Saturday , October 20 2018
ಕೇಳ್ರಪ್ಪೋ ಕೇಳಿ
Home / Gulf News / ಟ್ರಾಫಿಕ್​ನಲ್ಲಿ ನಿಂತಿದ್ದ ಕಾರನ್ನು ಸುರಕ್ಷಿತವಾಗಿ ಬದಿಗೆ ನಿಲ್ಲಿಸಿದ ಪೊಲೀಸರು : ಇಬ್ಬರಿಗೆ ಇಲಾಖೆಯ ಬಹುಮಾನ

ಟ್ರಾಫಿಕ್​ನಲ್ಲಿ ನಿಂತಿದ್ದ ಕಾರನ್ನು ಸುರಕ್ಷಿತವಾಗಿ ಬದಿಗೆ ನಿಲ್ಲಿಸಿದ ಪೊಲೀಸರು : ಇಬ್ಬರಿಗೆ ಇಲಾಖೆಯ ಬಹುಮಾನ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ದುಬೈ : ಆ ಕಾರು ಟ್ರಾಫಿಕ್​​ನಲ್ಲಿ ನಿಂತಿತ್ತು. ಇದನ್ನು ನೋಡಿದ ಇಬ್ಬರು ಪೊಲೀಸರು ತಕ್ಷಣ ಡ್ರೈವರ್​ನ ಸಹಾಯಕ್ಕೆ ಬಂದರು. ಅಲ್ಲದೆ, ಟ್ರಾಫಿಕ್​ಗೆ ಯಾವುದೇ ತೊಂದರೆ ಆಗದಂತೆ ಸುರಕ್ಷಿತವಾಗಿ ಕಾರನ್ನು ತಂದು ಬದಿಗೆ ನಿಲ್ಲಿಸಿದರು. ಈ ಇಬ್ಬರು ಪೊಲೀಸರ ಕಾರ್ಯ ಈಗ ದುಬೈ ಪೊಲೀಸ್ ಇಲಾಖೆಯ ಮೆಚ್ಚುಗೆ ಪಾತ್ರವಾಗಿದೆ.

ಈ ಇಬ್ಬರು ಪೊಲೀಸರು ಇಬ್ಬರು ಕಾರನ್ನು ತಳ್ಳಿದರೆ ಮತ್ತೊಬ್ಬರು ನಿಧಾನವಾಗಿ ಚಲಾಯಿಸಿ ಡ್ರೈವರ್​ಗೆ ಸಹಾಯ ಮಾಡಿದ್ದಾರೆ. ದುಬೈನ ಬ್ಯುಸಿ ರೋಡ್​ನಲ್ಲಿ ಈ ಘಟನೆ ನಡೆದಿದ್ದು, ಈ ಇಬ್ಬರು ಪೊಲೀಸರಿಗೆ ದುಬೈ ಪೊಲೀಸ್​ನ ಮುಖ್ಯಸ್ಥ ಮೇಜರ್​ ಜನರಲ್​​ ಅಬ್ದುಲ್​​​​ ಖಲೀಫಾ ಅಲ್​ ಮಾರ್ರಿ ಬಹುಮಾನ ನೀಡಿ ಶಹಬ್ಬಾಸ್​ ಹೇಳಿದ್ದಾರೆ. ಈ ವೀಡಿಯೋವನ್ನೂ ಪೊಲೀಸರು ರಿಲೀಸ್ ಮಾಡಿದ್ದಾರೆ.

ಅಲ್​ ವಸಲ್​ನ ಬ್ಯುಸಿ ರಸ್ತೆಯಲ್ಲಿ ಪೊಲೀಸರು ಮಾಡಿದ ಈ ಸಹಾಯ ದುಬೈನ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು. ಇಂತಹ ಕ್ರಮಗಳೇ ವಿಶ್ವದಲ್ಲೇ ದುಬೈ ಪೊಲೀಸರಿಗೆ ವಿಶೇಷ ಸ್ಥಾನಮಾನ ತರುತ್ತಿದೆ ಎಂದು ಜನ ಕೂಡಾ ಪೊಲೀಸರನ್ನು ಹೊಗಳಿದ್ದರು.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!