Monday , July 23 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮತ್ತೊಂದು ಮಹಿಳಾ ಸಬಲೀಕರಣದ ಚಿತ್ರ ಮಾಡುತ್ತಿದ್ದಾರೆ ಅಮೀರ್ ಖಾನ್

ಮತ್ತೊಂದು ಮಹಿಳಾ ಸಬಲೀಕರಣದ ಚಿತ್ರ ಮಾಡುತ್ತಿದ್ದಾರೆ ಅಮೀರ್ ಖಾನ್

ಮುಂಬೈ : ಅಮೀರ್ ಖಾನ್ ಬಾಲಿವುಡ್ನಲ್ಲಿ ಸದ್ಯ ಹೊಳೆಯುವ ನಕ್ಷತ್ರ… ಅಮೀರ್ ಮಾಡುವುದು ವರ್ಷಕ್ಕೆ ಒಂದೇ ಚಿತ್ರ… ಆದರೆ, ಮಾಡಿದ ಆ ಚಿತ್ರವೂ ಫರ್ಕೆಕ್ಟ್ ಮತ್ತು ಸುಂದರ… ಇದೇ ಕಾರಣಕ್ಕೆ ಅಮೀರ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುವುದು…

ಅಮೀರ್ ಎಷ್ಟು ಪರ್ಫೆಕ್ಟ್ ಎಂದರೆ ಅವರ ದಂಗಲ್ ಚಿತ್ರವೇ ಸಾಕ್ಷಿ… ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದ ಅಮೀರ್ ಈ ಚಿತ್ರಕ್ಕಾಗಿ ಒಂದು ಇಡೀ ವರ್ಷ ಶ್ರಮ ವಹಿಸಿದ್ದರು. ದೇಹವನ್ನೂ ಪಾತ್ರಕ್ಕೆ ಬೇಕಾಗುವಷ್ಟು ಹುರಿಗೊಳಿಸಿದ್ದರು… ದಂಗಲ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಸಾಧನೆ ಮಾಡಿದ್ದಲ್ಲದೆ ದಾಖಲೆಯನ್ನೂ ಬರೆದಿತ್ತು… ಸಾಗರದಾಚೆಗೂ ದಂಗಲ್ ಸಾಧನೆ ಕಡಿಮೆಯೇನಲ್ಲ… ಚೀನಾದಲ್ಲೂ ಒಳ್ಳೆಯ ಹಣವನ್ನೇ ಗಳಿಸಿತ್ತು ಅಮೀರ್ ಚಿತ್ರ…

ದಂಗಲ್ ಸಕ್ಸಸ್ ಬಳಿಕ ಅಮೀರ್ ಮತ್ತೊಂದು ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಥಗ್ಸ್ ಆಫ್ ಹಿಂದೂಸ್ಥಾನ್ ಎಂಬ ಚಿತ್ರ ಅಮೀರ್ ಕೈಯಲ್ಲಿ ಇದೆ. ಇದರ ನಡುವೆ, ಮತ್ತೊಂದು ಚಿತ್ರದಲ್ಲಿ ಬಾಲಿವುಡ್ನ ಈ ಫರ್ಪೆಕ್ಷನಿಸ್ಟ್ ಬ್ಯುಸಿ ಆಗಿದ್ದಾರೆ. ಇದು ಮಹಿಳಾ ಸಬಲೀಕರಣದ ಚಿತ್ರ… ಆ ಚಿತ್ರವೇ ಸೀಕ್ರೆಟ್ ಸೂಪರ್ಸ್ಟಾರ್…
ಸಮಾಜದಲ್ಲಿ ಗಂಡು ಮತ್ತು ಹೆಣ್ಣಿನ ಸಮಾನತೆಯನ್ನು ಸಾರುವ ಚಿತ್ರ ಇದೆಂದು ಸ್ವತಃ ಅಮೀರ್ ಖಾನ್ ಅವರೇ ಹೇಳಿಕೊಂಡಿದ್ದಾರೆ. ಹಾಗೆ ನೋಡಿದರೆ, ಅಮೀರ್ ಅವರ ದಂಗಲ್ ಚಿತ್ರದಲ್ಲೂ ಇದ್ದ ಧ್ವನಿ ಇದೇ… ಗಾಯಕಿಯಾಗಬೇಕು ಎಂದು ಕನಸು ಕಾಣುವ ಹುಡುಗಿಯ ಸುತ್ತವೇ ಈ ಸೀಕ್ರೆಟ್ ಸೂಪರ್ಸ್ಟಾರ್ ಕತೆ ಸಾಗುತ್ತಿರುತ್ತದೆ. ಜಯಿರಾ ವಾಸಿಂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸೀಕ್ರೇಟ್ ಸೂಪರ್ಸ್ಟಾರ್ ಚಿತ್ರವನ್ನು ಸ್ವತಃ ಅಮೀರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ದಂಗಲ್ ಮತ್ತು ಈ ಚಿತ್ರದಲ್ಲಿ ನಾವು ಒಂದೇ ಸಂದೇಶವನ್ನು ಸಾರುತ್ತಿದ್ದೇವೆ. ಸಮಾಜದಲ್ಲಿ ಹುಡುಗಿಯರನ್ನು ನೋಡುವ ರೀತಿ ಬದಲಾಗಬೇಕು. ಗಂಡು ಹೆಣ್ಣು ಇಬ್ಬರೂ ಸಮಾನರು ಎಂಬ ಅಭಿಪ್ರಾಯ ಗಟ್ಟಿಯಾಗಬೇಕು ಎಂಬ ನಿಟ್ಟಿನಲ್ಲಿಯೇ ಈ ಚಿತ್ರವನ್ನು ಮಾಡುತ್ತಿದ್ದೇವೆ ಎಂದು ಅಮೀರ್ ಹೇಳಿಕೊಂಡಿದ್ದಾರೆ.

ಅದ್ವೈತ್ ಚಂದ್ರನ್ ಈ ಚಿತ್ರಕ್ಕೆ ಕತೆ ಬರೆದಿದ್ದು ನಿರ್ದೇಶನ ಮಾಡುತ್ತಿದ್ದಾರೆ. ಅಮೀರ್ ಸಂಗೀತ ನಿರ್ದೇಶಕನ ಪಾತ್ರ ನಿರ್ವಹಿಸುತ್ತಿದ್ದು, ದೀಪಾವಳಿ ಸಂದರ್ಭದಲ್ಲಿ ಚಿತ್ರ ರಿಲೀಸ್ ಆಗಲಿದೆ. ಇದೊಂದು ಮ್ಯೂಸಿಕಲ್ ಡ್ರಾಮಾ ಆಗಿದ್ದು ಅಮೀರ್ ಈ ಚಿತ್ರದ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಈ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದ್ದು, ಸಖತ್ ಹಿಟ್ಸ್ ಗಿಟ್ಟಿಸಿದೆ. ದಂಗಲ್ನಲ್ಲಿ ಅಮೀರ್ ಖಾನ್ ಪುತ್ರಿ ಪಾತ್ರ ನಿರ್ವಹಿಸಿದ್ದ ಝಯಿರಾ ವಾಸಿಂ ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರೇ ಚಿತ್ರದ ತುಂಬಾ ಆವರಿಸಿಕೊಂಡಿರುತ್ತಾರೆ… ಒಂದರ್ಥದಲ್ಲಿ ಇಲ್ಲಿ ಅಮೀರ್ ಬದಲಾಗಿದೆ ಝಯಿರಾ ಸೂಪರ್ಸ್ಟಾರ್ ಆಗಿದ್ದಾರೆ…

ಈ ಚಿತ್ರದ ಜೊತೆ ಜೊತೆಗೆ ಥಗ್ಸ್ ಆಫ್ ಹಿಂದೂಸ್ಥಾನ್ ಎಂಬ ಚಿತ್ರದಲ್ಲೂ ಅಮೀರ್ ಬ್ಯುಸಿ. ಷೆಹನ್ ಷಾ ಅಮಿತಾಭ್ ಬಚ್ಚನ್ ಜೊತೆ ಅಮೀರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಇಬ್ಬರು ನಾಯಕರು ಒಂದಾಗುತ್ತಿದ್ದಾರೆ. ಇದು ಕೂಡಾ ಅಭಿಮಾನಿಗಳಲ್ಲಿ ಸಖತ್ ಸಂತಸ ಮೂಡಿಸಿದೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!