Monday , May 21 2018
Home / Film News / Bollywood / ಆ ನಟಿಗೆ ಅಪಘಾತವಾಗಿತ್ತು, ಜನ ಸೆಲ್ಫಿಗೆ ಮುಗಿ ಬೀಳುತ್ತಿದ್ದರು…!

ಆ ನಟಿಗೆ ಅಪಘಾತವಾಗಿತ್ತು, ಜನ ಸೆಲ್ಫಿಗೆ ಮುಗಿ ಬೀಳುತ್ತಿದ್ದರು…!

ಚಂಡೀಘಡ : ಬಾಲಿವುಡ್ ನಟಿ ನೇಹಾ ದೂಪಿಯಾ ಪ್ರಯಾಣಿಸುತ್ತಿದ್ದ ಕಾರು ಚಂಡೀಘಡದಲ್ಲಿ ಅಪಘಾತಕ್ಕೀಡಾಗಿದೆ. ಪ್ರಚಾರ ಕಾರ್ಯಕ್ಕೆ ತೆರಳಿ ಮುಂಬೈಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಏರ್​ಪೋರ್ಟ್​ಗೆ ಬರುತ್ತಿದ್ದಾಗ ನೇಹಾ ದೂಪಿಯಾ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಪರಿಣಾಮ ಈ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ಈ ಘಟನೆಯಲ್ಲಿ ನೇಹಾ ದೂಪಿಯಾ ಮತ್ತು ಅವರೊಂದಿಗಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸುಮಾರು ಒಂದು ಗಂಟೆಗಳ ಕಾಲ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಸಮಯದಲ್ಲಿ ನೇಹಾ ಕೂಡಾ ರಸ್ತೆಯ ಬದಿಯಲ್ಲೇ ನಿಂತಿದ್ದರು. ಆದರೆ, ಆಗ ಅಲ್ಲೇ ಇದ್ದ ಕೆಲವರು ಸಹಾಯಕ್ಕೆ ಬರುವ ಬದಲು ಸೆಲ್ಫಿಗೆ ಮುಗಿ ಬೀಳುತ್ತಿದ್ದರು.

ಭುಜಕ್ಕೆ ಆದ ಗಾಯದಿಂದ ನೋವಲ್ಲಿ ನರಳುತ್ತಾ ನೇಹಾ ನಿಂತಿದ್ದರೆ ಅವರಿಗೆ ಸಹಾಯ ಮಾಡುವ ಬದಲು ನೇಹಾ ಅವರ ಅನುಮತಿಯೇ ಕೇಳದೆ ಕೆಲವರು ಸೆಲ್ಫಿ ತೆಗೆಯುತ್ತಿದ್ದರು. ಕೆಲವರು ಆಟೋಗ್ರಾಫ್​ ಕೂಡಾ ಕೇಳಿದ್ದರು…! ಆದರೆ, ನೇಹಾ ಮಾತ್ರ ಈ ಘಟನೆಯಿಂದ ಶಾಕ್ ಆಗಿದ್ದು, ಸಂಚರ ಸರಿ ಆಗುವ ವರೆಗೆ ರಸ್ತೆ ಬದಿಯಲ್ಲೇ ಕಾಯುತ್ತಾ ನಿಂತಿದ್ದರು…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!