Saturday , December 15 2018
ಕೇಳ್ರಪ್ಪೋ ಕೇಳಿ
Home / News NOW / ಮಹಿಳೆ ಸರಗಳವಿಗೆ ಹೋಗಿ ಸಿಕ್ಕಿಬಿದ್ದ ಆಸ್ಪತ್ರೆ ರಿಸೆಷನಿಸ್ಟ್​​…!

ಮಹಿಳೆ ಸರಗಳವಿಗೆ ಹೋಗಿ ಸಿಕ್ಕಿಬಿದ್ದ ಆಸ್ಪತ್ರೆ ರಿಸೆಷನಿಸ್ಟ್​​…!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕೆಲದಿನಗಳ ಹಿಂದೆ ಸರಗಳ್ಳರ ಕಾಟ ಹೆಚ್ಚಾಗಿತ್ತು. ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದರು. ಆದರೆ, ಬರೀ ರಸ್ತೆಯಲ್ಲಿ ಮಾತ್ರ ಅಲ್ಲ ಹೋದಲ್ಲೆಲ್ಲಾ ಈಗ ಮೈಯೆಲ್ಲಾ ಕಣ್ಣಾಗಿರಬೇಕಾದಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಯಾಕೆಂದರೆ, ಮಹಿಳೆಯ ಸರಗಳವಿಗೆ ಯತ್ನಿಸಿದ್ದ ಆಸ್ಪತ್ರೆ ರಿಸೆಷ್ಷನಿಸ್ಟ್​ ಒಬ್ಬ ಈಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

ಯಲಹಂಕ ಉಪನಗರದ ಕೆ.ಕೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರಿಸೆಷ್ಷನಿಸ್ಟ್​​ ಅಂಜಿನಪ್ಪನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಾಜಾನುಕುಂಟೆ ಮೂಲದ ಈ ಅಂಜಿನಪ್ಪ ರಾತ್ರಿಪಾಳಿಯಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಮೊನ್ನೆ ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾ ಎಂಬ ಮಹಿಳೆಯ ಸರಗಳವಿಗೆ ಈತ ಯತ್ನ ಮಾಡಿದ್ದ. ಮುಂಜಾನೆ ೪-೩೦ ರ ಸಮಯದಲ್ಲಿ ಆಂಜಿನಪ್ಪ ಈ ಕೃತ್ಯವೆಸಗಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಇದಾದ ಬಳಿಕ ಆಸ್ಪತ್ರೆಯಿಂದ ಈತ ಎಸ್ಕೇಪ್ ಆಗಿದ್ದ. ಇನ್ನು, ಈ ಘಟನೆ ಬಳಿಕ ವಿದ್ಯಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿ ಆಂಜಿನಪ್ಪನನ್ನು ಬಂಧಿಸಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!