Monday , September 24 2018
ಕೇಳ್ರಪ್ಪೋ ಕೇಳಿ
Home / Interval / ಒಂದು ಮುತ್ತಿನ ಕತೆ : ಆ ‘ಕಿಸ್’ ಶ್ರೀದೇವಿಯನ್ನು ಪೇಚಿಗೆ ಸಿಲುಕಿಸಿತ್ತು…!

ಒಂದು ಮುತ್ತಿನ ಕತೆ : ಆ ‘ಕಿಸ್’ ಶ್ರೀದೇವಿಯನ್ನು ಪೇಚಿಗೆ ಸಿಲುಕಿಸಿತ್ತು…!

ಕಿಸ್ಸಿಂಗ್ ಸನ್ನಿವೇಶಗಳು ಬಾಲಿವುಡ್​ನಲ್ಲಿ ಹೊಸದಲ್ಲ. ಬಾಲಿವುಡ್​ ಚಿತ್ರರಂಗದಲ್ಲಿ ಕಿಸ್ ಒಂದು ಭಾಗವಾಗಿ ಹೋಗಿ ಒಂದೆರಡು ದಶಕಗಳೇ ಕಳೆದಿವೆ.​​ ಕಿಸ್ಸಿಂಗ್ ದೃಶ್ಯಗಳೆನ್ನುವುದು ಚಿತ್ರರಂಗದಲ್ಲಿ ಸಾಮಾನ್ಯದಲ್ಲಿ ಸಾಮಾನ್ಯವಾಗಿ ಹೋಗಿದೆ. ನಟ, ನಟಿಯರು ಸ್ಕ್ರೀನ್​ನಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಳ್ಳುವುದು ಕೂಡಾ ನಮಗೆ ಹೊಸದು ಅಲ್ಲವೇ ಅಲ್ಲ. ಇದಕ್ಕೆ ಕಾರಣ, ಆಧುನೀಕರಣ, ಪ್ರಗತಿ…!

ಆದರೆ, ಇಂತಹ ಸಂದರ್ಭದಲ್ಲೂ ಕೆಲವೊಂದು ಕಲಾವಿದರು ಲಿಪ್​ ಲಾಕ್​ನಿಂದ ಬಹುದೂರವೇ ಇದ್ದಾರೆ.. ಸಲ್ಮಾನ್​ ಖಾನ್​, ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಎಂತಹ ನಟ ನಟಿಯರು ಕಿಸ್ಸಿಂಗ್ ಸೀನ್​ನಿಂದ ಬಹುದೂರ. ತುಂಬಾ ಖಡಾಖಂಡಿತವಾಗಿ ಕಟ್ಟುನಿಟ್ಟಾಗಿ ಇವರೆಲ್ಲಾ ಕಿಸ್ಸಿಂಗ್​ ಸನ್ನಿವೇಶದಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ ಎಂದು ಸತ್ಯ… ಈ ಕ್ಷಣದ ವರೆಗೂ ಇವರೆಲ್ಲಾ ಆನ್​ ಸ್ಕ್ರೀನ್​ ಕಿಸ್​ನಿಂದ ದೂರವೇ ಉಳಿದು ಗಮನ ಸೆಳೆದವರು.

ಖಂಡಿತಾ, ಈ ಕಿಸ್ಸಿಂಗ್​​ ದೃಶ್ಯದಲ್ಲಿ ನಟಿಸುವುದು ಎಲ್ಲರೂ ಇಷ್ಟವಾಗುವುದಿಲ್ಲ. ಇಂತಹ ಕಲಾವಿದರಲ್ಲಿ ಶ್ರೀದೇವಿ ಕೂಡಾ ಒಬ್ಬರು. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇರುವ ಶ್ರೀದೇವಿ ಅವರಿಗೆ ಆನ್​ ಸ್ಕ್ರೀನ್​ ಕಿಸ್ಸಿಂಗ್ ಎಂದರೆ ಬಹುದೊಡ್ಡ ಅಲರ್ಜಿ. ಇಂತಹ ಸೀನ್​ಗಳಿಂದ ಇವರು ಆರಂಭಿಕ ದಿನದಿಂದಲೂ ದೂರವೇ ಇದ್ದಾರೆ. ಹಾಗೆ ಇದ್ದರೂ ಶ್ರೀದೇವಿ ಅವರನ್ನು ಒಂದು ಕಿಸ್ಸಿಂಗ್ ದೃಶ್ಯ ಮಾತ್ರ ಬಲು ಮುಜುಗರಕ್ಕೀಡು ಮಾಡಿತ್ತು… ಅರೇ, ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಳ್ಳದ ಶ್ರೀದೇವಿಗೆ ಈ ಸಂಕಷ್ಟ ಬಂದಿದ್ದು ಹೇಗೆ ಎಂದು ನಿಮಗನಿಸಬಹುದು. ಅದು ನಿಜ ಕೂಡಾ. ಆದರೂ ಶ್ರೀದೇವಿ ಮುಜುಗರಕ್ಕೀಡಾಗಿ ಸಂಕಟಪಟ್ಟಿದ್ದು ಸತ್ಯ…

ಅದು 1989ರ ಸಂದರ್ಭ. ಶ್ರೀದೇವಿ ಆಗ ಮಿಥುನ್ ಚಕ್ರವರ್ತಿ ಜೊತೆ ಗುರು ಎಂಬ ಚಿತ್ರದಲ್ಲಿ ನಟಿಸುತ್ತಿದ್ದರು. ಉಮೇಶ್​ ಮೆಹ್ತಾ ಈ ಚಿತ್ರದ ನಿರ್ದೇಶಕ. ಈ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯವಿದೆ. ಈ ದೃಶ್ಯದಲ್ಲಿ ಸ್ವತಃ ಶ್ರೀದೇವಿ ಅವರೇ ನಟಿಸಿದ್ದಾರೆ ಎಂದು ಮೆಹ್ತಾ ಹೇಳಿಕೊಂಡಿದ್ದರಂತೆ. ಆದರೆ, ವಾಸ್ತವ ಅದಾಗಿರಲಿಲ್ಲ. ಈ ದೃಶ್ಯದ ಶೂಟಿಂಗ್ ಸಂದರ್ಭದಲ್ಲಿ ಬಾಡಿ ಡಬಲ್​​ ಮಾಡಲಾಗಿತ್ತು. ಅಂದರೆ, ಈ ದೃಶ್ಯವನ್ನು ಡೂಪ್​ ಬಳಸಿ ಚಿತ್ರೀಕರಿಸಲಾಗಿತ್ತು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಶ್ರೀದೇವಿ ಮಾಹಿತಿ ಕೊಟ್ಟಿದ್ದರು. ‘ಕಿಸ್ಸಿಂಗ್ ಸೀನ್​​ ಅಂದರೆ ನನಗೆ ಅಪಥ್ಯ.ಜೋಶಿಲಾಯ್​ ಚಿತ್ರದ ಸಂದರ್ಭದಲ್ಲಿ ನಿರ್ದೇಶಕ ಶೇಖರ್ ಕಪೂರ್​​​ ಸನ್ನಿ ಡಿಯೋಲ್ ಜೊತೆ ಕಿಸ್ಸಿಂಗ್ ಸನ್ನಿವೇಶದಲ್ಲಿ ನಟಿಸಬೇಕು ಎಂದು ಕೇಳಿಕೊಂಡಿದ್ದರು. ಆದರೆ, ನಾನು ಒಲ್ಲೆ ಎಂದೆ. ಅದಕ್ಕೆ ಕಪೂರ್ ಒಪ್ಪಿಕೊಂಡರು. ಆದರೆ, ಗುರು ಚಿತ್ರದ ಸಂದರ್ಭದಲ್ಲಿ ಆದ ಘಟನೆ ನನ್ನನ್ನು ತುಂಬಾ ಮುಜುಗರಕ್ಕೀಡು ಮಾಡಿತ್ತು. ಇದರಿಂದ ನಾನು ತುಂಬಾ ಸಂಕಟಪಟ್ಟಿದ್ದೆ. ಗುರು ಚಿತ್ರದ ಕಿಸ್ಸಿಂಗ್​ನಲ್ಲೇ ಬೇರೊಬ್ಬರು ನಟಿಸಿದ್ದರೂ ನಾನು ಅದನ್ನು ತೆರೆ ಮೇಲೆ ನೋಡಲು ಇಷ್ಟಪಟ್ಟಿರಲಿಲ್ಲ. ನನ್ನ ಹೆತ್ತವರು ಕೂಡಾ ಈ ದೃಶ್ಯದಿಂದ ತುಂಬಾ ನೊಂದಿದ್ದರು. ಹೀಗೆ ಇದ್ದರೂ ನಿರ್ದೇಶಕ ಉಮೇಶ್ ಮೆಹ್ತಾ ಈ ದೃಶ್ಯದಲ್ಲಿ ನಾನೇ ನಟಿಸಿದ್ದು ಎಂದು ಹೇಳಿಕೊಂಡಿದ್ದರು. ಇದು ನನ್ನ ಸಿನಿ ಜೀವನದಲ್ಲಿ ಅತ್ಯಂತ ಕೆಟ್ಟ ಅನುಭವ. ನಾನು ಇನ್ನೊಬ್ಬ ವ್ಯಕ್ತಿಗೆ ಯಾಕೆ ಕಿಸ್ ಕೊಡಬೇಕು ಎಂದು ನನಗೆ ಅರ್ಥ ಆಗುತ್ತಿಲ್ಲ. ಬೇರೆ ಯಾರು ಬೇಕಾದರೂ ಇಂತಹ ದೃಶ್ಯದಲ್ಲಿ ನಟಿಸಲಿ. ಆದರೆ, ನಾನಂತೂ ಇಂತಹ ದೃಶ್ಯದಲ್ಲಿ ನಟಿಸುವುದಿಲ್ಲ‘ ಎಂದು ಶ್ರೀದೇವಿ ಹೇಳಿಕೊಂಡಿದ್ದರು.

ಇನ್ನು, ರೇಪ್​ ಸೀನ್​ಗಳ ಬಗ್ಗೆಯೂ ಶ್ರೀದೇವಿ ಮಾತನಾಡಿದ್ದರು. ಇಂತಹ ದೃಶ್ಯ ಬಂದಾಗಲೂ ಶ್ರೀದೇವಿಗೆ ದೊಡ್ಡ ತಲೆನೋವಂತೆ. ಆದರೆ ಎಲ್ಲಾ ಹೀರೋಯಿನ್​ಗಳು ಇಂತಹ ದೃಶ್ಯಗಳಲ್ಲಿ ನಟಿಸಿದ್ದರಿಂದ ಅನಿವಾರ್ಯವಾಗಿ ಒಂದೆರಡು ಚಿತ್ರಗಳಲ್ಲಿ ಶ್ರೀದೇವಿ ಇಂತಹ ದೃಶ್ಯದಲ್ಲಿ ನಟಿಸಿದ್ದರಂತೆ. ಆದರೆ, ಇವೆಲ್ಲಾ ತುಂಬಾ ಹಿಂಸೆ ಕೊಡುವ ದೃಶ್ಯಗಳಂತೆ. ಕೆಲವೊಮ್ಮೆ ಕೈ ಬಳೆ ಒಡೆದು ತುಂಬಾ ನೋವಾಗುತ್ತದೆಯಂತೆ. ‘ಈಗ ಅದೃಷ್ಟವಶಾತ್​ ಇಂತಹ ದೃಶ್ಯಗಳು ಕಡಿಮೆ ಆಗಿದೆ. ಅದಕ್ಕೆ ಎಲ್ಲರೂ ಧನ್ಯವಾದ ಹೇಳಬೇಕು’ ಎನ್ನುವುದು ಶ್ರೀದೇವಿ ಮಾತು.

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!