Monday , January 21 2019
ಕೇಳ್ರಪ್ಪೋ ಕೇಳಿ
Home / Mumbai Mail / ಮುಂಬೈ ಬಿಲ್ಲವ ಎಸೋಸಿಯೇಷನ್​​ನ ಯಕ್ಷಗಾನ ಕಲಾ ಪ್ರಶಸ್ತಿ : ಪ್ರಸಂಗ ಕರ್ತ ಎಂ.ಟಿ.ಪೂಜಾರಿ ಆಯ್ಕೆ

ಮುಂಬೈ ಬಿಲ್ಲವ ಎಸೋಸಿಯೇಷನ್​​ನ ಯಕ್ಷಗಾನ ಕಲಾ ಪ್ರಶಸ್ತಿ : ಪ್ರಸಂಗ ಕರ್ತ ಎಂ.ಟಿ.ಪೂಜಾರಿ ಆಯ್ಕೆ

ಮುಂಬೈ : ಮುಂಬೈ ಬಿಲ್ಲವ ಎಸೋಸಿಯೇಷನ್ ಪ್ರತಿವರ್ಷ ಕೊಡಮಾಡುವ ಯಕ್ಷಗಾನ ಕಲಾ ಪ್ರಶಸ್ತಿಗೆ ಈ ಬಾರಿ ಖ್ಯಾತ ಪ್ರಸಂಗಕರ್ತ ಎಂ.ಬಿ.ಪೂಜಾರಿ ಆಯ್ಕೆಯಾಗಿದ್ದಾರೆ. ಆಗಸ್ಟ್​ 26 ರಂದು ಬಿಲ್ಲವ ಭವನದಲ್ಲಿ ನಡೆಯುವ ಸಮಾರಂಭದಲ್ಲಿ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳೊಂದಿಗೆ ಎಂ.ಬಿ.ಪೂಜಾರಿ ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ.

ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್​​​ನ ಕಾರ್ಯಾಧ್ಯಕ್ಷ ಜಯ ಸಿ ಸುವರ್ಣ ಅವರ ಮಾತೃಶ್ರೀ ದಿವಂಗತ ಅಚ್ಚು ಚಂದು ಸುವರ್ಣರ ಸ್ಮರಣಾರ್ಥ ಸ್ಥಾಪಿಸಿದ ಶಾಶ್ವತ ನಿಧಿಯಿಂದ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಬಿಲ್ಲವ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಾಲ್ಕೂವರೆ ದಶಕದ ಯಕ್ಷಗಾನದ ಸೇವೆ ಗಮನಿಸಿ ಎಂ.ಟಿ.ಪೂಜಾರಿ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಯಕ್ಷಗಾನದ ಹಿರಿಯ ಸಂಘಟಕ, ಕಲಾವಿದ ಎಚ್​.ಬಿ.ಎಲ್​.ರಾವ್​ ಅವರ ಅಧ್ಯಕ್ಷತೆಯಲ್ಲಿ ಈ ನಿರ್ಣಾಯಕ ಸಭೆ ನಡೆದಿತ್ತು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!