Tuesday , February 19 2019
ಕೇಳ್ರಪ್ಪೋ ಕೇಳಿ
Home / Mumbai Mail / ಡೊಂಬಿವಲಿಯಲ್ಲಿ ನಾಲ್ಕು ಎಟಿಎಂ ದೋಚಿದ್ದವರು ಬೆಂಗಳೂರಿನಲ್ಲಿ ಸೆರೆ…!

ಡೊಂಬಿವಲಿಯಲ್ಲಿ ನಾಲ್ಕು ಎಟಿಎಂ ದೋಚಿದ್ದವರು ಬೆಂಗಳೂರಿನಲ್ಲಿ ಸೆರೆ…!

ಮುಂಬೈ : ಇದೇ ವರ್ಷದ ಮೇ ತಿಂಗಳಿನಲ್ಲಿ ಡೊಂಬಿವಲಿಯಲ್ಲಿ ನಾಲ್ಕು ಎಟಿಎಂ ದೋಚಿ ಮಜಾ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಕಬ್ಬನ್​ ಪಾರ್ಕ್​ ಸಮೀಪ ಸೆರೆ ಹಿಡಿಯಲಾಗಿದೆ. ನಾಲ್ಕು ಎಟಿಎಂ ಕೇಂದ್ರಗಳಲ್ಲಿ ಸುಮಾರು 34 ಲಕ್ಷ ರೂಪಾಯಿ ದೋಚಿದ್ದ ಈ ಆರೋಪಿಗಳು ಮೂರು ತಿಂಗಳ ಕಾಲ ತಲೆಮರೆಸಿಕೊಂಡಿದ್ದರು. ದೋಚಿದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿ ಕೊನೆಗೆ ಬೆಂಗಳೂರಿನ ಐಷಾರಾಮಿ ಹೊಟೇಲ್​ನಲ್ಲಿ ಒಂದು ತಿಂಗಳಿಂದ ವಾಸ್ತವ್ಯ ಹೂಡಿದ್ದರು.

ದೋಚಿದ್ದ ಬಹುಪಾಲು ಹಣವನ್ನು ಖರ್ಚು ಮಾಡಿದ್ದ ಈ ಮೂವರು ಆರೋಪಿಗಳಿಂದ ಪೊಲೀಸರು ನಾಲ್ಕು ಲಕ್ಷ ರೂಪಾಯಿಯಷ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ರಾಕೇಶ್ ಪವಾರ್​ (24), ನಯನ್ ಬನ್ಸಾಲಿ (24) ಮತ್ತು ಜ್ಯೋತಿಷ್​​ ಗುಪ್ತಾ (22) ಎಂದು ಗುರುತಿಸಲಾಗಿದೆ. ಈ ಮೂವರು ಮೇ 26 ರಂದು ಡೊಂಬಿವೆಲಿಯಲ್ಲಿ ನಾಲ್ಕು ಎಟಿಎಂ ದೋಚಿ ಬಳಿಕ ವಿಮಾನದ ಮೂಲಕ ದೆಹಲಿಗೆ ತೆರಳಿ ಅಲ್ಲಿ ವಿವಿಧ ಭಾಗಗಳ ಸುತ್ತಾಟ ನಡೆಸಿದ್ದರು.

ಕಬ್ಬನ್​ ಪಾರ್ಕ್​ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿ ಈ ಮೂವರನ್ನು ಬಂಧಿಸಿದ್ದಾರೆ. ಈ ಮೂವರು ದಿನವಿಡೀ ಹೊಟೇಲ್​ನಲ್ಲಿ ತಂಗಿ ರಾತ್ರಿ ಹೊತ್ತು ಕ್ಯಾಬ್ ಮಾಡಿಕೊಂಡು ನಗರ ಸುತ್ತಾಟ ಮಾಡುತ್ತಿದ್ದರು. ಈ ಮಾಹಿತಿಯನ್ನು ಹೊಟೇಲ್​ನ ಸಿಬ್ಬಂದಿ ಪೊಲೀಸರಿಗೆ ನೀಡಿದ ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಇವರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದರು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!