Wednesday , January 24 2018
Home / Film News / Bollywood / ಚೌತಿಗಾಗಿ ಶೂಟಿಂಗ್​ನಲ್ಲಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಸಲ್ಮಾನ್ ಖಾನ್
Buy Bitcoin at CEX.IO

ಚೌತಿಗಾಗಿ ಶೂಟಿಂಗ್​ನಲ್ಲಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಸಲ್ಮಾನ್ ಖಾನ್

ಮುಂಬೈ : ಬಾಲಿವುಡ್​ ನಟ ಸಲ್ಮಾನ್ ಖಾನ್​ ಸದ್ಯ ಟೈಗರ್​ ಜಿಂದಾಗೇ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಏಕ್ತಾ ಟೈಗರ್​ನ ಎರಡನೇ ಭಾಗ ಈ ಚಿತ್ರ. ಈ ಚಿತ್ರದ ಶೂಟಿಂಗ್ ಅರಬ್ ರಾಷ್ಟ್ರದಲ್ಲಿ ನಡೆಯುತ್ತಿದೆ. ಆದರೆ, ಈ ಶೂಟಿಂಗ್​​ನಿಂದ ಒಂದಷ್ಟು ಗಂಟೆ ಸಲ್ಮಾನ್ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಅದಕ್ಕೆ ಕಾರಣ ಗಣೇಶ ಚತುರ್ಥಿ…

ಹೌದು ಗಣೇಶ ಹಬ್ಬವನ್ನು ಆಚರಿಸುವ ಸಲುವಾಗಿ ಸಲ್ಲೂ ಶೂಟಿಂಗ್​ನಲ್ಲಿ ಬ್ರೇಕ್ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಚೌತಿಯನ್ನು ಸಲ್ಮಾನ್ ಮನೆಯಲ್ಲಿ ದೊಡ್ಡ ಮಟ್ಟದಲ್ಲೇ ಆಚರಿಸಲಾಗುತ್ತದೆ. ಈ ತಿಂಗಳಾಂತ್ಯದಲ್ಲಿ ಗಣೇಶ ಹಬ್ಬ ಬರುತ್ತಿದೆ. ಹೀಗಾಗಿ, ಆ ದಿನ ಶೂಟಿಂಗ್​ನಲ್ಲಿ ಒಂದಷ್ಟು ಗಂಟೆ ಬ್ರೇಕ್​ ತೆಗೆದುಕೊಂಡು ಸಲ್ಮಾನ್ ಕುಟುಂಬದೊಂದಿಗೆ ಸೇರಲಿದ್ದಾರೆ.

ಇತ್ತೀಚೆಗೆ ಸಲ್ಮಾನ್​ ಚೌತಿ ಬಗ್ಗೆ ಮಾತನಾಡಿದ್ದರು. ‘ನಮ್ಮ ಕುಟುಂಬ ಗಣೇಶ ದೇವರನ್ನು ತುಂಬಾ ದೊಡ್ಡ ಮಟ್ಟದಲ್ಲೇ ನಂಬುತ್ತದೆ. ಹಲವು ವರ್ಷಗಳಿಂದ ಈ ಹಬ್ಬವನ್ನು ನಾವು ಅದ್ದೂರಿಯಾಗಿಯೇ ಆಚರಿಸಿಕೊಂಡು ಬರುತ್ತಿದ್ದೇವೆ. ಗಣೇಶ ಚೌತಿ ನಮ್ಮ ಇಡೀ ಕುಟುಂಬ ದೊಡ್ಡ ಮಟ್ಟದಲ್ಲಿ ಆಚರಿಸುವ ಹಬ್ಬ. ಮೂರು ದಿನಗಳ ಕಾಲ ಗಣೇಶನ ವಿಗ್ರಹವನ್ನು ನಮ್ಮ ಮನೆಯಲ್ಲಿ ಪೂಜೆ ಮಾಡುವುದು ನಮ್ಮ ಸಂಪ್ರದಾಯ’ ಎಂದು ಸಲ್ಮಾನ್ ಹೇಳಿದ್ದರು.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!