Wednesday , March 27 2019
ಕೇಳ್ರಪ್ಪೋ ಕೇಳಿ
Home / Sandalwood / ನಾಳೆ ಉಪೇಂದ್ರ ರಾಜಕೀಯ ಪ್ರವೇಶ…? : ಎಲ್ಲಾ ಪಕ್ಷದಿಂದಲೂ ಉಪ್ಪಿಗೆ ಗಾಳ!

ನಾಳೆ ಉಪೇಂದ್ರ ರಾಜಕೀಯ ಪ್ರವೇಶ…? : ಎಲ್ಲಾ ಪಕ್ಷದಿಂದಲೂ ಉಪ್ಪಿಗೆ ಗಾಳ!

ಬೆಂಗಳೂರು : ಆಗೊಮ್ಮೆ ಈಗೊಮ್ಮೆ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ಈಗ ಅಧಿಕೃತವಾಗಿಯೇ ರಾಜಕೀಯಕ್ಕೆ ಬರುತ್ತಾರಾ…? ಹೀಗೊಂದು ಮಾತುಗಳು ಈಗ ಬಲವಾಗಿಯೇ ಕೇಳಿ ಬರುತ್ತಿದೆ, ಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬೋದಾದರೆ ನಾಳೆ ಉಪೇಂದ್ರ ರಾಜಕೀಯಕ್ಕೆ ಪ್ರವೇಶಿಸುತ್ತಾರಂತೆ. ಇದಕ್ಕೆ ಸರಿಯಾಗಿ ಸಂಜೆ ನಾಲ್ಕು ಗಂಟೆಗೆ ಉಪ್ಪಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದು ಕೂಡಾ ಕುತೂಹಲ ಮೂಡಿಸಿದೆ.

ಉಪ್ಪಿ ಯಾವ ಪಕ್ಷ ಸೇರುತ್ತಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ನಡುವೆ, ನಾಳೆ ನಡೆಯುವ ಬಿಜೆಪಿ ಚಿಂತನಾ ಸಮಾವೇಶಕ್ಕೆ ಉಪೇಂದ್ರಗೆ ಆಹ್ವಾನ ನೀಡಲಾಗಿದೆಯಂತೆ. ಅದೂ ಅಲ್ಲದೆ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಜೊತೆ ಪ್ರತ್ಯೇಕ ಸಭೆಯೂ ನಿಗದಿಯಾಗಿದೆ ಅಂತ ಹೇಳಲಾಗುತ್ತಿದೆ. ಇದನ್ನೆಲ್ಲಾ ನೋಡಿದಾಗ ಉಪೇಂದ್ರ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ಬಿಜೆಪಿಯಷ್ಟೇ ಅಲ್ಲದೆ ಬೇರೆ ಪಕ್ಷಗಳು ಕೂಡಾ ಉಪೇಂದ್ರರಿಗೆ ಗಾಳ ಹಾಕುತ್ತಿವೆ.

ಆದರೆ, ಉಪೇಂದ್ರದ ಮುಂದಿನ ಹೆಜ್ಜೆ ಏನು ಎಂಬುದು ನಾಳೆ ಗೊತ್ತಾಗಲಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!