Tuesday , February 19 2019
ಕೇಳ್ರಪ್ಪೋ ಕೇಳಿ
Home / Gulf News / ಶುಭಸುದ್ದಿ… : ಅರಬ್​ ರಾಷ್ಟ್ರಗಳಿಂದ ಭಾರತಕ್ಕೆ ಇನ್ನಷ್ಟು ವಿಮಾನಗಳು…

ಶುಭಸುದ್ದಿ… : ಅರಬ್​ ರಾಷ್ಟ್ರಗಳಿಂದ ಭಾರತಕ್ಕೆ ಇನ್ನಷ್ಟು ವಿಮಾನಗಳು…

ನವದೆಹಲಿ: ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಹೋಗುವವರಿಗೆ ಶುಭಸುದ್ದಿ…ಯುಎಇ ಮತ್ತು ಭಾರತದ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗುವ ಸಂದರ್ಭ ಈಗ ಬಂದಿದೆ. ಉಭಯ ದೇಶಗಳ ವಿಮಾನಯಾನ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದ್ದು, ಹೊಸ ವಿಮಾನ ಮತ್ತು ಹೊಸ ವಾಯುಮಾರ್ಗಗಳ ಸೇರ್ಪಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಅರಬ್​ ರಾಷ್ಟ್ರಗಳ ಭಾರತ ರಾಯಭಾರಿ ಡಾ.ಅಹಮ್ಮದ್​​ ಅಬ್ದುಲ್​ ರೆಹಮಾನ್​ ಅಲ್ ಬಾನಾ ಮತ್ತು ಭಾರತದ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್​ ಸಿನ್ಹಾ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಸಂಚಾರ ವ್ಯವಸ್ಥೆ ಮತ್ತು ಸೇವೆಗಳ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದೆ. ಪರಿಣಾಮ, ಯುಎಇಯ ನಾಗರಿಕ ವಿಮಾನ ಯಾನ ಇಲಾಖೆ ಮತ್ತು ಭಾರತದ ವಿಮಾನಯಾನ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳಲು ಅಧಿಕೃತ ಮಾತುಕತೆಗೆ ಒಪ್ಪಿಗೆ ನೀಡಲಾಗಿದೆ.

ಯುಎಇ ಭಾರತದ ವಿವಿಧ ಭಾಗಗಳನ್ನು ಸಂಪರ್ಕಿಸುವ ಏರ್​ಪೋರ್ಟ್​ಗೆ ಹೆಚ್ಚುವರಿಯಾಗಿ ವಿಮಾನಯಾನ ಆರಂಭಿಸಲು ಉತ್ಸುಕವಾಗಿದೆ. ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್​ 3 ಮತ್ತು 4 ರಂದು ಮಾತುಕತೆಗೆ ದಿನಾಂಕ ನಿಗದಿಯಾಗಿದೆ.

ಇದಲ್ಲದೆ, ಉಭಯ ನಾಯಕರು ಎರಡು ರಾಷ್ಟ್ರಗಳ ಸಂಬಂಧ ವೃದ್ಧಿಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!