Saturday , January 19 2019
ಕೇಳ್ರಪ್ಪೋ ಕೇಳಿ
Home / Interval / ರಾಜೇಶ್​ ಖನ್ನಾರ 100 ಕೋಟಿ ಆಸ್ತಿಗಾಗಿ ನಿಲ್ಲದ ಜಗಳ…!

ರಾಜೇಶ್​ ಖನ್ನಾರ 100 ಕೋಟಿ ಆಸ್ತಿಗಾಗಿ ನಿಲ್ಲದ ಜಗಳ…!

ರಾಜೇಶ್​ ಖನ್ನಾ… ಬಾಲಿವುಡ್​ನ ಮೊದಲ ಸೂಪರ್​ಸ್ಟಾರ್​… ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಆಳಿದ ಚೆಲುವ ಇವರು… ಚಿತ್ರರಂಗದಲ್ಲಿ ಮೇಲೆ ಬರಲು ಗಾಡ್​ ಫಾದರ್​ ಖಂಡಿತಾ ಬೇಕು. ಆದರೆ, ಖನ್ನಾ ಹಾಗಲ್ಲ. ಯಾವುದೇ ಗಾಡ್​ ಫಾದರ್​ ಇಲ್ಲದೆ ಮೇಲೆ ಬಂದ ಮೇರುಪ್ರತಿಭೆ ಇವರು… ಇದೇ ಖನ್ನಾ ಅಸಾಮಾನ್ಯ ಪ್ರತಿಭೆಗೆ ಸಾಕ್ಷಿ…

1942 ಡಿಸೆಂಬರ್​​​ 29ಕ್ಕೆ ಜನನ. ಜತಿನ್​ ಖನ್ನಾ ಎಂಬುದು ಇವರ ಮೊದಲ ಹೆಸರು. ಚಿತ್ರನಟ, ನಿರ್ಮಾಪಕ, ರಾಜಕಾರಣಿಯಾಗಿ ಗಮನ ಸೆಳೆದವರು ಖನ್ನಾ… ಭಾರತ ಸಿನೆಮಾದ ನಿಜವಾದ ಸೂಪರ್​ಸ್ಟಾರ್​ ಎಂಬ ಹೆಗ್ಗಳಿಗೆ ಪಾತ್ರರಾದವರು ರಾಜೇಶ್​…1969 ರಿಂದ 1971ರ ವರೆಗೆ 15 ಸತತ ಹಿಟ್​ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ರಾಜೇಶ್​ ಅವರದ್ದು.. ಈ ದಾಖಲೆ ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಎಂಬುದು ಕೂಡಾ ಸತ್ಯ…

ಆಕ್ರಿ ಖಾತ್​ ಎಂಬ ಚಿತ್ರದ ಮೂಲಕ 1966ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು ಖನ್ನಾ… ಅಲ್ಲಿಂದ ಶುರುವಾದ ಇವರ ಸಿನಿ ಜೀವನ ಖ್ಯಾತಿಯ ಉತ್ತುಂಗಕ್ಕೇರಿತ್ತು… ಒಂದು ಕಾಲದಲ್ಲಿ ಖನ್ನಾ ಮುಟ್ಟಿದ್ದೆಲ್ಲಾ ಚಿನ್ನ…ಚಿತ್ರವೊಂದಕ್ಕೆ ಯುನೈಟೆಡ್​ ಪ್ರೊಡ್ಯೂಸರ್ಸ್​ ಅಸೋಸಿಯೇಷನ್​ ಹೊಸಬರ ಹುಡುಕಾಟದಲ್ಲಿತ್ತು. ಸುಮಾರು ಹತ್ತು ಸಾವಿರದಷ್ಟು ಆಕಾಂಕ್ಷಿಗಳು ಇಲ್ಲಿ ಅರ್ಜಿ ಹಾಕಿದ್ದರು. ಆದರೆ, ಈ ಹತ್ತು ಸಾವಿರ ಮಂದಿಯಲ್ಲಿ ಆಯ್ಕೆಯಾದವರು ಇದೇ ರಾಜೇಶ್​ ಖನ್ನಾ…!  ಇದು ಸುಲಭದ ಮಾತಂತೂ ಖಂಡಿತಾ ಅಲ್ಲ.

ತಮ್ಮ ಸಿನಿ ಜೀವನದಲ್ಲಿ ಖನ್ನಾ ಒಟ್ಟು 168 ಚಿತ್ರಗಳು, 12 ಕಿರುಚಿತ್ರಗಳನ್ನು ಮಾಡಿದ್ದಾರೆ. ಮೂರು ಬಾರಿ ಫಿಲಂಫೇರ್​ ಪ್ರಶಸ್ತಿಯನ್ನೂ ಇವರು ತನ್ನದಾಗಿಸಿಕೊಂಡಿದ್ದರು. ಖನ್ನಾ ಮಾಡಿದ ಒಂದೊಂದು ಚಿತ್ರವೂ ಒಂದೊಂದು ಮುತ್ತುಗಳಿದ್ದಂತೆ… 1970 ರಿಂದ 1987ರ ವರೆಗೆ ಬಾಲಿವುಡ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಖನ್ನಾ… ಇದು ಖನ್ನಾ ಖ್ಯಾತಿಗೆ ಸಾಕ್ಷಿ…

ರಾಜಕೀಯವಾಗಿಯೂ ಸಕ್ರಿಯರಾಗಿದ್ದ ಖನ್ನಾ, 1992 ರಿಂದ 1996ರ ವರೆಗೆ ಇವರು ಕಾಂಗ್ರೆಸ್​ ಪಕ್ಷದಿಂದ ಲೋಕಸಭೆಗೂ ಆಯ್ಕೆಯಾಗಿದ್ದರು. ಹೀಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಂದರ್ಭದಲ್ಲೇ ಖನ್ನಾ ವೈವಾಹಿಕ ಜೀವನಕ್ಕೂ ಕಾಲಿಟ್ಟರು. ಡಿಂಪಲ್​ ಕಪಾಡಿಯಾ ಖನ್ನಾ ಪತ್ನಿ… ಡಿಂಪಲ್​​ ಬಾಬಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುವ ಎಂಟು ತಿಂಗಳ ಮುಂಚೆ ಖನ್ನಾ ಇವರನ್ನು ವರಿಸಿದ್ದರು. ಇದೇ ಡಿಂಪಲ್​ ನಟಿ ಟ್ವಿಂಕಲ್ ಖನ್ನಾ ತಾಯಿ… ಅಕ್ಷಯ್​ ಕುಮಾರ್​​ ಇವರ ಅಳಿಯ…

ಖ್ಯಾತಿಯ ಉತ್ತುಂಗದಲ್ಲಿದ್ದ ಖನ್ನಾ ಆಶೀರ್ವಾದ್ ಎಂಬ ಬಂಗಲೆಯನ್ನು ಖರೀದಿಸಿದರು. ಈ ಬಂಗಲೆಯ ಈಗೀನ ಮೌಲ್ಯ ಸುಮಾರು ನೂರು ಕೋಟಿಗೂ ಅಧಿಕ… ಈ ಬಂಗಲೆಗೆ ಬಂದ ಮೇಲೆ ಖನ್ನಾ ಇನ್ನಷ್ಟು ಪ್ರಸಿದ್ಧಿಯ ಕೀರ್ತಿ ಶಿಖರಕ್ಕೇರಿದರು… ಇಂತಹ ಸೂಪರ್​ಸ್ಟಾರ್​ ಕೊನೆಯ ದಿನಗಳು ಮಾತ್ರ ತುಂಬಾ ದುರಂತಮಯ… ಕೋಟ್ಯಂತರ ರೂಪಾಯಿ ಗಳಿಸಿದರೂ ನೆಮ್ಮದಿಯಂತೂ ಖಂಡಿತಾ ಇರಲಿಲ್ಲ… ಅದು 1985ರ ಕಾಲ… ಆಗ ಸೂಪರ್​ಸ್ಟಾರ್ ರಾಜೇಶ್ ಖನ್ನಾ ಅಕ್ಷರಶಃ ಅನಾಥರಾಗಿಯೇ ಆಗಿ ಹೋಗಿದ್ದರು. ಸದಾ ಸಿನೆಮಾ ಚರ್ಚೆಗಳಿಂದ ತುಂಬಿರುತ್ತಿದ್ದ ಆಶಿರ್ವಾದ್​​ ಬಂಗಲೆ ಕೂಡಾ ರಾಜೇಶ್ ಖನ್ನಾ ಕೊನೆಗಾಲದಲ್ಲಿ ಬಣಗುಡುತ್ತಿತ್ತು… ಒಂದು ಹಂತದಲ್ಲಿ ಖನ್ನಾರನ್ನು ಚಿತ್ರರಂಗವೇ ಮರೆತು ಹೋಗಿತ್ತು…

ಖನ್ನಾ ಮತ್ತೆ ನೆನಪಾಗಿದ್ದು ಬಹುಶಃ ಅವರು ನಿಧನರಾದ ಸಂದರ್ಭದಲ್ಲಿಯೇ… 2012ರ ಜುಲೈ 18ಕ್ಕೆ ಖನ್ನಾ ಯುಗಾಂತ್ಯವಾಗುತ್ತದೆ… ಆಗ ಚಿತ್ರರಂಗದ ಗಣ್ಯರೆಲ್ಲಾ ಬಂದು ಕಂಬನಿ ಮಿಡಿದಿದ್ದರು… 2013ರ ಏಪ್ರಿಲ್​ನಲ್ಲಿ ಮರಣೋತ್ತರವಾಗಿ ಖನ್ನಾರಿಗೆ ಪದ್ಮಭೂಷಣ ಗೌರವ ಕೂಡಾ ಸಲ್ಲುತ್ತದೆ… ಬಳಿಕ ಈ ಸೂಪರ್​ಸ್ಟಾರ್ ಮತ್ತೆ ಮರೆತೇ ಹೋಗುತ್ತಾರೆ…

ಆದರೆ, ಮರೆತೇ ಹೋಗಿದ್ದ ಖನ್ನಾ ಆಗೊಮ್ಮೆ ಈಗೊಮ್ಮೆ ಸುದ್ದಿಗೆ ಬರುತ್ತಾರೆ… ಅದಕ್ಕೆ ಕಾರಣ ಎರಡು… ಒಂದು ಅವರು ಬಿಟ್ಟು ಹೋದ 100 ಕೋಟಿ ಮೌಲ್ಯದ ಆಸ್ತಿ ಮತ್ತು ಖನ್ನಾರೊಂದಿಗೆ ಲಿವಿಂಗ್ ಇನ್ ಪಾರ್ಟರ್​ ಆಗಿದ್ದೆ ಎಂದು ಹೇಳಿಕೊಳ್ಳುತ್ತಿರುವ ಅನಿತಾ ಅಡ್ವಾಣಿ.

1960ರ ನಂತರ ಮತ್ತು 1970ರ ಆರಂಭದಲ್ಲಿ ಖನ್ನಾ ಫ್ಯಾಷನ್​ ಡಿಸೈನರ್ ಮತ್ತು ನಟಿ ಅಂಜು ಮಹೇಂದ್ರು ಅವರೊಂದಿಗೆ ಪ್ರೀತಿಗೆ ಬಿದ್ದಿದ್ದರು. ಈ ಜೋಡಿ ಸುಮಾರು ಏಳು ವರ್ಷಗಳ ಕಾಲ ಪ್ರೇಮಲೋಕದಲ್ಲಿ ವಿಹರಿಸಿತ್ತು. ಆದರೆ, ನಂತರ ಅದೇನಾಯ್ತೋ ಈ ಜೋಡಿ ದೂರವಾಗಿತ್ತು. ಇದಾದ ಬಳಿಕ ಸುಮಾರು 17 ವರ್ಷಗಳ ಇವರಿಬ್ಬರು ಪರಸ್ಪರ ಮಾತನಾಡಿಯೇ ಇರಲಿಲ್ಲವಂತೆ…

1973ರಲ್ಲಿ ಖನ್ನಾ ವರಿಸಿದ್ದು ನಟಿ ಡಿಂಪಲ್​ ಕಪಾಡಿಯಾರನ್ನು… ಇವರ ದಾಂಪತ್ಯದ ಕುರುಹಾಗಿ ಇಬ್ಬರು ಹೆಣ್ಣು ಮಕ್ಕಳು ಕೂಡಾ ಜನರಿಸಿದರು. ಒಬ್ಬಾಕೆ ಟ್ವಿಂಕಲ್ ಮತ್ತೊಬ್ಬಾಕೆ ರಿಂಕಿ… ಆದರೆ, ಈ ಜೋಡಿಯೂ 1984ರಲ್ಲಿ ದೂರವಾಯ್ತು ಎಂದು ಹೇಳಲಾಗುತ್ತಿದೆ… ಆದರೆ, ವಿಚ್ಛೇಧನದ ಪ್ರಕ್ರಿಯೆ ಪೂರ್ಣಗೊಳಿಸದೆಯೇ ಇವರಿಬ್ಬರು ದೂರವಾಗಿ ಬದುಕಲು ಆರಂಭಿಸಿದ್ದರು ಎನ್ನುತ್ತದೆ ಬಿ ಟೌನ್​​​​ ಸುದ್ದಿಗಳು…

ಈ ನಡುವೆ, ಖನ್ನಾ ಹೆಸರು ಕೇಳಿ ಬಂದಿದ್ದರು ನಟಿ ಟೀನಾ ಮುನಿಮ್​ ಜೊತೆ… ಇವರು ಒಟ್ಟಾಗಿ ಚಿತ್ರದಲ್ಲಿ ನಟಿಸಿದ್ದು ಪ್ರೀತಿಗೂ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿತ್ತು… ಆದರೆ, ಈ ಸಂಬಂಧವೂ 1987ರಲ್ಲಿ ಕೊನೆಯಾಗಿತ್ತು…

ಪತ್ನಿ ಡಿಂಪಲ್ ಖನ್ನಾರಿಂದ ದೂರವಾಗಿ ಬದುಕುತ್ತಿದ್ದರೂ ಇವರಿಬ್ಬರ ಸಂಬಂಧ ಮಾತ್ರ ಚೆನ್ನಾಗಿಯೇ ಇತ್ತು. ದಂಪತಿಗಳಾಗಿ ಇಲ್ಲದಿದ್ದರೂ ಒಟ್ಟಾಗಿ ಪಾರ್ಟಿ, ಕುಟುಂಬದ ಕಾರ್ಯಕ್ರಮದಲ್ಲಿ ಇವರಿಬ್ಬರು ಭಾಗವಹಿಸುತ್ತಿದ್ದರು ಮತ್ತು ಮಕ್ಕಳ ಜೊತೆಗೂ ಖನ್ನಾ ಒಳ್ಳೆಯ ಬಾಂಧವ್ಯವನ್ನೂ ಹೊಂದಿದ್ದರು. ಖನ್ನಾ ಚುನಾವಣಾ ಸ್ಪರ್ಧೆಗಿಳಿದಾಗ ಕಪಾಡಿಯಾ ಇವರ ಪರ ಪ್ರಚಾರ ಮಾಡಿದ್ದರು ಮತ್ತು 1990ರಲ್ಲಿ ಜೈ ಶಿವ ಶಂಕರ್ ಎಂಬ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು ಕೂಡಾ… ಕೇಳೋದಕ್ಕೆ ಒಂದು ಸ್ವಲ್ಪ ವಿಚಿತ್ರವಾದರೂ ಇದು ಸತ್ಯ…

ಹೀಗೆ ಕೊನೆಗಾಲದಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಖನ್ನಾರನ್ನು ನೋಡುತ್ತಿದ್ದದ್ದು ಕೂಡಾ ಇದೇ ಡಿಂಪಲ್ ಕಪಾಡಿಯಾ… ಆದರೆ, ಯಾವಾಗ ಖನ್ನಾ ವಿಧಿವಶರಾದರೋ ಆಗ ಒಬ್ಬಾಕೆ ಬಂದಿದ್ದರು… ಆಕೆಯೇ, ಅನಿತಾ ಅಡ್ವಾಣಿ…

ಡಿಂಪಲ್​ ದೂರವಾದ ಬಳಿಕ ಆಶಿರ್ವಾದ್​ ಬಂಗಲೆಯಲ್ಲಿ ರಾಜೇಶ್ ಖನ್ನಾ ಜೊತೆ ಲಿವಿಂಗ್ ಇನ್ ಪಾರ್ಟನರ್ ಆಗಿದ್ದೆ ಎಂಬುದು ಅನಿತಾ ಅಡ್ವಾನಿ ವಾದ… ಅಲ್ಲದೆ, ಖನ್ನಾರ ಆಶೀರ್ವಾದ್​ ಬಂಗಲೆ ತನಗೆ ಸೇರಿದ್ದು ಎಂಬುದು ಕೂಡಾ ಅನಿತಾ ಮಾತು… ಇದೇ ವಾದಕ್ಕೆ ಅಂಟಿಕೊಂಡಿದ್ದ ಅನಿತಾ ಡಿಂಪಲ್​ ಕುಟುಂಬಕ್ಕೆ ಪರಿಹಾರ ಕೇಳಿ ಲೀಗಲ್ ನೊಟೀಸ್ ಕೂಡಾ ಕಳುಹಿಸಿದ್ದರು… ಆದರೆ, ಅನಿತಾ ವಾದವನ್ನು ಡಿಂಪಲ್ ಕಪಾಡಿಯಾ ಸಂಪೂರ್ಣವಾಗಿ ತಳ್ಳಿ ಹಾಕಿದ್ದರು… ಈ ಕೇಸ್​ ಈಗ ಕೋರ್ಟ್​ ಮೆಟ್ಟಿಲೇರಿದ್ದು ಆಸ್ತಿಗಾಗಿ ಅನಿತಾ ಮತ್ತು ಡಿಂಪಲ್​ ಇಬ್ಬರೂ ಹೊಡೆದಾಡಿಕೊಳ್ಳುತ್ತಿದ್ದಾರೆ… ಸುಪ್ರೀಂಕೋರ್ಟ್​ನಲ್ಲಿ ಈ ಕೇಸ್​ ಇದೆ… ಅನಿತಾ ಪ್ರಕಾರ ಡಿಂಪಲ್​ ಖನ್ನಾರನ್ನು ತೊರೆದಿದ್ದರು. ಈ ಸಂದರ್ಭದಲ್ಲಿ ತಾನು ಖನ್ನಾರ ಜೊತೆಗಿದ್ದೆ ಎನ್ನುವುದು. ಆದರೆ, ಡಿಂಪಲ್​ ಮಾತ್ರ ನಾನು ಯಾವುತ್ತೂ ಖನ್ನಾರಿಂದ ದೂರವಾಗಿಯೇ ಇರಲಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ…

ಡೌಡೇ ಬೇಡ. ಇದು ಮುಂಬೈಯಲ್ಲಿರುವ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಜಟಾಪಟಿ. ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಅಡಿಯಲ್ಲಿ ಆ ಬಂಗಲೆಯ ಹಕ್ಕು ತಮ್ಮದು ಎಂಬುದು ಅನಿತಾ ವಾದ. ಈ ವಾದ ಡಿಂಪಲ್ ಕಪಾಡಿಯಾ ಮತ್ತು ಕುಟುಂಬವನ್ನು ಕಂಗೆಡಿಸಿದೆ. ಆದರೆ, ತಮ್ಮ ವಾದವನ್ನು ಮುಂದುವರಿಸಿರುವ ಅನಿತಾ ತನಗೆ ಡಿಂಪಲ್ ಕಪಾಡಿಯಾ ಅವರ ಮಗಳು ಟ್ವಿಂಕಲ್, ಅಳಿಯ ಅಕ್ಷಯ್ ಕುಮಾರ್​ ಪ್ರತಿ ತಿಂಗಳು ಜೀವನಾಂಶ ಕೊಡಬೇಕು ಎಂದು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದು, ಈ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!