Friday , September 21 2018
ಕೇಳ್ರಪ್ಪೋ ಕೇಳಿ
Home / Film News / Tollywood / ಇಷ್ಟು ದಿನ ಅನುಷ್ಕಾ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ ಯಾಕೆ…? ಇಲ್ಲಿದೆ ಉತ್ತರ

ಇಷ್ಟು ದಿನ ಅನುಷ್ಕಾ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ ಯಾಕೆ…? ಇಲ್ಲಿದೆ ಉತ್ತರ

ಹೈದರಾಬಾದ್​ : ಅನುಷ್ಕಾ ಶೆಟ್ಟಿ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿ. ಆದರೆ, ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಕೆಲವೊಂದು ಚಿತ್ರಗಳ ಆಫರ್​​ಗಳನ್ನು ಕೈ ಬಿಟ್ಟಿದ್ದರು. ಬಾಹುಬಲಿಯ ಸಕ್ಸಸ್ ಬಳಿಕವೂ ನಟಿ ಅನುಷ್ಕಾ ಶೆಟ್ಟಿ ಯಾವೊಂದು ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಅನುಷ್ಕಾ ಯಾಕೆ ಹೀಗೆ ಮಾಡುತ್ತಿದ್ದರು ಎಂಬುದಕ್ಕೆ ಉತ್ತರ ಈಗ ಸಿಕ್ಕಿದೆ.

ಸದ್ಯ ಒಂದೊಂದೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಅನುಷ್ಕಾ ಈ ಹಿಂದೆ ಒಂದಷ್ಟು ಆಫರ್​ಗಳನ್ನು ತಾನೇಕೆ ಬಿಟ್ಟೆ ಎಂಬುದಕ್ಕೆ ಉತ್ತರ ಕೊಟ್ಟಿದ್ದಾರೆ. ಚಿತ್ರವೊಂದಕ್ಕೆ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ಬಾಹುಬಲಿ 2 ಚಿತ್ರಕ್ಕಾಗಿ ತೂಕ ಇಳಿಸಿದ್ದರು. ಆದರೆ, ಈ ನಡುವೆ ತಮ್ಮ ಮೈಕಟ್ಟು ಸೌಂದರ್ಯ ಕಳೆದುಕೊಳ್ಳುತ್ತಿದೆ ಎಂದು ಅರಿತ ಅನುಷ್ಕಾ ದೇಹಕ್ಕೊಂದು ಶೇಪ್ ಬರುವ ವರೆಗೆ ಸಿನೆಮಾದಿಂದ ದೂರ ಇದ್ದರು. ಅದೂ ಅಲ್ಲದೆ, ಪ್ರಭಾಸ್​ ಅಭಿನಯದ ಸಾಹೋ ಚಿತ್ರದ ಅವಕಾಶ ಕೂಡಾ ಅನುಷ್ಕಾ ದೇಹ ತೂಕ ಹೆಚ್ಚಿರುವ ಕಾರಣದಿಂದಲೇ ಕೈ ತಪ್ಪಿ ಹೋಗಿತ್ತು. ಇದಾದ ಬಳಿಕವೇ ಅನುಷ್ಕಾ ತೂಕ ಇಳಿಸಲು ಮನಸ್ಸು ಮಾಡಿದ್ದು, ಒಂದಷ್ಟು ದಿನ ಎಲ್ಲರಿಂದ ದೂರವೇ ಇದ್ದರು. ಅಲ್ಲದೆ, ಈ ಅವಧಿಯಲ್ಲಿ ಯೋಗ, ಡಯಟಿಂಗ್ ಮಾಡಿ ತೂಕ ಇಳಿಸಿ ದೇಹಸಿರಿಯನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದರು. ಇದೀಗ, ಒಂದಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡ ಅನುಷ್ಕಾ ಈಗ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!