ ಚಿತ್ರಗಳೆಷ್ಟು ಗೊತ್ತಾ…?

ಶಾಕ್​ ಆಗ್ತಿರ..! : ಅಮಿತಾಭ್​ ಕೈಯಲ್ಲಿ ಇರುವ ಚಿತ್ರಗಳೆಷ್ಟು ಗೊತ್ತಾ…?

ಮುಂಬೈ : ಬಾಲಿವುಡ್​ ಬಿಗ್​ ಬಿ ಬಣ್ಣದ ಲೋಕದಲ್ಲಿ ಈಗಲೂ ಸಕ್ರಿಯ. ಆದರೆ, ಅಮಿತಾಭ್​ ಅಭಿಮಾನಿಗಳು ಸರ್ಕಾರ್​ ತ್ರಿ ಚಿತ್ರದ ಸೋಲಿನಿಂದ ತೀವ್ರ ನಿರಾಸೆಗೊಳಗಾಗಿದ್ದರು. ಹಾಗಂತ, ಈ ಅಭಿಮಾನಿಗಳು ನೊಂದು ಕುಳಿತುಕೊಳ್ಳಬೇಕಾಗಿಲ್ಲ. ಯಾಕೆಂದರೆ, ಅಮಿತಾಭ್​ ಕೈಯಲ್ಲಿ ಒಂದಲ್ಲ, ಎರಡಲ್ಲ ಇನ್ನೂ ಏಳು ಚಿತ್ರಗಳಿವೆ…! ಕೇಳಿದರೆ ಖಂಡಿತಾ ಶಾಕ್​ ಆಗುತ್ತದೆ. ಈ ವಯಸ್ಸಿನಲ್ಲಿ ಅಮಿತಾಭ್​ ಅದೆಷ್ಟು ಚುರುಕಾಗಿದ್ದಾರೆ ಎಂದು ಖುಷಿಯೊಂದಿಗೆ ಅಚ್ಚರಿಯೂ ಆಗುತ್ತದೆ…

ಸದ್ಯ ಉಮೇಶ್ ಶುಕ್ಲಾ ಅವರ 102 ನೋಟ್ ಔಟ್​ ಚಿತ್ರ ಮುಗಿಸಿರುವ ಬಿಗ್​ ಬಿ, ಆಗಸ್ಟ್​ನಲ್ಲಿ ಕೌನ್​ ಬನೇಗ ಕರೋಡ್ ಪತಿ ಶೂಟಿಂಗ್​ನಲ್ಲಿ ಇರುತ್ತಾರೆ. ಇದಾದ ಬಳಿಕ ಸಪ್ಟೆಂಬರ್​ನಲ್ಲಿ ಮತ್ತೆ ಥಗ್ಸ್​ ಆಫ್​ ಹಿಂದೂಸ್ತಾನ್​ ಚಿತ್ರದ ಶೂಟಿಂಗ್​ಗೆ ಹೋಗಲಿದ್ದಾರೆ. ಅಕ್ಟೋಬರ್​ನಲ್ಲಿ ನಾಗರಾಜ್​ ಮಂಜುಲೇ ಅವರ ಚಿತ್ರ, ಬಳಿಕ ಆರ್ಯನ್ ಮುಖರ್ಜಿ ಅವರ ಮತ್ತೊಂದು ಚಿತ್ರ, ಇನ್ನು, ಕಬೀರ್​ ಖಾನ್​, ಆರ್​. ಬಾಲ್ಕಿ ಮತ್ತು ಶೋಜಿತ್​ ಸಿರ್ಕರ್​ ಅವರ ಚಿತ್ರ ಹೀಗೆ ಹಲವು ಚಿತ್ರಗಳಲ್ಲಿ ಬಿಗ್​ ಬಿ ಬ್ಯುಸಿ ಆಗಲಿದ್ದಾರೆ. ‘

ಹೀಗೆ ಎರಡು ವರ್ಷಗಳ ಕಾಲ ಅಮಿತಾಭ್​ ಸಖತ್​ ಬ್ಯುಸಿ. ಬಾಲಿವುಡ್​ನ ಮೋಸ್ಟ್ ಬ್ಯುಸಿಯಸ್ಟ್​ ಆಕ್ಟರ್​​ ಆಗಿಯೂ ಬಿಗ್​ ಬಿ ಹೊರಹೊಮ್ಮಿದ್ದಾರೆ ಎಂದರೂ ತಪ್ಪಿಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!