Sunday , December 16 2018
ಕೇಳ್ರಪ್ಪೋ ಕೇಳಿ
Home / News NOW / ಅತೀ ಪ್ರೀತಿಯೇ ಬದುಕಿಗೆ ಮುಳುವು : ಆತ್ಮಹತ್ಯೆಗೂ ಮುನ್ನ ಡಿಸಿ ವೀಡಿಯೋ

ಅತೀ ಪ್ರೀತಿಯೇ ಬದುಕಿಗೆ ಮುಳುವು : ಆತ್ಮಹತ್ಯೆಗೂ ಮುನ್ನ ಡಿಸಿ ವೀಡಿಯೋ

ಗಾಜಿಯಾಬಾದ್‌ : ಉತ್ತರ ಪ್ರದೇಶದ ಗಾಜಿಯಾಬಾದ್​​ನಲ್ಲಿ ಗುರುವಾರ ನಡೆದಿದ್ದ ಬಕ್ಸರ್​ ಜಿಲ್ಲಾಧಿಕಾರಿ ಮುಕೇಶ್ ಪಾಂಡೆ ಆತ್ಮಹತ್ಯೆ ಪ್ರಕರಣ ಎಲ್ಲರಿಗೂ ದಿಗ್ಭ್ರಮೆ ತಂದಿದೆ. ಈ ನಡುವೆ, ಮುಕೇಶ್ ಆತ್ಮಹತ್ಯೆಗೆ ಕಾರಣ ಏನು ಎಂಬ ಕುರಿತಾದ ಮಹತ್ವದ ವೀಡಿಯೋ ದೊರೆತಿದೆ, ಆತ್ಮಹತ್ಯೆಗೂ ಮುನ್ನ ಸ್ವತಃ ಮುಕೇಶ್ ಅವರೇ ಈ ವೀಡಿಯೋ ಮಾಡಿದ್ದು, ತಮ್ಮ ಆತ್ಮಹತ್ಯೆ ನಿರ್ಧಾರ ಕಾರಣವನ್ನು ಹೇಳಿಕೊಂಡಿದ್ದಾರೆ…

ತಾಯಿ ಮತ್ತು ಪತ್ನಿ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಈ ಅತಿ ಪ್ರೀತಿ ನನ್ನ ಬದುಕಿಗೆ ಮುಳುವಾಗಿತ್ತು. ಈ ಅತಿ ಪ್ರೀತಿಯಿಂದ ನನ್ನ ಹೆತ್ತವರು ಹಾಗೂ ಪತ್ನಿ ನಡುವೆ ಜಗಳ ಆಗುತ್ತಿತ್ತು. ಇದನ್ನು ಸರಿದೂಗಿಸಲಾರದೆ ನಾನು ಇಂತಹ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮುಕೇಶ್ ಈ ವೀಡಿಯೋದಲ್ಲಿ ಹೇಳಿದ್ದಾರೆ. ಸುಮಾರು 5 ನಿಮಿಷದ ವೀಡಿಯೋ ಇದು. ಇಲ್ಲಿ ತನ್ನ ಮಗಳ ಬಗ್ಗೆಯೂ ಮುಕೇಶ್ ಮಾತನಾಡಿದ್ದಾರೆ.

ಗಾಜಿಯಾಬಾದ್ ಜಂಕ್ಷನ್​ನ ಸಮೀಪದ ರೈಲು ಹಳಿ ಪಕ್ಕ ಮುಕೇಶ್ ಮೃತದೇಹ ಪತ್ತೆಯಾಗಿತ್ತು. ಇಲ್ಲೇ ಡೆತ್​ನೋಟ್​ ಕೂಡಾ ಪೊಲೀಸರಿಗೆ ಸಿಕ್ಕಿತ್ತು.

ಗುವಾಹಟಿ ಮೂಲದ ಮುಕೇಶ್‌ 2012ನೇ ಬ್ಯಾಚ್‌ನ ಐಎಎಸ್‌ಅಧಿಕಾರಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇವರು 14ನೇ ರ‍್ಯಾಂಕ್ ಪಡೆದಿದ್ದರು. ಜುಲೈ 31ರಂದು ಬಿಹಾರದ ಬಕ್ಸರ್‌ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಇದಾದ ಒಂದೇ ತಿಂಗಳಲ್ಲಿ ಇವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!