Saturday , February 16 2019
ಕೇಳ್ರಪ್ಪೋ ಕೇಳಿ
Home / Interval / ಮಂಜು ವಾರಿಯರ್​​ ದಿಲೀಪ್ ಮೊದಲ ಪತ್ನಿ ಅಲ್ಲ…! : ಪೊಲೀಸರು ಬಿಚ್ಚಿಟ್ಟರು ಸ್ಫೋಟಕ ಮಾಹಿತಿ

ಮಂಜು ವಾರಿಯರ್​​ ದಿಲೀಪ್ ಮೊದಲ ಪತ್ನಿ ಅಲ್ಲ…! : ಪೊಲೀಸರು ಬಿಚ್ಚಿಟ್ಟರು ಸ್ಫೋಟಕ ಮಾಹಿತಿ

ಮಲಯಾಳಂನ ಖ್ಯಾತ ನಟ ದಿಲೀಪ್​ಗೆ ಈಗ ಸಂಕಷ್ಟದ ಕಾಲ… ತಾನೇ ತೋಡಿಕೊಂಡಿದ್ದ ಗುಂಡಿಗೆ ಬಿದ್ದು ಒದ್ದಾಡುತ್ತಿರುವ ದಿಲೀಪ್​ಗೆ ಕಷ್ಟಗಳು ಒಂದರ ಮೇಲೊಂದರಂತೆ ಕಾಡುತ್ತಲೇ ಇದೆ… ಈಗಾಗಲೇ ಬಹುಭಾಷಾ ನಟಿಗೆ ಲೈಂಗಿಕ ದೌರ್ಜನ್ಯ ನೀಡಿದ ಕೇಸ್​ನಲ್ಲಿ ಷಡ್ಯಂತ್ರ ರೂಪಿಸಿದ್ದ ಆರೋಪದಲ್ಲಿ ದಿಲೀಪ್​ ಜೈಲು ಸೇರಿ ಆಗಿದೆ… ಇನ್ನು, ಬಹುಭಾಷಾ ನಟ ಕಲಾಭವನ್ ಮಣಿ ಸಾವಿನ ಹಿಂದೆಯೂ ದಿಲೀಪ್​ ಕೈವಾಡ ಇದೆ ಎಂಬ ಮಾತುಗಳೂ ಬಲವಾಗಿ ಕೇಳಿ ಬರುತ್ತಲೇ ಇತ್ತು… ಈ ನಡುವೆ, ದಿಲೀಪ್​ ವೈವಾಹಿಕ ಜೀವನದ ಬಗ್ಗೆಯೂ ಹಲವಾರು ಮಾಹಿತಿಗಳು ಹೊರಬೀಳುತ್ತಿವೆ…

ಈಗ ಎಲ್ಲರೂ ಅಂದುಕೊಂಡಿರುವುದು ಮಂಜು ವಾರಿಯರ್​ ದಿಲೀಪ್​ ಮೊದಲ ಪತ್ನಿ ಅಂತ… ಇದು ಬಹಿರಂಗವಾಗಿ ಜನರಿಗೆ ಗೊತ್ತಿರುವ ಸತ್ಯ… ಆದರೆ, ವಾಸ್ತವ ಇದಲ್ಲ. ಮಂಜು ವಾರಿಯರ್​ ದಿಲೀಪ್​ ಮೊದಲ ಪತ್ನಿ ಅಲ್ಲವೇ ಅಲ್ಲ…! ಪೊಲೀಸರಿಂದ ಸಿಕ್ಕ ಸುಳಿವನ್ನೇ ಇಟ್ಟುಕೊಂಡು ಕೇರಳದ ಪ್ರಮುಖ ಮಾಧ್ಯಮವೊಂದು ಸ್ಫೋಟಕ ವರದಿ ಪ್ರಕಟಿಸಿದೆ… ಅಂದರೆ, ಮಂಜು ಅವರನ್ನು ಮದುವೆಯಾಗುವ ಮುಂಚೆಯೇ ದಿಲೀಪ್​​​​​ ಬೇರೊಂದು ಮಹಿಳೆಗೆ ತಾಳಿ ಕಟ್ಟಿದ್ದರಂತೆ..!

ಅದು ದಿಲೀಪ್​ ಚಿತ್ರರಂಗಕ್ಕೆ ಬರುವ ಮುಂಚಿನ ದಿನಗಳು… ಅಂದರೆ ಸುಮಾರು 1990ರ ಕಾಲಘಟ್ಟ… ಈ ಸಂದರ್ಭದಲ್ಲಿ ದಿಲೀಪ್​ ತನ್ನ ದೂರದ ಸಂಬಂಧಿಯೊಬ್ಬರನ್ನು ವರಿಸಿದ್ದರು. ಅಲುವಾ ರಿಜಿಸ್ಟರ್​ ಆಫೀಸ್​ನಲ್ಲಿ ಇವರಿಬ್ಬರ ವಿವಾಹ ಮುಗಿದು ಹೋಗಿತ್ತು. ಇದಾದ ಬಳಿಕ ದಿಲೀಪ್​ ಚಿತ್ರರಂಗಕ್ಕೆ ಕಾಲಿಟ್ಟರು… ಇಲ್ಲಿ ದಿಲೀಪ್​ ಜೀವನದ ಗತಿಯೇ ಬದಲಾಗಿತ್ತು… ಈ ಸಂದರ್ಭದಲ್ಲಿ ದಿಲೀಪ್​ಗೆ ಹತ್ತಿರವಾಗಿದ್ದು ನಟಿ ಮಂಜು ವಾರಿಯರ್​​…

ಮಂಜು ವಾರಿಯರ್​ ಜೊತೆಗೆ ಶುರುವಾದ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿತ್ತು… ಆದರೆ, ಈ ಸುದ್ದಿ ದಿಲೀಪ್​ ಪತ್ನಿಗೆ ತಲುಪಲು ತುಂಬಾ ಹೊತ್ತು ಬೇಕಾಗಿರಲಿಲ್ಲ. ಸಂಬಂಧಿಕರು ದಿಲೀಪ್​ ಪ್ರೇಮದಾಟವನ್ನು ಹೆಂಡತಿಗೆ ತಿಳಿಸಿದರು. ಇದರಿಂದ ದಂಪತಿ ನಡುವೆ ಸದಾ ಜಗಳ ನಡೆಯುತ್ತಿತ್ತು. ಕೊನೆಗೆ ಇಬ್ಬರೂ ದೂರವಾಗಿಯೇ ಹೋದರು. ಸದ್ಯ ಈ ಮಹಿಳೆ ಅರಬ್ ರಾಷ್ಟ್ರದಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆಯಂತೆ…

ಹೀಗೆ, ತಮ್ಮ ಬದುಕಿನಿಂದ ಮೊದಲ ಹೆಂಡತಿ ದೂರವಾದ ಬಳಿಕ ದಿಲೀಪ್​ ಮದುವೆಯಾಗಿದ್ದು ಮಂಜು ವಾರಿಯರ್​ರನ್ನು…! 1998ರ ಅಕ್ಟೋಬರ್​​​​ 20ರಂದು ಇವರಿಬ್ಬರ ವಿವಾಹ ನಡೆದಿತ್ತು.. ಸಿನಿರಂಗದಲ್ಲಿ ಬ್ಯುಸಿ ಇದ್ದಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಂಜು ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದರು. ಇದು ಮಂಜು ಅಭಿಮಾನಿಗಳಿಗೆ ತುಂಬಾ ನಿರಾಸೆ ತಂದಿತ್ತು…

ಆರಂಭದಲ್ಲಿ ಇವರ ಮದುವೆಗೆ ಎರಡೂ ಕುಟುಂಬದ ವಿರೋಧ ಇದ್ದರೂ ಬಳಿಕ ಈ ವೈಮನಸ್ಸುಗಳು ದೂರವಾಗಿ ಅಲುವಾದಲ್ಲೇ ಕುಟುಂಬದೊಂದಿಗೆ ಇವರಿಬ್ಬರು ವಾಸ ಮಾಡಲು ಶುರು ಮಾಡಿದ್ದರು… ಕಾಲ ಹೀಗೆಯೇ ಸಾಗುತ್ತಿತ್ತು… ಮದುವೆ ಬಳಿಕ ದಿಲೀಪ್​ ಕೆರಿಯರ್​ನ ಗ್ರಾಫ್​ ಕೂಡಾ ಬದಲಾಗುತ್ತಾ ಹೋಯಿತು… ಹಲವು ಸೂಪರ್ ಹಿಟ್​ಗಳನ್ನು ಕೊಟ್ಟ ದಿಲೀಪ್​ ಮಾಲಿವುಡ್​ನಲ್ಲಿ ಸ್ಟಾರ್ ಆಗಿ ಮೆರೆಯಲು ಆರಂಭಿಸಿದರು.

ಆದರೆ, ಗುರುವಾಯೂರಿನ ಶ್ರೀಕೃಷ್ಣ ದೇವಾಲಯದಲ್ಲಿ ಮಂಜು ವಾರಿಯರ್​ ಅವರ ಅರಂಗೇಟ್ರಂ ವೇಳೆ ಪರಿಸ್ಥಿತಿ ತೀರಾ ಬದಲಾಗಿತ್ತು. ಆರಂಭದಲ್ಲಿ ಮಂಜು ಅರಂಗೇಟ್ರಂ ಅನ್ನು ಸ್ವತಃ ದಿಲೀಪ್ ಅವರೇ ಘೋಷಿಸಿದ್ದರೂ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದು ದಂಪತಿ ನಡುವೆ ವೈಮನಸ್ಸು ಶುರುವಾಗಿದೆ ಎಂಬ ವಾದದ ಹುಟ್ಟಿಗೆ ಕಾರಣವಾಯ್ತು.. ಬಳಿಕ ಇದು ನಿಜ ಕೂಡಾ ಆಗಿತ್ತು… ದಂಪತಿ ಅದಾಗಲೇ ಮನಸ್ಸು ಮುರಿದು ಕೊಂಡಿದ್ದರು… ಅದಕ್ಕೆ ಕಾರಣ ಮತ್ತೋರ್ವ ನಟಿ ಕಾವ್ಯಾ ಮಾಧವನ್​​​…

ಮದುವೆಯಾಗಿ ವಿಚ್ಚೇಧನ ಪಡೆದಿದ್ದ ನಟಿ ಕಾವ್ಯಾ ಮಾಧವನ್​ ಮತ್ತು ದಿಲೀಪ್​ ನಡುವೆ ಪ್ರೇಮಾಂಕುರವಾಗಿತ್ತು ಎಂಬ ಸುದ್ದಿ ಆ ಟೈಮ್​ನಲ್ಲಿ ದೊಡ್ಡದಾಗಿಯೇ ಹಬ್ಬಿತ್ತು. ಇವೆಲ್ಲದರಿಂದ ಮನನೊಂದ ಮಂಜು ದಿಲೀಪ್ ಮನೆ ತ್ಯಜಿಸಿ ತ್ರಿಶೂರ್​ನಲ್ಲಿದ್ದ ತಮ್ಮ ಹೆತ್ತವರ ಮನೆಯಲ್ಲಿ ಹೋಗಿ ವಾಸ ಮಾಡಲು ಶುರು ಮಾಡಿದ್ದರು. ಮಗಳು ಮೀನಾಕ್ಷಿಯೊಂದಿಗೆ ದಿಲೀಪ್​ ಅಲುವಾದಲ್ಲೇ ನೆಲೆಸಿದ್ದರು. ಇದಾದ ಬಳಿಕ 2014ರಲ್ಲಿ ಮಂಜು ಮತ್ತೆ ಬಣ್ಣದ ಲೋಕಕ್ಕೆ ಮರಳಿದರು… 2015ರ ಜನವರಿಯಲ್ಲಿ ದಿಲೀಪ್ ಮತ್ತು ಮಂಜು ಅಧಿಕೃತವಾಗಿಯೇ ವಿಚ್ಛೇದನ ಪಡೆದು ದೂರವಾದರು… ಅದಾಗಲೇ ಕಾವ್ಯಾ ಮತ್ತು ದಿಲೀಪ್ ಹೆಸರು ಗಾಸಿಪ್​ ಕಾಲಂನಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದರಿಂದ ದಿಲೀಪ್​ ಕೂಡಾ ಹಾಗೆಯೇ ಬದುಕಲು ನಿರ್ಧರಿಸಿದ್ದರು. ಕಾವ್ಯಾ ಮತ್ತು ದಿಲೀಪ್​ ನವೆಂಬರ್​ 25, 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಇದುವರೆಗೆ ಹರಡಿದ್ದ ಗಾಸಿಪ್​ಗಳನ್ನು ನಿಜ ಮಾಡಿದರು… ಕೊಚ್ಚಿಯಲ್ಲಿ ಇವರಿಬ್ಬರ ವಿವಾಹ ಸಮಾರಂಭ ನಡೆಯಿತು.
ಬಹುಭಾಷಾ ನಟಿಯ ದೌರ್ಜನ್ಯಕ್ಕೆ ರೂಪಿಸಿದ ಕೇಸ್​ನಲ್ಲಿ ಸದ್ಯ ದಿಲೀಪ್​ ಜೈಲೂಟ ಉಣ್ಣುತ್ತಿದ್ದಾರೆ. ಅಸಲಿಗೆ ತಮ್ಮ ಮತ್ತು ಕ್ಯಾವ್ಯಾ ಮಾಧವನ್​ ಪ್ರೇಮದ ವಿಚಾರವನ್ನು ಆಗಿನ ಪತ್ನಿ ಮಂಜು ವಾರಿಯರ್​ಗೆ ತಿಳಿಸುತ್ತಿದ್ದರು ಎಂಬ ಸೇಡಿನ ಕಾರಣಕ್ಕೇ ದಿಲೀಪ್​ ಈ ಷಡ್ಯಂತ್ರ ರೂಪಿಸಿದ್ದರು ಎಂದು ಹೇಳಲಾಗುತ್ತಿದೆ… ಅದರಂತೆ ಇದೇ ವರ್ಷದ ಫ್ರೆಬ್ರವರಿ 17 ರಂದು ಶೂಟಿಂಗ್ ಮುಗಿಸಿ ಬರುತ್ತಿದ್ದ ನಟಿಯನ್ನು ತನ್ನ ಸಹಚರ ಪಲ್ಸರ್ ಸುನಿ ಮೂಲಕ ಕಾರಿನಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ ನೀಡುವಂತೆ ಮಾಡಿದ್ದರಂತೆ ದಿಲೀಪ್​… ಈ ಪ್ರಕರಣ ಈಗ ದಿಲೀಪ್​ಗೆ ಬಹುದೊಡ್ಡ ಕುಣಿಕೆಯಾಗಿ ಬಿಗಿಯುತ್ತಿದೆ…

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!