Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / Coastalwood / ತೆರೆಗೆ ಬಂದಿದ್ದಾರೆ ‘ಅರೆ ಮರ್ಲೆರ್​​’

ತೆರೆಗೆ ಬಂದಿದ್ದಾರೆ ‘ಅರೆ ಮರ್ಲೆರ್​​’

ಮಂಗಳೂರು : ಬೊಳ್ಳಿ ಮೂವಿಸ್​ನ ಹಾಸ್ಯಮಯ ತುಳು ಚಿತ್ರ ಅರೆ ಮರ್ಲೆರ್​ ಇಂದು ತೆರೆಗೆ ಬಂದಿದೆ. ಚಿತ್ರ ಬಿಡುಗಡೆಗೂ ಮುನ್ನ ಪ್ರಭಾತ್ ಚಿತ್ರಮಂದಿರದ ಎದುರು ಉದ್ಘಾಟನೆ ಕಾರ್ಯಕ್ರಮ ಕೂಡಾ ನಡೆಯಿತು. ಈ ಸಂದರ್ಭದಲ್ಲಿ ಕರಾವಳಿ ಕಾಲೇಜಿನ ನಿರ್ದೇಶಕ ಗಣೇಶ್​ ರಾವ್​, ಫಾದರ್​ ಡೇನಿಸ್ ಡೇಸಾ​, ಸಚ್ಚಿದಾನಂದ ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತು ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು.

ಅರ್ಜುನ್ ಕಾಪಿಕಾಡ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ನವನಾಯಕಿ ನಿಶ್ಮಿತಾ ಹಿರೋಯಿನ್​ ಆಗಿ ಮಿಂಚಿದ್ದಾರೆ. ಇನ್ನು, ಅರವಿಂದ ಬೋಳಾರ್​, ಬೋಜರಾಜ್​ ವಾಮಂಜೂರು, ಶ್ರೀಕೃಷ್ಣ ಕುಡ್ಲ ಸೇರಿದಂತೆ ಹಲವು ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ ಜವಾಬ್ದಾರಿ ಹೊತ್ತಿರುವ ದೇವದಾಸ್​ ಕಾಪಿಕಾಡ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

 

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!