Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Tollywood / ರಾಣಾ ಒಡೆತನದ ಚಿತ್ರಮಂದಿರ ಉದ್ಘಾಟನೆಗೂ ಮುನ್ನವೇ ಬೆಂಕಿಗಾಹುತಿ

ರಾಣಾ ಒಡೆತನದ ಚಿತ್ರಮಂದಿರ ಉದ್ಘಾಟನೆಗೂ ಮುನ್ನವೇ ಬೆಂಕಿಗಾಹುತಿ

ಅಮರಾವತಿ: ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಕುಟುಂಬದ ಒಡೆತನದ ಚಿತ್ರಮಂದಿರ ಉದ್ಘಾಟನೆಗೆ ಮುನ್ನವೇ ಬೆಂಕಿಗಾಹುತಿಯಾಗಿದೆ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಚೀರಾಲ ನಗರದಲ್ಲಿ ಇರುವ ಸುರೇಶ್​ ಮಹಲ್​ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಈ ಹಿಂದೆ ಇದ್ದ ಚಿತ್ರಮಂದಿರವನ್ನು ಆರು ತಿಂಗಳ ಹಿಂದಷ್ಟೇ ಮುಚ್ಚಿ ನವೀಕರಣ ಮಾಡಲಾಗಿತ್ತು. ಅಲ್ಲದೆ, ಆಧುನಿಕ ಸೌಲಭ್ಯವನ್ನೂ ಅಳವಡಿಸಲಾಗಿತ್ತು. ಜೊತೆಗೆ ಉದ್ಘಾಟನೆಗೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಈ ಸಂಭ್ರಮಕ್ಕೆ ಮುಂಚೆಯೇ ಇಲ್ಲಿ ದುರಂತ ನಡೆದು ಹೋಗಿದೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!