Tuesday , February 19 2019
ಕೇಳ್ರಪ್ಪೋ ಕೇಳಿ
Home / Sandalwood / ಸ್ಯಾಂಡಲ್​ವುಡ್​ಗೆ ರಾಣಾ ದಗ್ಗುಬಾಟಿ…?

ಸ್ಯಾಂಡಲ್​ವುಡ್​ಗೆ ರಾಣಾ ದಗ್ಗುಬಾಟಿ…?

ಬೆಂಗಳೂರು : ಟಾಲಿವುಡ್, ಕಾಲಿವುಡ್​ನಲ್ಲಿ ಮಿಂಚುತ್ತಿರುವ ರಾಣಾ ದಗ್ಗುಬಾಟಿ ಸ್ಯಾಂಡಲ್​ವುಡ್​ಗೂ ಕಾಲಿಡುತ್ತಿದ್ದಾರಾ…? ಹೀಗೊಂದು ಸುದ್ದಿ ಈಗ ಹಬ್ಬಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಕನ್ನಡದ ಆಸ್ಫೋಟ ಚಿತ್ರದಲ್ಲಿ ನಟಿಸಲು ರಾಣಾಗೆ ಆಫರ್ ಹೋಗಿದೆಯಂತೆ. ಇದಿನ್ನೂ ಮಾತುಕತೆಯ ಹಂತದಲ್ಲಿದೆ. ಒಂದೊಮ್ಮೆ ಈ ಮಾತುಕತೆ ಫಲಪ್ರದವಾದರೆ ರಾಣಾ ಕನ್ನಡ ಚಿತ್ರರಂಗಕ್ಕೂ ಕಾಲಿಡಲಿದ್ದಾರೆ.

ಆಸ್ಫೋಟ ಎಎಂಆರ್​ ರಮೇಶ್​ ನಿರ್ದೇಶನದ ಚಿತ್ರವಾಗಿದ್ದು, ಮಾಜಿಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಕಥೆಯನ್ನು ಇಲ್ಲಿ ಚಿತ್ರಕ್ಕೆ ಬಳಸಲಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳಿನಲ್ಲಿ ಈ ಭಾಷೆ ಸಿದ್ಧವಾಗುತ್ತಿದ್ದು ಕಾರ್ತಿಕೇಯನ್​ ಪಾತ್ರಕ್ಕಾಗಿ ರಾಣಾ ಅವರನ್ನು ಸಂಪರ್ಕಿಸಲಾಗಿದೆಯಂತೆ.

ಇನ್ನು, ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದಲ್ಲಿ ರಾಣಾ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು, ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಣಾ ಇಲ್ಲ ಇಂತಹದ್ದೊಂದು ಆಫರ್ ನನಗೆ ಬಂದಿಲ್ಲ. ಚಿತ್ರದಲ್ಲಿ ನಟಿಸುವಂತೆ ನನ್ನನ್ನು ಯಾರೂ ಸಂಪರ್ಕಿಸಿರಲಿಲ್ಲ ಎಂದು ಹೇಳಿದ್ದಾರೆ,

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!