Saturday , December 15 2018
ಕೇಳ್ರಪ್ಪೋ ಕೇಳಿ
Home / Interval / ಅಜಯ್ ದೇವಗನ್ ಲವರ್ ರವೀನಾ ಟಂಡನ್ ಅಕ್ಷಯ್ ಕುಮಾರ್ ಪ್ರೇಯಸಿಯಾಗಿದ್ದೇಗೆ…?

ಅಜಯ್ ದೇವಗನ್ ಲವರ್ ರವೀನಾ ಟಂಡನ್ ಅಕ್ಷಯ್ ಕುಮಾರ್ ಪ್ರೇಯಸಿಯಾಗಿದ್ದೇಗೆ…?

ಬಾಲಿವುಡ್‍ನಲ್ಲಿ ರಿಯಲ್ ಲೈಫ್ ಪ್ರೇಮಕತೆಗಳಿಗೇನು ಕಮ್ಮಿ ಇಲ್ಲ. ಆನ್‍ಸ್ಕ್ರೀನ್‍ನಲ್ಲಿ ಮರಸುತ್ತುವ ಜೋಡಿ ಆಫ್‍ಸ್ಕ್ರೀನ್‍ನಲ್ಲೂ ಮಿಂಚುವುದು ಹೊಸದೇನು ಅಲ್ಲ. ಇದರಲ್ಲಿ ಅಜಯ್ ದೇವಗನ್ ಮತ್ತು ರವೀನಾ ಟಂಡನ್ ಪ್ರೇಮಕತೆಯೂ ಒಂದು. ಒಂದು ಕಾಲದಲ್ಲಿ ಇವರಿಬ್ಬರ ಪ್ರೇಮಕತೆ ಗಾಸಿಪ್ ಕಾಲಂನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು.

90ರ ಮಧ್ಯಭಾಗದಲ್ಲಿ ಇವರ ಪ್ರೇಮಕತೆ ದೊಡ್ಡ ಸುದ್ದಿ. ಆದರೆ, ನಂತರ ಏನಾಯ್ತು ಎಂದು ಗೊತ್ತಿಲ್ಲ. ಈ ಜೋಡಿ ದೂರವಾಗಿ ಹೋಗಿತ್ತು. ಒಂದು ಮೂಲದ ಪ್ರಕಾರ ಇವರಿಬ್ಬರು ದೂರವಾಗುವುದಕ್ಕೆ ಕಾರಣ ಕರಿಷ್ಮಾ ಕಪೂರ್.

ಒಂದು ಹಂತದಲ್ಲಿ ಕರಿಷ್ಮಾ ಕಪೂರ್ ಅಜಯ್‍ಗೆ ತುಂಬಾ ಹತ್ತಿರವಾಗಿದ್ದರು. ಯಾವಾಗ ಅಜಯ್ ದೇವಗನ್ ಲೈಫ್‍ನಲ್ಲಿ ಕರಿಷ್ಮಾ ಬಂದರೋ ರವೀನಾ ವರ್ತನೆ ಬದಲಾಯಿತು. ಒಂದು ಪತ್ರಿಕೆಗೆ ರವೀನಾ ಕೊಟ್ಟ ಸಂದರ್ಶನ ಆ ಟೈಮ್‍ನಲ್ಲಿ ಸಖತ್ ಸುದ್ದಿಯಾಗಿತ್ತು. ಈ ಸಂದರ್ಶನದಲ್ಲಿ ಅಜಯ್ ತನಗೆ ಪ್ರೇಮಪತ್ರಗಳನ್ನೆಲ್ಲಾ ಬರೆದಿದ್ದು, ಬಳಿಕ ಮೋಸ ಮಾಡಿದ್ದಾರೆ ಎಂದು ರವೀನಾ ದೂರಿದ್ದರು. ಇದು ದೊಡ್ಡ ಸುದ್ದಿಯಾಗಿದ್ದೂ ಅಲ್ಲದೆ ಅಜಯ್ ಕೋಪಕ್ಕೆ ಕಾರಣವಾಗಿತ್ತು. ಅಲ್ಲದೆ, ರವೀನಾ ವಿರುದ್ಧ ಆರೋಪಗಳ ಸುರಿಮಳೆಗೈದ ಅಜಯ್, ರವೀನಾ ಮಾನಸಿಕ ಅಸ್ವಸ್ಥೆ, ಮಾನಸಿಕ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು ಎಂದು ಹೇಳಿಕೆ ಕೊಟ್ಟರು. ಇದು ರವೀನಾ ಕೋಪವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ವಾಕ್ಸಮರ ಒಂದು ಹಂತಕ್ಕೆ ಹೇಸಿಗೆಯ ಮಟ್ಟಕ್ಕೆ ಹೋಗಿತ್ತು. ಇದು ಬಾಲಿವುಡ್ ಮಂದಿಗೂ ಶಾಕ್ ತಂದಿತ್ತು.

ಈ ಮಧ್ಯೆ ಕರಿಷ್ಮಾ ಮತ್ತು ಅಜಯ್ ಪ್ರೇಮಕತೆಯೂ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿತ್ತು. ಇದರೊಂದಿಗೆ ರವೀನಾ ಕರಿಷ್ಮಾ ವಿರುದ್ಧವೂ ಹೇಳಿಕೆ ಕೊಡುವುದಕ್ಕೆ ಶುರು ಮಾಡಿದರು. ಕರಿಷ್ಮಾಗೆ ಬಾಲಿವುಡ್‍ನಲ್ಲಿ ಅಭ್ರತೆ ಕಾಡುತ್ತಿದೆ. ಕರಿಷ್ಮಾ ಅಭದ್ರ ನಟಿ ಎಂದು ಟಂಡನ್ ಹೇಳಿದ್ದರು. ಅಲ್ಲದೆ, ಕರಿಷ್ಮಾಗೆ ಒಂದಷ್ಟು ಅವಕಾಶಗಳನ್ನೂ ತಪ್ಪಿಸಿದ್ದರು. ಇದು ಕರಿಷ್ಮಾ ಕೋಪವನ್ನು ಹೆಚ್ಚು ಮಾಡಿತ್ತು. ಈ ಜಗಳ ಎಷ್ಟು ದೊಡ್ಡ ಮಟ್ಟಕ್ಕೆ ಹೋಗಿತ್ತು ಎಂದರೆ ಶಾರೂಖ್ ಖಾನ್ ಆಯೋಜಿಸಿದ್ದ ಹೋಲಿ ಕಾರ್ಯಕ್ರಮದಲ್ಲಿ ಕರಿಷ್ಮಾ ರವೀನಾ ಜೊತೆ ಫೋಟೋ ತೆಗೆಯುವುದಕ್ಕೂ ನಿರಾಕರಿಸಿದ್ದರು. ಇದಕ್ಕೆ ಪ್ರತಿಯಾಗಿ ರವೀನಾ ಕೂಡಾ ಕರೀಷ್ಮಾ ಜೊತೆ ಫೋಟೋ ತೆಗೆಸಿಕೊಳ್ಳುವುದಕ್ಕಿಂತ ಬಿದಿರು ಬಂಬುನೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಉತ್ತಮ ಎಂದು ಹೇಳಿಕೆ ನೀಡಿದ್ದರು. ಇದು ಕೂಡಾ ಆ ಕಾಲದಲ್ಲಿ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು.

ಈ ಎಲ್ಲಾ ಗಲಾಟೆಯ ನಡುವೆ ಅಜಯ್ ದೇವಗನ್ ಪ್ರೊಫೆಷನಲ್ ಗ್ರಾಫ್ ದೊಡ್ಡ ಮಟ್ಟದಲ್ಲೇ ಸಾಗುತ್ತಿತ್ತು. ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಾ ದೇವಗನ್ ಖ್ಯಾತಿಯ ಉತ್ತುಂಗಕ್ಕೇರಿದ್ದರು. ಆದರೆ, ರವೀನಾ ಜೊತೆ ಸಿಟ್ಟಾಗಿದ್ದ ಅಜಯ್ ಟಂಡನ್ ಜೊತೆ ಕೆಲಸ ಮಾಡಲು ನಿರಾಕರಿಸುತ್ತಲೇ ಇದ್ದರು. ಇದು ರವೀನಾಗೆ ಆತಂಕ ತಂದಿತ್ತು. ಅಜಯ್ ಕೋಪ ತನ್ನ ಕೆರಿಯರ್ ಮೇಲೆ ಪ್ರತಿರಿಕ್ತ ಪರಿಣಾಮ ಬೀರುತ್ತದೆ ಎಂದು ಭೀತಿಗೊಂಡ ರವೀನಾರೇ ಜಗಳ ನಿಲ್ಲಿಸಿದರು. ಮೇಲ್ನೋಟಕ್ಕೆ ಜಗಳ ಮರೆತು ಇವರಿಬ್ಬರು ಸ್ನೇಹಿತರಾದರು ಎಂದು ಕಂಡು ಬಂದರೂ ಆಂತರ್ಯದಲ್ಲಿ ಶೀತಲ ಸಮರ ಈಗಲೂ ಇದ್ದೇ ಇದೆ. ಈ ಜಗಳ ಕೊನೆಯಾಗುವ ಹೊತ್ತಿನಲ್ಲಿ ರವೀನಾಗೆ ಅಕ್ಷಯ್ ಕುಮಾರ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಅದೇ ಮೊಹರಾ ಚಿತ್ರ.
ಮೊಹರಾ ರವೀನಾಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಈ ನಡುವೆ, ರವೀನಾ ಅಕ್ಷಯ್‍ಗೂ ಹತ್ತಿರವಾದರು. ಇಲ್ಲಿಂದ ಅಕ್ಷಯ್ ಮತ್ತು ರವೀನಾ ಪ್ರೇಮಕತೆ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುವುದಕ್ಕೆ ಆರಂಭವಾಯ್ತು.
 

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!