Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಉಪೇಂದ್ರ ರಾಜಕೀಯಕ್ಕೆ ಸೇರುವುದು ಖಚಿತ : ಸಲಹೆ ಪಡೆಯಲು 3 ಇಮೇಲ್​ ಐಡಿ ರೆಡಿ

ಉಪೇಂದ್ರ ರಾಜಕೀಯಕ್ಕೆ ಸೇರುವುದು ಖಚಿತ : ಸಲಹೆ ಪಡೆಯಲು 3 ಇಮೇಲ್​ ಐಡಿ ರೆಡಿ

ಬೆಂಗಳೂರು : ರಿಯಲ್​ ಸ್ಟಾರ್ ಉಪೇಂದ್ರ ರಾಜಕೀಯ ಪ್ರವೇಶ ಮಾಡುವುದು ಖಚಿತವಾಗಿದೆ. ಉಪೇಂದ್ರ ಅವರೇ ಈ ವಿಷಯವನ್ನು ಇಂದು ಸ್ಪಷ್ಟಪಡಿಸಿದ್ದು, ಇಷ್ಟು ದಿನ ಉಪ್ಪಿ ರಾಜಕೀಯ ಎಂಟ್ರಿ ಬಗ್ಗೆ ಇದ್ದ ಕುತೂಹಲ, ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಬೆಂಗಳೂರು ಹೊರವಲಯದ ತಾವರೆಕೆರೆ ಸಮೀಪದ ರುಪ್ಪೀಸ್​ ರೆಸಾರ್ಟ್​ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ತಮ್ಮ ಭವಿಷ್ಯ ಯೋಜನೆಗಳ ಬಗ್ಗೆ ಹಂಚಿಕೊಂಡರು ಮತ್ತು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂಬುದನ್ನೂ ಖಚಿತಪಡಿಸಿದರು.

ಉಪೇಂದ್ರ ರಾಜಕೀಯ ಪಕ್ಷ ಕಟ್ಟವುದು ಖಚಿತ. ಆದರೆ, ಈಗಲೇ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಪಕ್ಷದ ಹೆಸರು, ಅದರ ಚಿಹ್ನೆ ಬಗ್ಗೆ ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ. ಚುನಾವಣಾ ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಅಲ್ಲಿಂದ ಸಮ್ಮಿತಿ ಸಿಕ್ಕ ಬಳಿಕ ಅಧಿಕೃತವಾಗಿ ಪಕ್ಷದ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಜೊತೆಗೆ, ತಾನು ಕಟ್ಟುವ ಪಕ್ಷದಲ್ಲಿ ಸಮರ್ಥರಿಗೆ ಮಾತ್ರ ಮಣೆ ಎಂದೂ ಉಪ್ಪಿ ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

ಇನ್ನು, ಪಕ್ಷಕ್ಕೆ ಬರುವವರಿಗಾಗಿ, ಸಲಹೆ ಸೂಚನೆ ಕೊಡುವರಿಗೆ ಮೂರು ಜಿ ಮೇಲ್​ ಖಾತೆಗಳನ್ನು ತೆರೆಯಲಾಗಿದೆ. ಪಕ್ಷಕ್ಕೆ ಬರುವವರು, ಸ್ವ ವಿವರ, ಹೊಸ ಐಡಿಯಾಗಳನ್ನು, ಯೋಜನೆಗಳನ್ನು, ಹೊಸ ಆಲೋಚನೆಗಳನ್ನು ಇ ಮೇಲ್ ಐಡಿ : Prajakarana1@gmail.com, Prajakarana2@gmail.com  ಮತ್ತು prajakarana3@gmail.comಯಲ್ಲಿ  ಹಂಚಿಕೊಳ್ಳಬಹುದು ಎಂದು ಉಪೇಂದ್ರ ತಿಳಿಸಿದ್ದಾರೆ.

 

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!