Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಜೆಡಿಯುನಲ್ಲಿ ಆಂತರಿಕ ಕಲಹ : ರಾಜ್ಯಸಭಾ ನಾಯಕನ ಸ್ಥಾನದಿಂದ ಯಾದವ್​ ವಜಾ

ಜೆಡಿಯುನಲ್ಲಿ ಆಂತರಿಕ ಕಲಹ : ರಾಜ್ಯಸಭಾ ನಾಯಕನ ಸ್ಥಾನದಿಂದ ಯಾದವ್​ ವಜಾ

ನವದೆಹಲಿ : ಮಹಾಮೈತ್ರಿಕೂಟದ ಸಖ್ಯ ತೊರೆದು ಎನ್​ಡಿಎ ಜೊತೆ ಕೈ ಜೋಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಯು ನಡುವಣ ಕಲಹ ಉಲ್ಭಣಗೊಂಡಿದೆ. ಬಿಜೆಪಿ ಸ್ನೇಹ ಬೆಳೆಸಿಕೊಂಡ ನಿತೀಶ್ ವಿರುದ್ಧ ಬಹಿರಂಗವಾಗಿಯೇ ಮುನಿಸಿಕೊಂಡಿದ್ದ ಪಕ್ಷದ ನಾಯಕ ಶರದ್​ ಯಾದವ್​​ ವಿರುದ್ಧ ಜೆಡಿಯು ಪ್ರಹಾರ ಮಾಡಿದೆ. ಅಲ್ಲದೆ, ರಾಜ್ಯಸಭಾ ಜೆಡಿಯು ನಾಯಕನ ಸ್ಥಾನದಿಂದ ಯಾದವ್ ಅವರಿಗೆ ಕೊಕ್ ನೀಡಲಾಗಿದೆ.
 
ಯಾದವ್​ ಅವರಿಂದ ತೆರವಾದ ಸ್ಥಾನಕ್ಕೆ ನಿತೀಶ್ ಕುಮಾರ್ ಆಪ್ತ ಆರ್​ಸಿಪಿ ಸಿನ್ಹಾರನ್ನು ನೇಮಕ ಮಾಡಲಾಗಿದೆ. ಈ ನಡುವೆ, ಎನ್​ಡಿಎ ಜೊತೆ ಸೇರಲು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್​ ಷಾ ನಿತೀಶ್ ಕುಮಾರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
 

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!