Sunday , February 17 2019
ಕೇಳ್ರಪ್ಪೋ ಕೇಳಿ
Home / Mumbai Mail / ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕ ವೃದ್ಧೆಯ ಅಸ್ಥಿಪಂಜರ : ಡೆತ್​ನೋಟ್​ ಪತ್ತೆ

ಅಪಾರ್ಟ್​ಮೆಂಟ್​ನಲ್ಲಿ ಸಿಕ್ಕ ವೃದ್ಧೆಯ ಅಸ್ಥಿಪಂಜರ : ಡೆತ್​ನೋಟ್​ ಪತ್ತೆ

ಮುಂಬೈ : ಅಂಧೇರಿಯ ಲೋಖಂಡ್​ವಾಲಾದ ಬೆಲ್​ಸ್ಕಾಟ್​ ಟವರ್​ನಲ್ಲಿ ಭಾನುವಾರ ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆ ಆಗಿತ್ತು. ಈ ಅಪಾರ್ಟ್​ಮೆಂಟ್​ನ 10ನೇ ಮಹಡಿಯಲ್ಲಿ ಆಶಾ ಸಹ್ನಿ ಎಂಬುವವರು ಅಸ್ಥಿ ಪಂಜರವಾಗಿ ಸಿಕ್ಕಿದ್ದರು. ಇವರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು.

ಆಸಾ ಸೈನಿ ಅವರ ಮಗ ಋತುರಾಜ್​​ ಅಮೇರಿಕಾದಲ್ಲಿ ವಾಸವಾಗಿದ್ದು ಕಳೆದ ವರ್ಷದಿಂದ ತಾಯಿಯೊಂದಿಗೆ ಸಂಪರ್ಕದಲ್ಲಿ ಇಲ್ಲ. ಇದಾದ ಬಳಿಕ ಇವರು ಒಂಟಿಯಾಗಿಯೇ ಈ ಮನೆಯಲ್ಲಿ ವಾಸವಾಗಿದ್ದರು. ಆದರೆ, ಹಲವು ದಿನಗಳಿಂದ ಆಶಾ ಅವರು ಎಲ್ಲಿಯೂ ಕಾಣಿಸದೇ ಇದ್ದದ್ದರಿಂದ ಅನುಮಾನಗೊಂಡ ಅಪಾರ್ಟ್​ಮೆಂಟ್​ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ಆಶಾ ಅವರ ಮೃತದೇಹ ಸಂಪೂರ್ಣ ಕೊಳೆತು ಹೋಗಿತ್ತು. ಇದಾದ ಬಳಿಕ ಪೋರೆನ್ಸಿಕ್​ ತಜ್ಞರು ಕೂಡಾ ಪರಿಶೀಲನೆ ನಡೆಸಿದ್ದರು.

ಇನ್ನು, ಮೃತದೇಹ ಸಿಕ್ಕಿದ ಬಳಿಕ ಆಶಾ ಅವರ ಕೋಣೆ ತಪಾಸಣೆ ನಡೆಸಿದ್ದ ಪೊಲೀಸರಿಗೆ ಒಂದು ಡೆತ್​ನೋಟ್​ ಸಿಕ್ಕಿದ್ದು, ತಮ್ಮ ಸಾವಿಗೆ ಯಾರೂ ಹೊಣೆಯಲ್ಲ ಎಂದು ಅವರು ಬರೆದಿದ್ದಾಗಿ ಗೊತ್ತಾಗಿದೆ. ಟೇಬಲ್​ನ ಮೇಲಿದ್ದ ಸಣ್ಣ ಲಕೋಟೆಯಲ್ಲಿ ಈ ಡೆತ್​ನೋಟ್​ ಸಿಕ್ಕಿದೆ. ಆಶಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಕೂಡಾ ಮುಂದುವರಿದಿದೆ.

1997ರಲ್ಲಿ ಋತುರಾಜ್ ಅಮೇರಿಕಾಕ್ಕೆ ಹೋಗಿದ್ದು, 2013ರಲ್ಲಿ ಇವರ ಪತಿ ವಿಧಿವಶರಾಗಿದ್ದರು. ಇದಾದ ಬಳಿಕ ಇವರು ಈ ಅಪಾರ್ಟ್​ಮೆಂಟ್​ನಲ್ಲಿ ಒಂಟಿಯಾಗಿಯೇ ವಾಸವಾಗಿದ್ದರು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!