Tuesday , November 13 2018
ಕೇಳ್ರಪ್ಪೋ ಕೇಳಿ
Home / Gulf News / ಸರಸಕ್ಕೆ ಮಗಳು ಅಡ್ಡಿ : 5 ವರ್ಷದ ಕಂದನನ್ನೇ ಕೊಂದ ತಾಯಿ…!

ಸರಸಕ್ಕೆ ಮಗಳು ಅಡ್ಡಿ : 5 ವರ್ಷದ ಕಂದನನ್ನೇ ಕೊಂದ ತಾಯಿ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಮನಾಮಾ : 5 ವರ್ಷದ ಬಾಲಕಿಯ ಕೊಲೆಯ ಆರೋಪದಲ್ಲಿ ತಾಯಿ ಮತ್ತು ಆಕೆಯ ಪ್ರಿಯಕರನ್ನು ಕುವೈಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಈಗ ವಿಚಾರಣೆಯನ್ನು ಎದುರು ನೋಡುತ್ತಿದ್ದಾರೆ.

ಇತ್ತೀಚೆಗಷ್ಟೇ ಪೊಲೀಸ್​ ಇಲಾಖೆಗೆ ಮನೆಯ ಮೇಲಿಂದ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ದೂರವಾಣಿ ಕರೆಯೊಂದು ಬರುತ್ತದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಂದನ ದೇಹದಲ್ಲಿ ಹೊಡೆದಂತಹ ಗಾಯಗಳಿತ್ತು. ಅನುಮಾನಗೊಂಡ ಪೊಲೀಸರು ಪೋರೆನ್ಸಿಕ್​ ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡು ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.

ಇದಾದ ಬಳಿಕ ತಾಯಿಯನ್ನು ವಿಚಾರಣೆ ಮಾಡಿದಾಗ ಪೊಲೀಸರೇ ಅಚ್ಚರಿಯಾಗುವಂತಹ ವಿಷಯ ಹೊರಬಿದ್ದಿದೆ. 26 ವರ್ಷದ ಈ ಮಹಿಳೆ ಗಂಡನಿಂದ ವಿಚ್ಛೇದನ ಪಡೆದಿದ್ದಳು. ಈಕೆಗೆ 24 ವರ್ಷದ ಪ್ರಿಯಕರನಿದ್ದ. ಇವರಿಬ್ಬರು ಜೊತೆಯಾಗಿದ್ದ ಸಂದರ್ಭದಲ್ಲಿ ತನ್ನ ಐದು ವರ್ಷದ ಮಗಳು ಅಡ್ಡಿಯಾಗಿದ್ದಳು. ಇದರಿಂದ ಸಿಟ್ಟಿಗೆದ್ದ ತಾಯಿ ಮತ್ತು ಆಕೆಯ ಪ್ರಿಯಕರ ಐದರ ಕಂದನಿಗೆ ಚೆನ್ನಾಗಿ ಥಳಿಸಿದ್ದರು. ಪರಿಣಾಮ, ಮಗು ಸಾವನ್ನಪ್ಪಿತ್ತು.

ಇನ್ನು, ಆರೋಪಿ ಪ್ರಿಯಕರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈತ ಮಗುವಿಗೆ ಸದಾ ಹೊಡೆಯುತ್ತಿದ್ದ ಎಂದೂ ಆರೋಪಿಸಲಾಗಿದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!