Monday , February 18 2019
ಕೇಳ್ರಪ್ಪೋ ಕೇಳಿ
Home / Mumbai Mail / ರಾತ್ರಿ ವೇಳೆ ಮೆಟ್ರೋ 3 ಕಾಮಗಾರಿ ನಡೆಸಬೇಡಿ: ಎಂಎಂಆರ್​ಸಿಎಲ್​ಗೆ ಹೈಕೋರ್ಟ್​ ನಿರ್ದೇಶನ

ರಾತ್ರಿ ವೇಳೆ ಮೆಟ್ರೋ 3 ಕಾಮಗಾರಿ ನಡೆಸಬೇಡಿ: ಎಂಎಂಆರ್​ಸಿಎಲ್​ಗೆ ಹೈಕೋರ್ಟ್​ ನಿರ್ದೇಶನ

ಮುಂಬೈ : ಮೆಟ್ರೋ 3ರ ಕಾಮಗಾರಿಯನ್ನು ರಾತ್ರಿ ಹೊತ್ತು ನಡೆಸದಂತೆ ಮುಂಬೈ ಮೆಟ್ರೋ ರೈಲು ನಿಗಮಕ್ಕೆ ಬಾಂಬೆ ಹೈಕೋರ್ಟ್​ ನಿರ್ದೇಶನ ನೀಡಿದೆ. ಎರಡು ವಾರಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಕಾಮಗಾರಿ ಸೇರಿದಂತೆ ಯಾವುದೇ ಚಟುವಟಿಕೆ ಮಾಡದಂತೆ ಮೆಟ್ರೋ ನಿಗಮಕ್ಕೆ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಮತ್ತು ನ್ಯಾಯಮೂರ್ತಿ ಎನ್​.ಎಂ.ಜಾಮ್ದಾರ್​ ಅವರನ್ನೊಳಗೊಂಡ ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಇನ್ನು, ಈ ಸಂಬಂಧ ಮಹಾರಾಷ್ಟ್ರ ಪರಿಸರ ನಿಯಂತ್ರಣ ಮಂಡಳಿಯ ನಿಲುವನ್ನು ಕೇಳ ಬಯಸುವುದಾಗಿಯೂ ನ್ಯಾಯಪೀಠ ತಿಳಿಸಿದೆ.

ದಕ್ಷಿಣ ಮುಂಬೈ ನಿವಾಸಿ ವಕೀಲ ರೋಬಿನ್​​ ಜೈಸಿಂಘಾನಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ. ರಾತ್ರಿ ವೇಳೆ ಮೆಟ್ರೋ ಕಾಮಗಾರಿ ನಡೆಸುವುದರಿಂದ ಶಬ್ದ ಮಾಲಿನ್ಯದ ಜೊತೆಗೆ ನಿದ್ದೆಗೂ ತೊಂದರೆಯಾಗುತ್ತಿದೆ ಎಂದು ರೋಬಿನ್ ತನ್ನ ಅರ್ಜಿಯಲ್ಲಿ ದೂರಿದ್ದರು.

About sudina

Check Also

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ : ನಾಲ್ಕೈದು ವಿಳಾಸ ನೀಡಿದ್ದಾನೆ ಸಹೋದರ ಇಕ್ಬಾಲ್

ಮುಂಬೈ : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿ ಕುಳಿತಿದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. …

Leave a Reply

Your email address will not be published. Required fields are marked *

error: Content is protected !!